ಇಪಿಎಫ್ ನಿಯಮ ಬದಲಾವಣೆ;ವೈದ್ಯಕೀಯ ಚಿಕಿತ್ಸೆಗೆ ಒಂದು ಲಕ್ಷ ರೂ. ತನಕ ಹಣ ವಿತ್ ಡ್ರಾಗೆ ಅವಕಾಶ

By Suvarna News  |  First Published Apr 18, 2024, 12:59 PM IST

ಇಪಿಎಫ್ ನಿಯಮದಲ್ಲಿ ಬದಲಾವಣೆ ತರಲಾಗಿದ್ದು,ವೈದ್ಯಕೀಯ ಚಿಕಿತ್ಸೆಗೆ ಒಂದು ಲಕ್ಷ ರೂ.ತನಕ ಹಣ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. 


ನವದೆಹಲಿ (ಏ.18): ವೈದ್ಯಕೀಯ ಚಿಕಿತ್ಸೆಗಾಗಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಯಿಂದ 1 ಲಕ್ಷ ರೂ. ತನಕ ಹಣ ವಿತ್ ಡ್ರಾ ಮಾಡಿಕೊಳ್ಳಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಅವಕಾಶ ನೀಡಿದೆ. ಈ ಹಿಂದೆ ವೈದ್ಯಕೀಯ ವೆಚ್ಚಕ್ಕೆ 50 ಸಾವಿರ ರೂ. ಮಾತ್ರ ವಿತ್ ಡ್ರಾ ಮಾಡಲು ಅವಕಾಶವಿತ್ತು. ಏಪ್ರಿಲ್ 16ರಂದು ಇಪಿಎಫ್ಒ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಮಿತಿಯನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಇಪಿಎಫ್ ಆ್ಯಪ್ ಸಾಫ್ಟ್​ವೇರ್​ನಲ್ಲಿ ಕೂಡ ಏಪ್ರಿಲ್ 10ರಂದು ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಸೆಂಟ್ರಲ್ ಪ್ರಾವಿಡೆಂಟ್ ಫಂಡ್ ಕಮಿಷನರ್ (ಸಿಪಿಎಫ್​ಸಿ) ಕೂಡ ಈ ಬದಲಾವಣೆಗೆ ಹಸಿರು ನಿಶಾನೆ ತೋರಿದ್ದಾರೆ. ಅರ್ಜಿ ನಮೂನೆ 31ರ ಮೂಲಕ ಅನೇಕ ಉದ್ದೇಶಗಳಿಗೆ ಇಪಿಎಫ್ ಭಾಗಶಃ ವಿತ್ ಡ್ರಾಗೆ ಅವಕಾಶ ನೀಡಿದೆ. ಮದುವೆಯಿಂದ ಹಿಡಿದು ಸಾಲಗಳ ಮರುಪಾವತಿ ಹಾಗೂ ಫ್ಲ್ಯಾಟ್ ಖರೀದಿಯಿಂದ ಹಿಡಿದು ಮನೆ ನಿರ್ಮಾಣದ ತನಕ ಅನೇಕ ಉದ್ದೇಶಗಳಿಗೆ ಇಪಿಎಫ್ ಹಣ ವಿತ್ ಡ್ರಾಗೆ ಅವಕಾಶವಿದೆ. 

ಇನ್ನು ಪ್ಯಾರಾ 68J ಅಡಿಯಲ್ಲಿ ಇಪಿಎಫ್ ಸದಸ್ಯರು ತಮ್ಮ ಹಾಗೂ ಕುಟುಂಬ ಸದಸ್ಯರ ಚಿಕಿತ್ಸೆಗೆ ಕೂಡ ಇಪಿಎಫ್ ಖಾತೆಯಿಂದ ಅಡ್ವಾನ್ಸ್ ಕ್ಲೇಮ್ ಮಾಡಬಹುದು. ಇದಕ್ಕೆ ಅರ್ಜಿ ನಮೂನೆ 31ರ ಜೊತೆಗೆ ಇಪಿಎಫ್ ಖಾತೆದಾರ ತಾನು ಕೆಲಸ ಮಾಡುವ ಸಂಸ್ಥೆ ಹಾಗೂ ಚಿಕಿತ್ಸೆ ನೀಡುವ ವೈದ್ಯರಿಂದ ಸಹಿ ಮಾಡಿಸಿರುವ 'ಸಿ' ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬೇಕು.

Tap to resize

Latest Videos

ಇಪಿಎಫ್ ಕುರಿತ ದೂರುಗಳನ್ನು ಎಲ್ಲಿ ದಾಖಲಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ

ಫಾರ್ಮ್ 31 ಅಂದ್ರೇನು?
ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯಿಂದ ಹಣದ ಭಾಗಶಃ ವಿತ್ ಡ್ರಾಗೆ ಕ್ಲೇಮ್ ಮಾಡಲು ಇಪಿಎಫ್ ಫಾರ್ಮ್ 31 ಸಲ್ಲಿಕೆ ಮಾಡಬೇಕು.  ಫಾರ್ಮ್ 31 ಮೂಲಕ ಮನೆ ಅಥವಾ ಪ್ಲ್ಯಾಟ್ ಖರೀದಿ /ನಿರ್ಮಣಕ್ಕೆ, ಪ್ಯಾರಾ 68BB ಅಡಿಯಲ್ಲಿ ವಿಶೇಷ ಪ್ರಕರಣಗಳಲ್ಲಿ ಸಾಲದ ಮರುಪಾವತಿ, ಪ್ಯಾರಾ 68H ಅಡಿಯಲ್ಲಿ ವಿಶೇಷ ಪ್ರಕರಣಗಳಲ್ಲಿ ಅಡ್ವಾನ್ಸ್ ಪಡೆಯಲು, ಪ್ಯಾರಾ 68J ಅಡಿಯಲ್ಲಿ ಅನಾರೋಗ್ಯಕ್ಕೆ ಮುಂಗಡ ಹಣ ಪಡೆಯಲು ಅವಕಾಶವಿದೆ. 68ಕೆ ಪ್ಯಾರಾ ಅಡಿಯಲ್ಲಿ ಮಕ್ಕಳ ಮದುವೆ ಮತ್ತು ಶಿಕ್ಷಣ ವೆಚ್ಚಕ್ಕೆ; 68ಎನ್ ಪ್ಯಾರಾ ಅಡಿಯಲ್ಲಿ ದೈಹಿಕ ವಿಶೇಷ ಚೇತನರಿಗೆ;  68ಎನ್ಎನ್ ಅಡಿಯಲ್ಲಿ ನಿವೃತ್ತಿಗೆ ಒಂದು ವರ್ಷ ಇರುವಂತೆ ಹಣ ವಿತ್​ಡ್ರಾ ಮಾಡಲು ಅವಕಾಶವಿದೆ.

EPF ಖಾತೆಗೆ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಲು ಹೊಸ ವಿಧಾನ; ಈ ಆನ್ಲೈನ್ ಪ್ರಕ್ರಿಯೆ ಬಲು ಸರಳ

ಇಪಿಎಫ್ ಗೆ ದೂರು ನೀಡೋದು ಎಲ್ಲಿ?
ತಿಂಗಳ ವೇತನ ಪಡೆಯುವ ಬಹುತೇಕರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಭಾರತದ ಅತೀದೊಡ್ಡ ಸಾಮಾಜಿಕ ಭದ್ರತೆ ಯೋಜನೆಯಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಉದ್ಯೋಗಿಗಳ ಭವಿಷ್ಯ ನಿಧಿಯ ನಿರ್ವಹಣೆ ಮಾಡುತ್ತದೆ. ಇಪಿಎಫ್ ಗೆ ಸಂಬಂಧಿಸಿ ಏನಾದರೂ ದೂರುಗಳಿದ್ದರೆ ಎಲ್ಲಿ ಸಲ್ಲಿಕೆ ಮಾಡಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದಕ್ಕಾಗಿಯೇ ಇಪಿಎಫ್ ಐ-ದೂರು ನಿರ್ವಹಣಾ ವ್ಯವಸ್ಥೆ (ಇಪಿಎಫ್ಐಜಿಎಂಎಸ್) ಇದೆ. ಇಲ್ಲಿ ದೂರುಗಳನ್ನು ಸಲ್ಲಿಸುವ ಮೂಲಕ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು. ಇಪಿಎಫ್ ಸದಸ್ಯರು, ಇಪಿಎಸ್ ಪಿಂಚಣಿದಾರರು, ಉದ್ಯೋಗದಾತ ಸಂಸ್ಥೆಗಳು ಹಾಗೂ ಇತರರು ದೂರುಗಳನ್ನು ದಾಖಲಿಸಬಹುದು. ಕ್ಲೈಮ್ ಗಳು, ಡೆಫಾಸಿಟ್ ಗಳು, ಅಕೌಂಟ್ ಬ್ಯಾಲೆನ್ಸ್ ಮುಂತಾದ ವಿಚಾರಗಳಿಗೆ ಸಂಬಂಧಿಸಿ ಇಪಿಎಫ್ ಸದಸ್ಯರು ದೂರುಗಳನ್ನು ಸಲ್ಲಿಸಬಹುದು. ಈ ದೂರುಗಳ ಸಲ್ಲಿಕೆಗೆ ಇಪಿಎಫ್ ಇಪಿಎಫ್ ಐ-ದೂರು ನಿರ್ವಹಣಾ ವ್ಯವಸ್ಥೆ (ಇಪಿಎಫ್ಐಜಿಎಂಎಸ್)  ಬಳಸಿಕೊಳ್ಳಬಹುದು. ಇನ್ನು ಈ ಪೋರ್ಟಲ್ ನಲ್ಲಿ ಇಪಿಎಫ್ ಚಂದಾದಾರರು ದೂರುಗಳು ಹಾಗೂ ಮನವಿಗಳ ಸ್ಟೇಟಸ್ ಅನ್ನು ಕೂಡ ವೀಕ್ಷಿಸಬಹುದು. 
 

click me!