ಉದ್ಯೋಗ ಭವಿಷ್ಯ ನಿಧಿ ಪಂಚಣಿದಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸರ್ಕಾರದ ಮಹತ್ವದ ಕ್ರಮದಿಂದ ಇದೀಗ 78 ಲಕ್ಷ EPS ಪಿಂಚಣಿದಾರರಿಗೆ ನೆರವಾಗಲಿದೆ.
ನವದೆಹಲಿ(ಸೆ.04) ಉದ್ಯೋಗ ಭವಿಷ್ಯ ನಿಧಿ(EPFO) ಅಡಿಯಲ್ಲಿನ ಉದ್ಯೋಗ ಪಿಂಚಣಿ ಯೋಜನೆ( EPS) ಫಲಾನುಭವಿಗಲಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ಕುರಿತು ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವಿಯಾ ಮಹತ್ವದ ಘೋಷಣೆ ಮಾಡಿದ್ದಾರೆ. ಇದೀಗ ಉದ್ಯೋಗ ಪಿಂಚಣಿ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಪಿಂಚಣಿ ಪಾವತಿ ವ್ಯವಸ್ಥೆಗೆ(CPPS) ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ ಪಿಂಚಣಿದಾರರು ದೇಶದ ಯಾವುದೇ ಬ್ಯಾಂಕ್, ಯಾವುದೇ ಶಾಖೆಯಲ್ಲಿ ಹಾಗೂ ಯಾವುದೇ ರಾಜ್ಯದಲ್ಲಿ ಬೇಕಾದರೂ ಪಿಂಚಣಿ ಪಡೆಯಲು ಸಾಧ್ಯವಿದೆ.
ಜನವರಿ 1, 2025ರಿಂದ ಈ ಯೋಜನೆ ದೇಶಾದ್ಯಂತ ಜಾರಿಯಾಗುತ್ತಿದೆ. ಹೊಸ CPPS ವ್ಯವಸ್ಥೆಯಿಂದ ಪಿಂಚಣಿ ಫಲಾನುಭವಿಗಳ ಪಿಂಚಣಿ ಸಮಯದ ವೇಳೆ ಯಾವುದೇ ಬ್ಯಾಂಕ್ ಶಾಖೆಗೆ ತೆರಳಿ ವೆರಿಫಿಕೇಶನ್ ಮಾಡಬೇಕಿಲ್ಲ. ಇಷ್ಟೇ ಅಲ್ಲ ಪಿಂಚಣಿದಾರರು ನಿರ್ದಿಷ್ಟ ಬ್ರಾಂಚ್‌ಗೆ ತೆರಳಿ ಪಿಂಚಣಿ ಸೌಲಭ್ಯ ಮಾಡಿಸಬೇಕಾದ ಅನಿವಾರ್ಯತೆ ಇತ್ತು. ಇದೀಗ ಈ ಸಮಸ್ಯೆಗೆ ಮುಕ್ತಿ ನೀಡಲಾಗಿದೆ. ಹೊಸ ವ್ಯವಸ್ಥೆ ಮೂಲಕ ಪಿಂಚಣಿ ಸಮಯ ಬಂದಾಗ, ಖಾತಗೆ ಜಮೆ ಆಗಲಿದೆ. ಪಿಂಚಣಿದಾರರು ಯಾವುದೇ ಬ್ಯಾಂಕ್‌ನಿಂದ ಈ ಹಣ ಪಡೆದುಕೊಳ್ಳಬಹುದು.
undefined
EPFO ಸದಸ್ಯರಿಗೆ ಒಂದು ರೂ ಪಾವತಿಸದೆ 7 ಲಕ್ಷ ರೂ ವರೆಗೆ ಇದೆ ವಿಮೆ ಸೌಲಭ್ಯ!
ಹೊಸ ವ್ಯವಸ್ಥೆಯಿಂದ ಉದ್ಯೋಗ ಭವಿಷ್ಯ ನಿಧಿ ಕೆಲಸಗಳು ಸುಲಭಗೊಂಡಿದೆ. ಇಷ್ಟೇ ಅಲ್ಲ ಇದಕ್ಕಾಗಿ ಖರ್ಚು ಮಾಡುತ್ತಿದ್ದ ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ. ಇದು ಸುದೀರ್ಘ ವರ್ಷಗಳಿಂದ ಬಾಕಿ ಉಳಿದಿದ್ದ ಯೋಜನೆಯಾಗಿತ್ತು. ಹಲವು ಆಧುನಿಕರಣ ಬಳಿಕವೂ ಪಿಂಚಣಿ ಯೋಜನೆಯಲ್ಲಿ ಬದಲಾವಣೆಯಾಗಿರಲಿಲ್ಲ. ಇದು ಪಿಂಚಣಿದಾರರಿಗೂ ಸಮಸ್ಯೆಯಾಗಿ ಕಾಡುತ್ತಿತ್ತು. ಬಹು ದಿನಗಳ ಬೇಡಿಕೆ ಇದೀಗ ಈಡೇರಿದೆ ಎಂದು ಕೇಂದ್ರ ಸಚಿವ ಮನ್ಸುಕ್ ಮಾಂಡವಿಯಾ ಹೇಳಿದ್ದಾರೆ.
ಈ ಹೊಸ ಯೋಜನೆಯಿಂದ ಪಿಂಚಣಿ ಫಲಾನುಭವಿಗಳು, ಕಚೇರಿಯಿಂದ ಕಚೇರಿಗೆ, ಬ್ಯಾಂಕ್ ನಿಂದ ಬ್ಯಾಂಕ್‌ಗೆ ಅಲೆಯಬೇಕಿಲ್ಲ. ನಿಗದಿತ ಸಮಮಯ ಬಂದಾಗ ಪಿಂಚಣಿ ಖಾತೆಗೆ ಕ್ರೆಡಿಟ್ ಆಗಲಿದೆ. ಇನ್ನು ಪಿಂಚಣಿದಾರರು ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ಹಣ ಪಡೆಯಲು ಸಾಧ್ಯವಿದೆ. ಹೊಸ ವಿಧಾನ ಸರ್ಕಾರಕ್ಕೂ ಹಾಗೂ ಪಿಂಚಣಿದಾರರಿಗೆ ನೆರವಾಗಿದೆ ಎಂದಿದ್ದಾರೆ. ಹೊಸ ವರ್ಷದಿಂದ ಯೋಜನೆ ಜಾರಿಯಾಗುತ್ತಿದೆ. ಇದರ ಬೆನ್ನಲ್ಲೇ ಆಧಾರ್ ಬೇಸ್ಡ್ ಪೇಮೆಂಟ್ ಸಿಸ್ಟಮ್ ವ್ಯವಸ್ಥೆಯೂ ಜಾರಿಯಾಗುತ್ತಿದೆ ಎಂದು ಮನ್ಸುಕ್ ಮಾಂಡವಿಯಾ ಹೇಳಿದ್ದಾರೆ. ಹೊಸ ವ್ಯವಸ್ಥೆಗಳು ಪಿಂಚಣಿದಾರರ ಜೀವನ ಸುಗಮಗೊಳಿಸಲಿದೆ ಎಂದಿದ್ದಾರೆ.
EPFO ತನ್ನ ಸದಸ್ಯರಿಗೆ ನೀಡುವ 7 ಬಗೆಯ ಮಾಸಿಕ ಪಿಂಚಣಿ ಯೋಜನೆಗಳ ಲಿಸ್ಟ್, ಇವುಗಳ ಬಗ್ಗೆ ನಿಮಗೆ ಗೊತ್ತಿರಲಿ..