ಲೋಕಸಭೆಯಲ್ಲಿ ಹಣಕಾಸು ಮಸೂದೆ 2023 ಅಂಗೀಕಾರ; ಪ್ರಮುಖ ತಿದ್ದುಪಡಿಗಳೇನು?

Published : Mar 24, 2023, 07:28 PM IST
ಲೋಕಸಭೆಯಲ್ಲಿ ಹಣಕಾಸು ಮಸೂದೆ 2023 ಅಂಗೀಕಾರ; ಪ್ರಮುಖ ತಿದ್ದುಪಡಿಗಳೇನು?

ಸಾರಾಂಶ

ಪ್ರತಿಪಕ್ಷಗಳ ಗದ್ದಲದ ನಡುವೆಯೇ ಹಣಕಾಸು ಮಸೂದೆ 2023 ಲೋಕಸಭೆಯಲ್ಲಿ ಶುಕ್ರವಾರ ಮಂಡನೆಯಾಗಿದ್ದು, ಅನುಮೋದನೆ ಪಡೆದುಕೊಂಡಿದೆ. ಈ ಮಸೂದೆಗೆ 64 ಅಧಿಕೃತ ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಹಣಕಾಸು ಮಸೂದೆಯಲ್ಲಿನ ಅಂಶಗಳು 2023-24ನೇ ಸಾಲಿಗೆ ಅನ್ವಯಿಸಲಿವೆ. 

ನವದೆಹಲಿ (ಮಾ.24): ಕೆಲವು ತಿದ್ದುಪಡಿಗಳ ಜೊತೆಗೆ ಹಣಕಾಸು ಮಸೂದೆ -2023ಕ್ಕೆ ಲೋಕಸಭೆಯಲ್ಲಿ ಇಂದು ಅಂಗೀಕಾರ ದೊರಕಿದೆ. ಅದಾನಿ ಸಮೂಹದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜೆಪಿಸಿ ತನಿಖೆಗೆ ಆಗ್ರಹಿಸಿ ವಿರೋಧ ಪಕ್ಷದ ಸಂಸದರು ಘೋಷಣೆಗಳು ಕೂಗಿ ವಿರೋಧ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ'ಹಣಕಾಸು ಮಸೂದೆ 2023' ಅನ್ನು ಮಂಡಿಸಿದರು. ಫೆ.1ರಂದು ಕೇಂದ್ರ ಬಜೆಟ್ ಜೊತೆಗೆ ಮಂಡನೆಯಾದ ಈ ಹಣಕಾಸು ಮಸೂದೆಗೆ ಹಣಕಾಸು ಸಚಿವೆ 64 ಅಧಿಕೃತ ತಿದ್ದುಪಡಿಗಳನ್ನು ಮಾಡಿದ್ದಾರೆ.ಈ ಹಣಕಾಸು ಮಸೂದೆಯಲ್ಲಿನ ಅಂಶಗಳು 2023-24ನೇ ಸಾಲಿಗೆ ಅನ್ವಯಿಸಲಿವೆ. ಪಿಂಚಣಿ ವ್ಯವಸ್ಥೆಯ ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಉದ್ಯೋಗಿಗಳ ಬೇಡಿಕೆಗಳನ್ನು ಪರಿಹರಿಸಲು ಹಾಗೂ ಸಾಮಾನ್ಯ ನಾಗರಿಕರ ಆರ್ಥಿಕ  ಸಂರಕ್ಷಣೆಗೆ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ. ಇನ್ನು ಲೋಕಸಭೆಯಲ್ಲಿ ಈ ಮಸೂದೆ ಮಂಡನೆ ಸಂದರ್ಭದಲ್ಲಿ ವಿದೇಶಿ ಪ್ರವಾಸದ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಪಾವತಿಗಳು ಮೂಲದಲ್ಲೇ ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿ ಆರ್ ಬಿಐ ಪರಿಶೀಲನೆ ನಡೆಸಲಿದೆ ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ. 

ಸರ್ಕಾರಿ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವಂತೆ ಸರ್ಕಾರಕ್ಕೆ ಬಂದಿರುವ ಮನವಿಗಳನ್ನು ಸ್ವೀಕರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಲೋಕಸಭೆಯಲ್ಲಿ ಗುರುವಾರ 223-24ನೇ ಸಾಲಿಲ್ಲಿ ವೆಚ್ಚಕ್ಕೆ 45ಲಕ್ಷ ಕೋಟಿ ರೂ. ಅನುದಾನ ಬೇಡಿಕೆ ವಿಧೇಯಕವನ್ನು ಅಂಗೀಕರಿಸಲಾಗಿತ್ತು. 

ಏಳನೇ ವೇತನ ಆಯೋಗ: ಸರ್ಕಾರಿ ಉದ್ಯೋಗಿಗಳ ಕನಿಷ್ಠ ವೇತನದಲ್ಲಿ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

ಮಸೂದೆಯಲ್ಲಿ ಏನಿದೆ?
*ಮ್ಯೂಚುವಲ್ ಫಂಡ್ ಗಳು ದೇಶೀಯ ಈಕ್ವಿಟಿಯಲ್ಲಿ ಶೇ.35ಕ್ಕಿಂತ ಕಡಿಮೆ ಮೊತ್ತ ಹೊಂದಿದ್ರೆ ಅವುಗಳಿಗೆ ಇಂಡೆಕ್ಸೇಷನ್ ಸೌಲಭ್ಯಗಳು ಸಿಗೋದಿಲ್ಲ. ಇವುಗಳನ್ನು ಅಲ್ಪಾವಧಿಯ ಕ್ಯಾಪಿಟಲ್ ಗೇನ್ಸ್ ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುವುದು.
*ಸರ್ಕಾರಿ ಬಾಂಡ್, ಸಾಲಪತ್ರ ಇತ್ಯಾದಿಗೆ ಇನ್ಮುಂದೆ ತೆರಿಗೆ ವಿನಾಯಿತಿ ಭಾಗ್ಯವಿಲ್ಲ. ಒಂದು ಮ್ಯೂಚುವಲ್ ಫಂಡ್ ಸಂಸ್ಥೆ ತನ್ನ ಹೂಡಿಕೆದಾರರ ಹಣದಲ್ಲಿ ಶೇ.35ಕ್ಕಿಂತ ಹೆಚ್ಚಿನ ಮೊತ್ತವನ್ನು ದೇಶೀಯ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿದಲ್ಲಿ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ. 
*ಷೇರು ವಹಿವಾಟುಗಳ ಮೇಲಿನ ಎಸ್ ಟಿಟಿ ತೆರಿಗೆಯನ್ನು ಶೇ.25ಕ್ಕೆ ಹೆಚ್ಚಳ ಮಾಡಲಾಗಿದೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿರುವ ಕಂಪನಿಗಳ ಷೇರುಗಳ ಮಾರಾಟ ಮತ್ತು ಖರೀದಿಗೆ ವಿಧಿಸುವ ನೇರ ತೆರಿಗೆಯೇ ಎಸ್ ಟಿಟಿ. ಯಾವುದೇ ಹೂಡಿಕೆದಾರ ಷೇರು ಖರೀದಿಸಿದಾಗ ಅಥವಾ ಮಾರಾಟ ಮಾಡಿದಾಗ ಎಸ್ ಟಿಟಿ ಆವತಿಸಬೇಕು.
*GIFT ನಗರದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕಿಂಗ್ ಶಾಖೆಗಳ ಆದಾಯದ ಮೇಲೆ 10 ವರ್ಷಗಳ ತನಕ ಶೇ.100ರಷ್ಟು ತೆರಿಗೆ ಕಡಿತದ ಪ್ರಯೋಜನ ನೀಡಲಾಗಿದೆ.
*ವಿದೇಶಿ ಕಂಪನಿಗಳು ಗಳಿಸುವ ರಾಯಲ್ಟಿ ಅಥವಾ ತಾಂತ್ರಿಕ ಶುಲ್ಕದ ಮೇಲಿನ ತೆರಿಗೆಯನ್ನು ಶೇ.10ರಿಂದ ಶೇ.20ಕ್ಕೆ ಏರಿಕೆ ಮಾಡಲಾಗಿದೆ.

ಬ್ಯಾಂಕ್ ಎಟಿಎಂಗಳಲ್ಲಿ 2000ರೂ. ನೋಟುಗಳು ಏಕೆ ಸಿಗುತ್ತಿಲ್ಲ? ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ

*ಉಳಿತಾಯದ ಹೊರತಾದ ವಿಮಾ ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
*ಏಂಜೆಲ್ ತೆರಿಗೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸ್ಟಾರ್ಟ್ ಅಪ್ ಗಳಿಗೆ ಯಾವುದೇ ರಿಲೀಫ್ ಸಿಕ್ಕಿಲ್ಲ. 
*ಪ್ರಸ್ತುತ ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆದಾರ ವಾರ್ಷಿಕ 7ಲಕ್ಷ ರೂ. ತನಕ ಆದಾಯ ಹೊಂದಿದ್ರೆ ಆತ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಆದರೆ, ಆತ ಅಥವಾ ಆಕೆ ಆದಾಯ 7,00,100 ಲಕ್ಷ ರೂ. ಇದ್ರೆ 25,010ರೂ. ತೆರಿಗೆ ಪಾವತಿಸಬೇಕು. ಅಂದ್ರೆ 100ರೂ. ಹೆಚ್ಚುವರಿ ಆದಾಯ 25,010ರೂ. ತೆರಿಗೆಗೆ ಕಾರಣವಾಗಲಿದೆ. ಇದಕ್ಕೆ ಸಂಬಂಧಿಸಿ ಯಾವುದೇ ಬದಲಾವಣೆ ಮಾಡಿಲ್ಲ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ