
ಮುಂಬೈ(ಮಾ.12) ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಪ್ರಯುಕ್ತ ಜಿಯೋ ಉಚಿತ ಆಫರ್. ಜಿಯೋ ಗ್ರಾಹಕರಿಗೆ 30 ದಿನಗಳ ವ್ಯಾಲಿಟಿಡಿಯ 259 ರೂಪಾಯಿ ಉಚಿತ ರಿಚಾರ್ಜ್ ಆಫರ್ ನೀಡಲಾಗಿದೆ ಅನ್ನೋ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಿಗದಿತ ದಿನಗಳವರಿಗಿನ ಆಫರ್ ಲಾಭ ಪಡೆದುಕೊಳ್ಳಿ ಅನ್ನೋ ಈ ಸಂದೇಶ ಭಾರಿ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಪೋಸ್ಟರ್ ಸುಳ್ಳು ಸಂದೇಶವಾಗಿದೆ. ಕಿಡಿಗೇಡಿಗಳು ಈ ಸುಳ್ಳು ಸಂದೇಶವನ್ನು ಹರಿಬಿಟ್ಟಿದ್ದಾರೆ. ಈ ರೀತಿಯ ಯಾವುದೇ ಆಫರ್ ಜಿಯೋ ಘೋಷಣೆ ಮಾಡಿಲ್ಲ.
ಜಾಮ್ನಗರದಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಆಯೋಜಿಲಾಗಿತ್ತು. 3 ದಿನಗಳ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ದಿಗ್ಗಜರೇ ಪಾಲ್ಗೊಂಡಿದ್ದರು. ಬಹುತೇಕ ಬಾಲಿವುಡ್ ನಟ ನಟಿಯರು ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು. ಇನ್ನು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಸೇರಿದಂತೆ ಹಲವು ದಿಗ್ಗಜರು ಪಾಲ್ಗೊಂಡಿದ್ದರು. ಜುಲೈ 12 ರಂದು ಅನಂತ್ ಅಂಬಾನಿ-ರಾಧಿಕಾ ಮದುವೆ ಸಮಾರಂಭ ನಡೆಯಲಿದೆ. ಇದಕ್ಕಾಗಿ ಜಿಯೋ ಉಚಿತ ಆಫರ್ ಘೋಷಿಸಲಾಗಿದೆ ಅನ್ನೋ ಫೇಕ್ ಸಂದೇಶವನ್ನು ಹರಿಬಿಡಲಾಗಿದೆ.
ಕಾಂಚೀಪುರಂ ಸೀರೆಯಲ್ಲಿ ಕಂಗೊಳಿಸಿದ ನೀತಾ ಅಂಬಾನಿ, ಸ್ಯಾರಿಯಲ್ಲಿದೆ ಅನಂತ್-ರಾಧಿಕಾ ಹೆಸರು!
ಜಿಯೋ ಅಧಿಕೃತ ವೆಬ್‌ಸೈಟ್, ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಆಫರ್ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಉಚಿತ ಜಿಯೋ ರಿಚಾರ್ಜ್ ಸಂದೇಶ ಸತ್ಯಕ್ಕೆ ದೂರವಾಗಿದೆ. ರಿಲಯನ್ಸ್ ಜಿಯೋ ಈ ರೀತಿಯ ಯಾವುದೇ ಆಫರ್ ಘೋಷಣೆ ಮಾಡಿಲ್ಲ ಎಂದು ಜಿಯೋ ಮೂಲಗಳು ಖಚಿತಪಡಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಉಚಿತ ಜಿಯೋ ರಿಚಾರ್ಜ್ ಕುರಿತು ಸಂದೇಶ ಹರಿಬಿಡಲಾಗಿದೆ. ಇದಕ್ಕೆ ಸ್ಕಾಮರ್ಸ್ ಹಲವು ಕಮೆಂಟ್ ಮಾಡಿದ್ದಾರೆ. ನಾನು ಉಚಿತ ರಿಚಾರ್ಜ್ ಮಾಡಿದ್ದೇನೆ. ಧನ್ಯವಾದಗಳು ಜಿಯೋ ಅನ್ನೋ ಹಲವು ಸ್ಕಾಮ್ ಪ್ರತಿಕ್ರಿಯೆಗಳು ಇದರಲ್ಲಿ ಕಾಣಬಹದು. ಸಂದೇಶಗಳ ಕೆಳಗೆ ಉಚಿತ ರಿಚಾರ್ಜ್ ಲಿಂಕ್ ನೀಡಲಾಗಿದೆ. ಈ ಲಿಂಕ್ ಮೂಲಕ ರಿಚಾರ್ಜ್ ಮಾಡಿದರೆ ಕೇವಲ 259 ರೂಪಾಯಿ ಮಾತ್ರವಲ್ಲ, ಖಾತೆಯಲ್ಲಿದ್ದ ಅಷ್ಟೂ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಸ್ಕಾಮ್ ಡಿಟೆಕ್ಟರ್ ಮೂಲಕ ಈ ಲಿಂಕ್ ಚೆಕ್ ಮಾಡಿದಾಗ ಇದರ ಅಸಲಿಯತ್ತು ಬಹಿರಂಗವಾಗಿದೆ.
ಅಬ್ಬಬ್ಬಾ..ಅಂಬಾನಿ ಫ್ಯಾಮಿಲಿ, ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್ ಭರ್ಜರಿ ಭೋಜನಕ್ಕೆ ಖರ್ಚು ಮಾಡಿರೋ ಹಣ ಇಷ್ಟೊಂದಾ?
ಅನಂತ್ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಅತ್ಯಂತ ಅದ್ಧೂರಿ ಕಾರ್ಯಕ್ರಮವಾಗಿತ್ತು. ಇದೀಗ ಮದುವೆ ಅದಕ್ಕಿಂತಲೂ ಅದ್ದೂರಿಯಾಗಿರಲಿದೆ.ಇದಕ್ಕಾಗಿ ಉಚಿತ ರಿಚಾರ್ಜ್, ಉಚಿತ ಆಫರ್ ಸಂದೇಶಗಳಿಂದ ಗ್ರಾಹಕರು ಮರಳಾಗಬಾರದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.