ಈಗ ಎಲ್ಲದಕ್ಕೂ ಸಾಲವೇನೋ ಸಿಗುತ್ತೆ. ತೆಗೆದುಕೊಳ್ಳೋದೂ ಸುಲಭ. ತೀರಿಸುವ ವಿಷ್ಯ ಬಂದಾಗ ಮೈ ಬೆವರುತ್ತೆ. ಪರ್ಸನಲ್ ಲೋನ್ ಸಿಗುತ್ತೆ ಎನ್ನುವ ಕಾರಣಕ್ಕೆ ಸಾಲ ಪಡೆಯುವ ಮೊದಲು ಅದ್ರ ಬಗ್ಗೆ ಒಂದಿಷ್ಟು ತಿಳಿದುಕೊಂಡಿರಿ.
ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎನ್ನುವ ಮಾತಿದೆ. ಬಹುತೇಕರು ಇದನ್ನು ಚಾಚೂ ತಪ್ಪದೆ ಪಾಲಿಸ್ತಾರೆ. ಮನೆ, ಕಾರು ಸೇರಿದಂತೆ ಐಷಾರಾಮಿ ವಸ್ತುಗಳನ್ನು ಖರೀದಿಸಲು ಕೈನಲ್ಲಿ ಹಣ ಇರೋದಿಲ್ಲ. ಒಂದೇ ಬಾರಿ ಇಷ್ಟೊಂದು ಕ್ಯಾಶ್ ನೀಡೋದು ಕಷ್ಟಸಾಧ್ಯ. ಇಎಂಐ ಸೌಲಭ್ಯ ಇರುವ ಕಾರಣ ಜನರು, ಒಂದೇ ಬಾರಿ ಸಂಪೂರ್ಣ ಹಣವನ್ನು ಡೌನ್ ಪೇಮೆಂಟ್ ಮಾಡುವ ಬದಲು ಇಎಂಐ ಆಯ್ಕೆ ಮಾಡಿಕೊಳ್ತಾರೆ. ಇದಕ್ಕಾಗಿ ಸಾಲದ ಮೊರೆ ಹೋಗ್ತಾರೆ. ಸಾಲ ಎಂದಾಗ ಅದ್ರಲ್ಲಿ ಪರ್ಸನಲ್ ಲೋನ್ ಬರುತ್ತೆ. ವೈಯಕ್ತಿಕ ಸಾಲವನ್ನು ಹಲವು ವಿಧಗಳಲ್ಲಿ ಉತ್ತಮ ಎಂದು ಪರಿಗಣಿಸಲಾಗಿದೆ. ಇಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ನೋಡಲಾಗುತ್ತದೆ. ಪರ್ಸನಲ್ ಲೋನ್ ನಲ್ಲಿ ಲಾಭವೂ ಇದೆ ನಷ್ಟವೂ ಇದೆ. ಹಾಗಾಗಿ ವೈಯಕ್ತಿಕ ಸಾಲ ಖರೀದಿ ಮೊದಲು ಜನರು ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಂಡು ನಂತ್ರ ಸಾಲ ಪಡೆಯಬೇಕು.
ವೈಯಕ್ತಿಕ ಸಾಲ (Personal Loan) ಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಯ ಕ್ರೆಡಿಟ್ (Credit) ಸ್ಕೋರ್, ವಯಸ್ಸು, ಆದಾಯ, ಉದ್ಯೋಗ, ಕಂಪನಿ (Company) ಪ್ರೊಫೈಲ್ ಸೇರಿದಂತೆ ಅನೇಕ ವಿಷ್ಯಗಳನ್ನು ಗಮನಿಸುತ್ತದೆ.
ಭಾರತ ಬಡ ದೇಶವಲ್ಲ ಅಂತ ಈ ಸಿಟಿಯಲ್ಲಿರೋ ಜನರ ನೋಡಿದ್ರೆ ಗೊತ್ತಾಗುತ್ತೆ, ಎಲ್ಲರೂ ದುಡ್ಡಿರೋರೇ ಇಲ್ಲಿರೋದು!
ನಿಮ್ಮ ಸಂಬಳ 15 ಸಾವಿರದಿಂದ 20 ಸಾವಿರವಿದ್ರೆ ಬ್ಯಾಂಕ್ ನಿಮಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ. ನಿಮ್ಮ ಸಂಬಳಕ್ಕೆ ತಕ್ಕಂತೆ ಸಾಲದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. 60 ವರ್ಷದೊಳಗಿನ ವ್ಯಕ್ತಿಗೆ ಬ್ಯಾಂಕ್ ಸಾಲ ನೀಡಲು ಒಪ್ಪಿಗೆ ನೀಡೋದು ಹೆಚ್ಚು. ಸಾಲ ತೀರಿಸಲು ನೀವು ಅರ್ಹವಾಗಿದ್ದೀರಾ ಎಂಬುದನ್ನು ಬ್ಯಾಂಕ್ ಗಮನಿಸುತ್ತದೆ. ನೀವು ಕನಿಷ್ಠ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರೆ ಆಗ ಕಂಪನಿ ನಿಮಗೆ ಸಾಲ ನೀಡಲು ಮುಂದಾಗುತ್ತದೆ.
ವೈಯಕ್ತಿಕ ಸಾಲ ಪಡೆಯುವ ಮುನ್ನ ಇದು ತಿಳಿದಿರಿ : ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ವೈಯಕ್ತಿಕ ಸಾಲ ಪಡೆಯುತ್ತೀರಾದ್ರೂ ಕೆಲವೊಂದು ಸಂದರ್ಭದಲ್ಲಿ ಇದನ್ನು ಪಡೆಯದಿರುವುದು ಒಳ್ಳೆಯದು. ಉದಾಹರಣೆಗೆ ರಜಾ ದಿನಗಳಲ್ಲಿ ಮನರಂಜನೆಗಾಗಿ, ಪ್ರವಾಸಕ್ಕಾಗಿ, ಷೇರು ಮಾರುಕಟ್ಟೆಯಲ್ಲಿ ಅಥವಾ ವ್ಯವಹಾರದಲ್ಲಿ ಹೂಡಿಕೆ ಮಾಡಲು ನೀವು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬೇಡಿ.
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದೆ ಅಂದ್ರೆ ನಿಮಗೆ ಸಾಲ ಸಿಗೋದಿಲ್ಲ ಎಂದಲ್ಲ. ಹಾಗೆಯೇ ನೀವು ಬೇರೆ ಗೃಹ ಸಾಲ, ವಾಹನ ಸಾಲ ಹೊಂದಿದ್ದರೂ ನಿಮಗೆ ವೈಯಕ್ತಿಕ ಸಾಲ ಸಿಗುತ್ತದೆ.
ನೀವು ಸಾಲ ಪಡೆಯುವ ಮುನ್ನ ಬಡ್ಡಿ ದರದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಬಡ್ಡಿ ದರ ಕಡಿಮೆ ಇದ್ದ ಬ್ಯಾಂಕ್ ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿ. ಬ್ಯಾಂಕ್ ಸಾಲ ತೀರಿಸಲು ಯಾವೆಲ್ಲ ನಿಯಮ ಹೊಂದಿದೆ ಎಂಬುದನ್ನು ನೀವು ತಿಳಿಯಬೇಕು. ಬ್ಯಾಂಕ್ ನ ಟ್ರ್ಯಾಕ್ ರೆಕಾರ್ಡ್ ಬಗ್ಗೆಯೂ ನಿಮಗೆ ಮಾಹಿತಿ ಇರುವುದು ಅಗತ್ಯವಾಗುತ್ತದೆ.
ವೈಯಕ್ತಿಕ ಸಾಲವನ್ನು ಬ್ಯಾಂಕ್ ನೀಡುತ್ತೆ ಎನ್ನುವ ಕಾರಣಕ್ಕೆ ಪಡೆಯಬೇಡಿ. ಅದು ನಿಮಗೆ ಅಗತ್ಯವಿದೆಯೇ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಿ. ನಿಮಗೆ ಎಷ್ಟು ಹಣದ ಅಗತ್ಯವಿದೆ, ಅದಕ್ಕೆ ಅಗತ್ಯವಿರುವ ಎಲ್ಲ ದಾಖಲೆ ನಿಮ್ಮ ಬಳಿ ಇದೆಯೇ ಎಂಬುದನ್ನು ಪರಿಶೀಲಿಸಿ. ಐಡಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ವೋಟರ್ ಐಡಿ ಕಾರ್ಡ್ ಅಗತ್ಯವಿರುತ್ತದೆ. ಇದಲ್ಲದೆ ಎರಡು ವರ್ಷಗಳ ಆದಾಯ ತೆರಿಗೆ ರಿಟರ್ನ್ ಕೇಳಲಾಗುತ್ತದೆ.
ಕತ್ತೆ ಸಾಕಿ ತಿಂಗಳಿಗೆ 3 ಲಕ್ಷ ಗಳಿಸುತ್ತಿರುವ ರೈತ; ಕತ್ತೆ ಹಾಲಿನ ದರ ಕೇಳಿದ್ರೆ ದಂಗಾಗ್ತೀರಾ!
ವೈಯಕ್ತಿಕ ಸಾಲದ ಅರ್ಹತೆ ಏನು? : ನಿಮಗೆ ಬ್ಯಾಂಕ್ ಸಾಲ ನೀಡುವ ಮುನ್ನ ಕೆಲವೊಂದು ಅರ್ಹತೆಯನ್ನು ಪರಿಶೀಲಿಸುತ್ತದೆ. ನಿಮಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 60 ವರ್ಷ ವಯಸ್ಸಾದಲ್ಲಿ ಮಾತ್ರ ಬ್ಯಾಂಕ್ ಸಾಲ ನೀಡುವ ವಿಚಾರದಲ್ಲಿ ಮುಂದುವರೆಯುತ್ತದೆ. ಕ್ರೆಡಿಟ್ ಸ್ಕೋರ್ 750 ಅಥವಾ ಹೆಚ್ಚಿನದಾಗಿರಬೇಕೆಂದು ಬ್ಯಾಂಕ್ ನಿಯಮ ಮಾಡಿದೆ.