ಒಂದು ನಿಲ್ದಾಣ ಒಂದು ಉತ್ಪನ್ನ: 71 ರೈಲು ನಿಲ್ದಾಣಗಳಿಗೆ ವಿಸ್ತರಣೆ

By Kannadaprabha News  |  First Published Jun 16, 2022, 3:30 AM IST

*  ಸ್ಥಳೀಯ ಕರಕುಶಲಕ್ಕೆ ಆದ್ಯತೆ
*  ಪ್ರಯಾಣಿಕರನ್ನು ಸುಲಭವಾಗಿ ತಲುಪಲು ಸಾಧ್ಯ
*  ತಮ್ಮ ಉತ್ಪನ್ನಗಳನ್ನು ನಿಲ್ದಾಣ ಮತ್ತುಪ್ಲಾಟ್‌ಫಾರ್ಮ್‌ಗಳಲ್ಲಿಯೂ ಮಾರಾಟ 


ವಿಜಯಪುರ(ಜೂ.16):  ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಗೆ ದೊರಕಿರುವ ಸಕಾರಾತ್ಮಕ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಯೋಜನೆಯನ್ನು ವಿಭಾಗದ ವ್ಯಾಪ್ತಿಯಲ್ಲಿ ಬರುವ ರೈಲು ನಿಲ್ದಾಣಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಹುಬ್ಬಳ್ಳಿ ವಿಭಾಗದ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ, ಭಾರತದ ಶ್ರೀಮಂತ ಪರಂಪರೆ ಅನುಭವವನ್ನು ಪ್ರಯಾಣಿಕರಿಗೆ ದೊರಕಿಸುವ ಮತ್ತು ಸಮಾಜದ ಬಡವರ್ಗದ ಜನರಿಗೆ ಹೆಚ್ಚುವರಿ ಆದಾಯ ಗಳಿಕೆಯ ಅವಕಾಶ ಸೃಷ್ಟಿಸುವ ಗುರಿ ಹೊಂದಿರುವ ಸ್ಥಳೀಯತೆಗೆ ಧ್ವನಿ ಕಾರ್ಯಕ್ರಮದ ಅನುಸಾರ ಹುಬ್ಬಳ್ಳಿ ವಿಭಾಗ ಮುಂದಾಗಿದೆ.

Tap to resize

Latest Videos

ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ವಿಜಯನಗರ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆ, ಗೋವಾದ ದಕ್ಷಿಣ ಗೋವಾ ಜಿಲ್ಲೆ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳ ಒಟ್ಟು 71 ರೈಲು ನಿಲ್ದಾಣಗಳಿಗೆ ವಿಸ್ತರಿಸಲು ಯೋಜಿಸಿದೆ.

ರೈಲ್ವೇ ಮೂಲಕ ವಾಹನ ರವಾನೆ: 174 ಮಿಲಿಯನ್ ಲೀ. ತೈಲ ಉಳಿಸಿದ ಮಾರುತಿ ಸುಜುಕಿ

ಸ್ಥಳೀಯ ಕರಕುಶಲಕ್ಕೆ ಆದ್ಯತೆ:

ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯು ಸ್ಥಳೀಯ ಉತ್ಪನ್ನಗಳು, ಕರಕುಶಲ ವಸ್ತುಗಳಿಗೆ ರೈಲು ನಿಲ್ದಾಣಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಒದಗಿಸುವ ಮೂಲಕ ಉತ್ತೇಜನ ನೀಡುವ ಗುರಿ ಹೊಂದಿದೆ. ಪ್ರತಿಯೊಂದು ನಿಲ್ದಾಣಕ್ಕೂ ಆ ಪ್ರದೇಶಕ್ಕೆ ವಿಶೇಷವಾಗಿರುವ ಕೆಲವು ಸ್ಥಳೀಯ ಉತ್ಪನ್ನಗಳನ್ನು ಅಂದರೆ ಕರಕುಶಲ ವಸ್ತುಗಳು, ಗೊಂಬೆಗಳು, ಬಟ್ಟೆಗಳು ಮತ್ತು ಕೈಮಗ್ಗದ ಉತ್ಪನ್ನಗಳು, ಸಾಂಪ್ರದಾಯಿಕ ಉಡುಗೆಗಳು, ಸ್ಥಳೀಯ ಕೃಷಿ ಉತ್ಪನ್ನಗಳು, ಸಂಸ್ಕರಿಸಿದ/ಅರೆಸಂಸ್ಕರಿಸಿದ ಆಹಾರಗಳು, ಮಸಾಲೆ ಮತ್ತು ಅರಣ್ಯೋತ್ಪನ್ನಗಳು, ಗೋಡಂಬಿ ಮೊದಲಾದ ಉತ್ಪನ್ನಗಳನ್ನು ಗುರುತಿಸಲಾಗಿದೆ.

ಹುಬ್ಬಳ್ಳಿ ವಿಭಾಗ ತನ್ನ ನಿಲ್ದಾಣಗಳಲ್ಲಿ ಈ ಮೇಲ್ಕಂಡ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಪಟ್ಟ ಏಜೆನ್ಸಿಗಳು, ಕುಶಲಕರ್ಮಿಗಳು, ನೇಕಾರರು, ಸ್ವಸಹಾಯ ಸಂಘಗಳು, ಬುಡಕಟ್ಟು ಸಹಕಾರ ಸಂಘಗಳು ಮೊದಲಾದವರಿಂದ ಅರ್ಜಿಗಳನ್ನು ಆಹ್ವಾನಿಸಲು ಉದ್ದೇಶಿಸಿದೆ. ಈ ಮಳಿಗೆಗಳನ್ನು 15 ದಿನಗಳ ಅವಧಿಗೆ ಒದಗಿಸಲಾಗುವುದು. ಈ ಮಳಿಗೆಗಳ ಶುಲ್ಕ ತಲಾ .1000, ಒಂದು ನಿರ್ದಿಷ್ಟ ನಿಲ್ದಾಣಕ್ಕೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದರೆ ಡ್ರಾ ಮೂಲಕ ಅವುಗಳ ಆದ್ಯತಾ ಪಟ್ಟಿಯನ್ನು ತಯಾರಿಸಿ ಒಬ್ಬರ ಬಳಿಕ ಮತ್ತೊಬ್ಬರಂತೆ ಎಲ್ಲ ಅರ್ಜಿದಾರರಿಗೂ ಅವಕಾಶ ನೀಡಲಾಗುವುದು. ಅವರಿಗೆ ಪ್ರಯಾಣಿಕರನ್ನು ಸುಲಭವಾಗಿ ತಲುಪಲು ಸಾಧ್ಯವಾಗುವಂತೆ ಒಂದು ತಾತ್ಕಾಲಿಕ ಮಳಿಗೆ ಒದಗಿಸಲಾಗುವುದು. ಅವರು ತಮ್ಮ ಉತ್ಪನ್ನಗಳನ್ನು ನಿಲ್ದಾಣ ಮತ್ತುಪ್ಲಾಟ್‌ಫಾಮ್‌ರ್‍ಗಳಲ್ಲಿಯೂ ಮಾರಾಟ ಮಾಡಬಹುದು. ಆಸಕ್ತರು ಹುಬ್ಬಳ್ಳಿಯಲ್ಲಿ ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರನ್ನು ಅಥವಾ ಮೊ. 8073562567 ಅಥವಾ 9731668954 ಗೆ ಸಂಪರ್ಕಿಸಬಹುದು.
 

click me!