*ಎಲಾನ್ ಮಸ್ಕ್ ಟ್ವಿಟ್ಟರ್ ನಿರ್ದೇಶಕರ ಮಂಡಳಿ ಸೇರಲ್ಲ ಎಂಬ ಮಾಹಿತಿ ನೀಡಿದ ಪರಾಗ್ ಅಗರ್ ವಾಲ್
*ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ ಪರಾಗ್
*ಕಳೆದ ವಾರ ಟ್ವಿಟ್ಟರ್ ನ ಶೇ.9.2ರಷ್ಟು ಷೇರುಗಳನ್ನು ಖರೀದಿಸಿದ್ದ ಮಸ್ಕ್
ನವದೆಹಲಿ (ಏ.11): ಮೈಕ್ರೋ ಬ್ಲಾಗಿಂಗ್ ದಿಗ್ಗಜ ಟ್ವಿಟ್ಟರ್ (Twitter) ಸಂಸ್ಥೆಯ ನಿರ್ದೇಶಕ ಮಂಡಳಿಗೆ ಸೇರ್ಪಡೆಗೊಳ್ಳದಿರಲು ಟೆಸ್ಲಾ(Tesla) ಹಾಗೂ ಸ್ಪೇಸ್ ಎಕ್ಸ್ ( SpaceX) ಸಂಸ್ಥಾಪಕ ಎಲಾನ್ ಮಸ್ಕ್ (Elon Musk) ನಿರ್ಧರಿಸಿದ್ದಾರೆ ಎಂದು ಟ್ವಿಟ್ಟರ್ ಸಿಇಒ ಪರಾಗ್ ಅಗರ್ ವಾಲ್ (Parag Agrawal) ತಿಳಿಸಿದ್ದಾರೆ.
ಎಲಾನ್ ಮಸ್ಕ್ ಕಳೆದ ವಾರ ಟ್ವಿಟ್ಟರ್ ನ ಶೇ.9.2 ರಷ್ಟು ಷೇರುಗಳನ್ನು (Shares) ಖರೀದಿಸಿದ್ದಾರೆ. ಈ ಮೂಲಕ ಟ್ವಿಟ್ಟರ್ ಸಂಸ್ಥೆಯ ಅತೀದೊಡ್ಡ ಷೇರುದಾರನಾಗಿದ್ದಾರೆ. ಹೀಗಾಗಿ ಎಲಾನ್ ಮಸ್ಕ್ ಟ್ವಿಟ್ಟರ್ ನಿರ್ದೇಶಕರ ಮಂಡಳಿಗೆ (board of Directors) ಸೇರ್ಪಡೆಗೊಳ್ಳಲಿದ್ದಾರೆ ಎಂದು ಊಹಿಸಲಾಗಿತ್ತು. ಆದ್ರೆ ಈ ಕುರಿತು ಟ್ವಿಟ್ಟರ್ ಸಿಇಒ ಪರಾಗ್ (Parag) ಸ್ವತಃ ಸ್ಪಷ್ಟೀಕರಣ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರೋ ಅವರು, ' ಎಲಾನ್ ಮಸ್ಕ್ ಟ್ವಿಟ್ಟರ್ ನಿರ್ದೇಶಕರ ಮಂಡಳಿಗೆ ಸೇರ್ಪಡೆಗೊಳ್ಳುವ ಕುರಿತು ನಾನು ಹಾಗೂ ಮಂಡಳಿ ಎಲಾನ್ ಜೊತೆಗೆ ನೇರವಾಗಿ ಅನೇಕ ಬಾರಿ ಮಾತುಕತೆ ನಡೆಸಿದ್ದೇವೆ. ಸಹಭಾಗಿತ್ವ ಹೊಂದಲು ನಾವು ಉತ್ಸುಕರಾಗಿದ್ದೇವೆ ಹಾಗೂ ಎಲ್ಲ ಅಪಾಯಗಳ ಬಗ್ಗೆ ಕೂಡ ನಮಗೆ ಸ್ಪಷ್ಟತೆಯಿದೆ. ಮಸ್ಕ್ ಅವರನ್ನು ಹೊಂದಿರೋದು ಕಂಪೆನಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂದು ನಾವು ನಂಬಿದ್ದೆವು. ಮಂಡಳಿಯ ಎಲ್ಲ ನಿರ್ದೇಶಕರಂತೆ (Directors) ಅವರು ಕೂಡ ಕಂಪೆನಿಯ (Company) ಹಾಗೂ ನಮ್ಮ ಎಲ್ಲ ಷೇರುದಾರರ ಅತ್ಯುತ್ತಮ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ನಂಬಿಕೆ ಹೊಂದಿದ್ದೆವು. ಇದೇ ಕಾರಣಕ್ಕೆ ಕಂಪೆನಿಯು (Company) ಆಡಳಿತ ಮಂಡಳಿಯ ನಿರ್ದೇಶಕರಾಗುವಂತೆ ಆಹ್ವಾನ ನೀಡಿತ್ತು' ಎಂದು ತಿಳಿಸಿದ್ದಾರೆ.
ಅಕ್ಷತಾ ಮೂರ್ತಿ ತೆರಿಗೆ ಸ್ಥಾನಮಾನ ಸೋರಿಕೆ: ತನಿಖೆಗೆ ಬ್ರಿಟನ್ ಆದೇಶ
'ಎಲಾನ್ ನಿರ್ದೇಶಕರ ಮಂಡಳಿಗೆ ನೇಮಕಗೊಂಡಿರೋದು ಏಪ್ರಿಲ್ 9ರಂದು ಅಧಿಕೃತವಾಗಿ ಘೋಷಣೆಯಾಗಬೇಕಿತ್ತು. ಆದ್ರೆ ಅದೇ ದಿನ ಬೆಳಗ್ಗೆ ಎಲಾನ್ ಮಂಡಳಿಗೆ ಸೇರ್ಪಡೆಗೊಳ್ಳುವುದಿಲ್ಲ ಎಂಬ ತಮ್ಮ ನಿರ್ಧಾರ ಹಂಚಿಕೊಂಡಿದ್ದಾರೆ. ಒಳ್ಳೆಯ ಉದ್ದೇಶಕ್ಕಾಗಿಯೇ ಇದು ನಡೆದಿದೆ ಎಂದು ನಾನು ಭಾವಿಸುತ್ತೇನೆ' ಎಂಬ ಅಭಿಪ್ರಾಯವನ್ನು ಕೂಡ ಪರಾಗ್ ತಮ್ಮ ಟ್ವೀಟ್ ನಲ್ಲಿ (Tweet) ಹಂಚಿಕೊಂಡಿದ್ದಾರೆ. ಈ ಕುರಿತು ಪರಾಗ್ ಕಂಪೆನಿಗೆ ಒಂದು ಪತ್ರ ಬರೆದು ಮಾಹಿತಿ ಹಂಚಿಕೊಂಡಿರೋದಾಗಿ ಕೂಡ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮಸ್ಕ್ ವೈಯಕ್ತಿಕ ಸಾಮರ್ಥ್ಯದಿಂದ ಟ್ವಿಟ್ಟರ್‌ನ 73,486,938 ಷೇರುಗಳನ್ನು (Shares) ಖರೀದಿಸಿದ್ದರು. ಇದು ಟ್ವಿಟ್ಟರ್‌ನ ಶೇ.9.2ರಷ್ಟು ಷೇರು ಮೌಲ್ಯವಾಗಿದೆ. ಈ ಸಂಬಂಧ ಎಲಾನ್ ಮಸ್ಕ್ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ಸಲ್ಲಿಸಿದ್ದರು ಕೂಡ. ಕಳೆದ ವಾರ ಎಲಾನ್ ಮಸ್ಕ್ ಟ್ವಿಟ್ಟರ್ ಎಡಿಟ್ ಬಟನ್ (Edit button) ಪರಿಚಯಿಸಬೇಕೇ ಬೇಡವೇ ಎಂಬ ಬಗ್ಗೆ ಒಂದು ಪೋಲ್ ಟ್ವೀಟ್ ಮಾಡಿದ್ದರು. ಇನ್ನು ಎಲಾನ್ ಮಸ್ಕ್ ಸಂಸ್ಥೆಯ ಅತೀದೊಡ್ಡ ಷೇರುದಾರರಾದ ಬಳಿಕ ಅಗರ್ ವಾಲ್ ಟ್ವೀಟ್ (Tweet) ಮಾಡಿ, ಟ್ವಿಟ್ಟರ್ ಮಂಡಳಿಗೆ ಮಸ್ಕ್ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ತುಂಬಾ ಕಾತುರನಾಗಿದ್ದೇನೆ ಎಂದು ತಿಳಿಸಿದ್ದರು.
NCDFY: ಕೆಎಂಎಫ್‌ಗೆ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಗರಿ
'ಮುಂದೆ ತೊಂದರೆಗಳಿವೆ. ಆದ್ರೆ ನಮ್ಮ ಗುರಿಗಳು ಹಾಗೂ ಆದ್ಯತೆಗಳು ಬದಲಾಗೋದಿಲ್ಲ. ನಾವು ಹೇಗೆ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಹಾಗೂ ಅದನ್ನು ಕಾರ್ಯರೂಪಕ್ಕೆ ತರುತ್ತೇವೆ ಎನ್ನೋದು ನಮ್ಮ ಕೈಗಳಲ್ಲಿದೆಯೇ ಹೊರತು ಇನ್ಯಾರದ್ದೋ ಬಳಿಯಲ್ಲಿ ಅಲ್ಲ. ಹೀಗಾಗಿ ಸದ್ದಿಗೆ ಕಿವಿಗೊಡದೆ ಕೆಲಸದ ಮೇಲೆ ಹಾಗೂ ನಾವು ಏನು ನಿರ್ಮಿಸುತ್ತಿದ್ದೇವೆಯೋ ಅದರ ಮೇಲೆ ಗಮನ ಕೇಂದ್ರೀಕರಿಸೋಣ' ಎಂದು ಅಗರ್ ವಾಲ್ ಪೋಸ್ಟ್ ನಲ್ಲಿ(Post)ತಿಳಿಸಿದ್ದಾರೆ. ಅಗರ್ ವಾಲ್ ಟ್ವೀಟ್ ಬಳಿಕ ಕೆಲವೇ ನಿಮಿಷಗಳಲ್ಲಿ ಟ್ವೀಟ್ ಮಾಡಿರೋ ಎಲಾನ್ ಮಸ್ಕ್ ಇಮೋಜಿಯೊಂದನ್ನು ಪೋಸ್ಟ್ ಮಾಡೋ ಮೂಲಕ ಟ್ವಿಟ್ಟರ್ ಬಳಕೆದಾರರಲ್ಲಿ ಗೊಂದಲ ಮೂಡಿಸಿದ್ದರು.