
ನವದೆಹಲಿ(ಮಾ.09): ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕದ ಜಿಲೆಟಿನ್ ಕಡ್ಡಿಗಳನ್ನು ಒಳಗೊಂಡ ಸ್ಕಾರ್ಪಿಯೋ ಕಾರಿನ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ವಹಿಸಿಕೊಂಡಿದೆ.
ಕೇಂದ್ರ ಗೃಹ ಇಲಾಖೆ ಆದೇಶಗಳ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ವಹಿಸಿಕೊಳ್ಳಲಾಗಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
20 ಜಿಲೆಟಿನ್ ಕಡ್ಡಿಗಳನ್ನು ಒಳಗೊಂಡಿದ್ದ ಸ್ಕಾರ್ಪಿಯೋ ಕಾರು ಫೆ.25ರಂದು ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ನಿವಾಸದ ಮುಂದೆ ತಂದು ನಿಲ್ಲಿಸಲಾಗಿತ್ತು. ಈ ಘಟನೆ ನಡೆಯುವ ವಾರದ ಮುಂಚೆಯೇ ತಮ್ಮ ಕಾರು ಕಳ್ಳತನವಾಗಿದೆ ಎಂದು ಆ ಸ್ಕಾರ್ಪಿಯೋ ಮಾಲಿಕ ಹಿರೇನ್ ಮನ್ಸುಖ್ ದೂರು ನೀಡಿದ್ದರು.
ಶುಕ್ರವಾರವಷ್ಟೇ ಹಿರೇನ್ ಅವರು ನಿಗೂಢವಾಗಿ ಸಾವಿಗೀಡಾಗಿದ್ದು, ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಶಕ್ತಿಗಳು ಈ ಸಾವಿನ ಹಿಂದೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.