ಮುಂದಿನ ದಿನಗಳಲ್ಲಿ ಟೊಮೆಟೋ ಬೆಲೆ ಕೇಜಿಗೆ 300 ರೂ?

Published : Jul 15, 2023, 11:35 AM IST
ಮುಂದಿನ ದಿನಗಳಲ್ಲಿ ಟೊಮೆಟೋ ಬೆಲೆ ಕೇಜಿಗೆ 300  ರೂ?

ಸಾರಾಂಶ

ದೇಶದೆಲ್ಲೆಡೆ ಆಗಸಕ್ಕೇರಿರುವ ಟೊಮೆಟೋ ದರ ಮುಂಬರುವ ದಿನಗಳಲ್ಲಿ  ಕೇಜಿಗೆ  300 ರೂಪಾಯಿಗೆ  ತಲುಪುವ ಸಾಧ್ಯತೆ ಇದೆ ಎಂದು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: ದೇಶದೆಲ್ಲೆಡೆ ಆಗಸಕ್ಕೇರಿರುವ ಟೊಮೆಟೋ ದರ ಮುಂಬರುವ ದಿನಗಳಲ್ಲಿ  ಕೇಜಿಗೆ  300 ರೂಪಾಯಿಗೆ  ತಲುಪುವ ಸಾಧ್ಯತೆ ಇದೆ ಎಂದು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾತನಾಡಿದ ರಾಷ್ಟ್ರೀಯ ಸರಕು ಸೇವೆ ನಿರ್ವಹಣಾ ನಿಯಮಿತದ (ಎನ್‌ಸಿಎಂಎಲ್‌) ಮುಖ್ಯಸ್ಥ ಸಂಜಯ್‌ ಗುಪ್ತಾ,‘ಜೂನ್‌ ತಿಂಗಳ ಶುರುವಿನಲ್ಲಿ ಕೇಜಿಗೆ 40 ರು. ಇದ್ದ ಟೊಮೆಟೋ ಬೆಲೆ ಜುಲೈ ಮೊದಲನೇ ವಾರದಲ್ಲಿ 100 ರು. ದಾಟಿ ಕೆಲವು ಭಾಗದಲ್ಲಿ 200ರು.ವರೆಗೆ ತಲುಪಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ದೇಶದ ಉತ್ತರ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ. ಹೀಗಾಗಿ ಬೆಳೆ ಹಾನಿ ಭಾರಿ ಪ್ರಮಾಣದಲ್ಲಿ ಆಗಿದ್ದು ನಷ್ಟವಾಗುತ್ತಿದೆ ಎಂದಿದ್ದಾರೆ.

ಮತ್ತೊಂದೆಡೆ ಕರ್ನಾಟಕ (Karnataka) ಹಾಗೂ ಮಹಾರಾಷ್ಟ್ರದಲ್ಲಿ (Maharashtra) ವೈರಸ್‌ ಸೋಂಕಿಗೆ ಬೆಳೆ ಹಾನಿಯಾಗುತ್ತಿದೆ. ಜೊತೆಗೆ ಕೆಲವೊಂದು ಸ್ಥಳಗಳಲ್ಲಿ ಭಾರಿ ಬಿಸಿಲಿಗೆ ಬೆಳೆಗಳು ನಾಶವಾಗಿದೆ. ಇದಿಷ್ಟಾದರೆ ಹೆಚ್ಚಿನ ರೈತರು ಮುಂದೆ ಬೆಳೆಗೆ ಸರಿಯಾದ ಬೆಲೆ ಸಿಗುವುದೋ ಇಲ್ಲವೋ ಎಂದು ಬಿತ್ತನೆ ಮಾಡುತ್ತಿಲ್ಲ. ಇದೆಲ್ಲ ಕಾರಣಗಳಿಂದ ದೇಶದಲ್ಲಿ ಮುಂದಿನ ದಿನಗಳಲ್ಲಿ ಟೊಮೆಟೋ ಬೆಲೆ 300 ರು. ಆಗುವ ಸಾಧ್ಯತೆ ಇದೆ ಎಂದಿದ್ದಾರೆ.

ಅನುಮತಿ ಇಲ್ಲದೆ ಅಡುಗೆಗೆ 2 ಟೊಮೆಟೊ ಬಳಸಿದ ಪತಿ, ರಂಪಾಟ ಮಾಡಿ ಮನೆಬಿಟ್ಟು ಹೊರಟ ಪತ್ನಿ!

90 ರು.ಗೆ ಟೊಮೆಟೋ ಮರಾಟ ಶುರು: ಒಬ್ಬರಿಗೆ 2 ಕೇಜಿ ಮಾತ್ರ

ಬೆಲೆ ಏರಿಕೆ ತೀವ್ರವಾಗಿರುವುದರಿಂದ  ಕೇಂದ್ರ ಸರ್ಕಾರ (central Govt) ಟೊಮೆಟೋವನ್ನು ರಿಯಾಯ್ತಿ ದರದಲ್ಲಿ, ಅಂದರೆ ಕೇಜಿಗೆ 90 ರು. ಎಂದು ನಿಗದಿಪಡಿಸಿ ಮಾರಾಟ ಮಾಡುವ ಪ್ರಕ್ರಿಯೆ ಶುರು ಮಾಡಿದೆ.  ದಿಲ್ಲಿ ಹಾಗೂ ಉತ್ತರ ಭಾರತದ ಕೆಲವು ನಗರಗಳಲ್ಲಿ ಇದು  ಆರಂಭವಾಗಿದೆ. ಆದರೆ, ದುರುಪಯೋಗ ತಡೆಗೆ ಒಬ್ಬರಿಗೆ ಕೇವಲ 2 ಕೇಜಿ ಎಂದು ಮಿತಿ ನಿಗದಿಪಡಿಸಲಾಗಿದೆ.  ಉತ್ತರ ಭಾರತದಲ್ಲಿ (North India) ಟೊಮೆಟೋಗೆ ಭಾರಿ ಬೇಡಿಕೆ ಇದ್ದು, ದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲಿ ಕೇಜಿಗೆ 200 ರು.ವರೆಗೆ ತಲುಪಿತ್ತು. ಇದಕ್ಕೆ ಅಂಕುಶ ಹಾಕಲು ನಿರ್ಧರಿಸಿದ ಕೇಂದ್ರ ಸರ್ಕಾರ, ನ್ಯಾಫೆಡ್‌ ಹಾಗೂ ಇತರ ಸಹಕಾರಿ ಸಂಘಗಳ ಮೂಲಕ ಉತ್ತರದ ನಗರಗಳಲ್ಲಿ ಟೊಮೆಟೋ ಮಾರಾಟ ಆರಂಭಿಸಿದೆ. ಮೊಬೈಲ್‌ ವ್ಯಾನ್‌ಗಳಲ್ಲಿ ಟೊಮೆಟೋ ಮಾರಲಾಗುತ್ತಿದೆ.

ಟೊಮೆಟೋ ಹೆಚ್ಚು ಬೆಳೆಯುವ ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರಗಳಿಂದ ಟೊಮೆಟೋಗಳನ್ನು ತರಿಸಿಕೊಂಡು ದೇಶದ ಪ್ರಮುಖ ನಗರಗಳಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡಲು ಕೇಂದ್ರ ಇತ್ತೀಚೆಗೆ ನಿರ್ಧರಿಸಿತ್ತು.

ಕೋಲಾರ: ಟೊಮೆಟೋ ಕಳ್ಳತನ ತಪ್ಪಿಸಲು ಹೊಲದಲ್ಲೇ ಟೆಂಟ್‌ ಹಾಕಿದ ರೈತರು..!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!