ಕುಸಿದ ಚಿನ್ನದ ರೇಟ್: ಈಗ್ಲೇ ಖರೀದಿಸಿ ಫಟಾಫಟ್!

By Web DeskFirst Published Nov 23, 2018, 5:12 PM IST
Highlights

ಚಿನ್ನ, ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ! ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯ ಪರಿಣಾಮ! 10 ಗ್ರಾಂ ಶುದ್ಧ ಚಿನ್ನದ ದರದಲ್ಲಿ 160 ರೂ. ಇಳಿಕೆ! ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಾದ ಬೇಡಿಕೆ

ನವದೆಹಲಿ(ನ.23): ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಮಾನಾರ್ಹ ಇಳಿಕೆ ಕಂಡು ಬಂದಿದ್ದು, ಬೇಡಿಕೆ ಹೆಚ್ಚಾದ ಪರಿಣಾಮ ವ್ಯಾಪಾರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ಹೆಚ್ಚಿನ ಮದುವೆ ಸಮಾರಂಭಗಳು, ಸಾಲು ಸಾಲು ಹಬ್ಬಗಳ ಪರಿಣಾಮವಾಗಿ ಭಾರತದಲ್ಲಿ ಚಿನ್ನದ ಬೇಡಿಕೆ ಹೆಚ್ಚಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ವ್ಯಾಪಾರ ಕೂಡ ಜೋರು ಪಡೆದುಕೊಂಡಿದ್ದು, ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ ಎನ್ನಲಾಗಿದೆ.

ಅದರಂತೆ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ ನೋಡುವುದಾದರೆ.. 

10 ಗ್ರಾಂ ಶುದ್ಧ ಚಿನ್ನ(24 ಕ್ಯಾರೆಟ್) ದರ- 32,139 ರೂ.(160 ರೂ. ಇಳಿಕೆ) 
22 ಕ್ಯಾರೆಟ್ 10 ಗ್ರಾಂ ಚಿನ್ನದ ದರ- 30,050 ರೂ.(150 ರೂ. ಇಳಿಕೆ)

ಇನ್ನು ಬೆಳ್ಳಿ ದರದಲ್ಲಿ ಕೂಡ ಇಳಿಕೆ ಕಂಡು ಬಂದಿದ್ದು,  ಬೆಳ್ಳಿ ದರದತ್ತ ಗಮನಹರಿಸುವುದಾದರೆ..

1 ಗ್ರಾಂ ಬೆಳ್ಳಿಯ ಬೆಲೆ-39.94 ರೂ.
1 ಕೆಜಿ ಬೆಳ್ಳಿಯ ಬೆಲೆ-39,942 ರೂ.

ದೀಪಾವಳಿಗೆ ಗುಡ್ ನ್ಯೂಸ್ : ಕುಸಿದ ಚಿನ್ನದ ಬೆಲೆ

ಹಬ್ಬ ಹಿಂಗಾಗ್ಬೇಕು: ಚಿನ್ನದ ದರದಲ್ಲಿ ಭಾರೀ ಇಳಿಕೆ!

click me!