ಸೋಂಕಿನಿಂದ ಮತೃಪಟ್ಟ ಉದ್ಯೋಗಿ ಕುಟುಂಬಕ್ಕೆ ಸಿಗಲಿದೆ ಗರಿಷ್ಠ 7 ಲಕ್ಷ ರೂ ವಿಮೆ!

By Suvarna NewsFirst Published May 5, 2021, 3:05 PM IST
Highlights

ಕೊರೋನಾ ವೈರಸ್ ಭಾರತ ಬಹುತೇಕ ಕುಟುಂಬವನ್ನು ಹಿಂಡಿ ಹಿಪ್ಪೆ ಮಾಡಿದೆ. ಇನ್ನು ಹಲವು ಕುಟುಂಬಗಳ ಆತಂಕದಲ್ಲಿ ದಿನದೂಡುತ್ತಿದೆ. ಕುಟುಂಬಕ್ಕೆ ಆಧಾರವಾಗಿದ್ದ ಪ್ರಮುಖರೇ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಕುಟುಂಬ ಬೀದಿ ಬೀಳುತ್ತಿದೆ. ಹೀಗಾಗಿ ಸರ್ಕಾರ ಕೊರೋನಾ ಸೋಂಕಿನಿಂದ ಮೃತಪಟ್ಟ ಉದ್ಯೋಗಿ ಕುಟುಂಬಕ್ಕೆ ಸಿಗಲಿರುವ ವಿಮಾ ಮೊತ್ತವನ್ನು ಸರ್ಕಾರ ಹೆಚ್ಚಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಮೇ.05): ನೌಕರರ ಠೇವಣಿ ಸಂಬಂಧಿತ ವಿಮೆ ಯೋಜನೆಯ ಪ್ರಯೋಜನಗಳನ್ನು ಭಾರತ ನಿವೃತ್ತಿ ನಿಧಿ ಹೆಚ್ಚಿಸಿದೆ. ಪರಿಣಾಮ ಕೊರೋನಾ ಸೋಂಕಿನಿಂದ ಉದ್ಯೋಗಿ ಮೃತಪಟ್ಟರೆ ಆತನ ಕುಟುಂಬಕ್ಕೆ ಸಿಗುವ ವಿಮಾ ಮೊತವನ್ನು ಗರಿಷ್ಠ 7.5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

EPF ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಬ್ಯಾಲೆನ್ಸ್ ತಿಳಿಯಲು ಹೀಗ್ಮಾಡಿ!

ಗೆಜೆಟ್ ಅಧಿಸೂಚನೆಯಲ್ಲಿ, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮರಣ ವಿಮೆಯನ್ನು ಕನಿಷ್ಠ  2.5 ಲಕ್ಷ ರೂಪಾಯಿ ಮತ್ತು ಗರಿಷ್ಠ 7.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನೌಕರರ ಠೇವಣಿ-ಸಂಬಂಧಿತ ವಿಮೆ(EDLI) ಮೂಲಕ ಈ ಪ್ರಯೋಜನವನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತದೆ.

ಉದ್ಯೋಗದಲ್ಲಿರುವ EDLI ಚಂದಾದಾರರು ಮೃತಪಟ್ಟರೆ, ವಿಮಾ ಪ್ರಯೋಜನವನ್ನು ಚಂದಾದಾರರ ಕುಟುಂಬಕ್ಕೆ ನೀಡಲಾಗುತ್ತದೆ. EPFOನ 50 ಮಿಲಿಯನ್ ಸಕ್ರಿಯ ಚಂದಾದಾರರಲ್ಲಿ, 2 ಮಿಲಿಯನ್‌ಗಿಂತಲೂ ಹೆಚ್ಚು ಜನರು EDLI ಚಂದಾದಾರರಾಗಿದ್ದಾರೆ.

ಗ್ರಾಹಕರಿಗೆ SBI ಎಚ್ಚರಿಕೆ; ಮೇ 31ರೊಳಗೆ ಹೀಗೆ ಮಾಡದಿದ್ದಲ್ಲಿ ನಿಮ್ಮ ಖಾತೆ ಸ್ಥಗಿತ!

ಈ ಮೊದಲು ಕನಿಷ್ಠ 2 ಲಕ್ಷ ರೂಪಾಯಿ ಹಾಗೂ ಗರಿಷ್ಠ 7 ಲಕ್ಷ ರೂಪಾಯಿ ಇದ್ದ ಈ ಮೊತ್ತವನ್ನು ಇದೀಗ ಹೆಚ್ಚಿಸಲಾಗಿದೆ. ಕೊರೋನಾ ಕಾರಣ ಈ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ನೌಕರ ಭವಿಷ್ಯ ನಿಧಿ ಸಂಸ್ಥೆ ಹೇಳಿದೆ.

click me!