
ನವದೆಹಲಿ(ಸೆ. 22) ಕೇಂದ್ರ ಸರ್ಕಾರದ ನೀತಿಗಳು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಟ್ರೆಂಡ್ ಸಹ ಬದಲಾಗಿದೆ. ಎಫ್‌ಡಿಐ ಒಳಹರಿವು ಹೆಚ್ಚಿದ್ದು ಭಾರತವನ್ನು ಕಂಪನಿಗಳು ಮೆಚ್ಚಿಕೊಂಡಿವೆ. ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಭಾರತವು ಒಟ್ಟು 27.37 ಶತಕೋಟಿ ಡಾಲರ್(ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ. 62 ಹೆಚ್ಚಳ) ಹೂಡಿಕೆ ಪಡೆದುಕೊಂಡಿದೆ. ಎಫ್‌ಡಿಐ ಈಕ್ವಿಟಿ ಒಳಹರಿವು ಶೇ. 112 ಏರಿಕೆಯಾಗಿದೆ.
ಕೊರೋನಾ ಅಬ್ಬರದ ನಡುವೆಯೂ ದೇಶದ ಅರ್ಥ ವ್ಯವಸ್ಥೆ ಸುಧಾರಣೆ
ಆಟೋಮೊಬೈಲ್ ಉದ್ಯಮ ಅಗ್ರ ವಲಯವಾಗಿ ಹೊರಹೊಮ್ಮಿದೆ. 2021-22 ಒಟ್ಟು ಎಫ್‌ಡಿಐ ಈಕ್ವಿಟಿಯ ಒಳಹರಿವಿನ ಶೇ. 23 ಪಾಲನ್ನು ಪಡೆದುಕೊಂಡಿದೆ. ಇನ್ನು ಸಾಫ್ಟ್‌ವೇರ್ ವಲಯ (18%) ಮತ್ತು ಹಾರ್ಡ್‌ವೇರ್ (10%) ನಂತರದ ಸ್ಥಾನದಲ್ಲಿವೆ.
`ಆಟೋಮೊಬೈಲ್ ಉದ್ಯಮ ವಿಚಾರಕ್ಕೆ ಬರುವುದಾದರೆ ಕರ್ನಾಟಕ ದೇಶದಲ್ಲಿ ಅಗ್ರಗಣ್ಯನಾಗಿದೆ. ಹಣಕಾಸು ವರ್ಷದ (2021-22) ಮೊದಲ ನಾಲ್ಕು ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಎಫ್‌ಡಿಐ ಇಕ್ವಿಟಿ ಒಳಹರಿವು ಶೇ. 87 ಹೆಚ್ಚಾಗಿದೆ. ಶೇ. 45 ರಷ್ಟು ಹೂಡಿಕೆ ಕರ್ನಾಟಕದಲ್ಲಿಯೇ ಆಗಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (23%) ಮತ್ತು ದೆಹಲಿ (12%) ಇವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.