Bitcoin ಬಗ್ಗೆ ಎಲಾನ್ ಮಸ್ಕ್ ಮಾಡಿದ ಟ್ವೀಟ್ ಮತ್ತೊಮ್ಮೆ ವೈರಲ್!

By Suvarna News  |  First Published Mar 10, 2022, 12:33 AM IST

ಬಿಟ್ ಕಾಯಿನ್ ಸೃಷ್ಟಿಕರ್ತ ಸತೋಶಿ ನಕಾಮೊಟೊ ಬಗ್ಗೆ ಟ್ವೀಟ್

ಸತೋಶಿ ನಕಾಮೊಟೊ ಯಾರಿರಬಹುದು ಎನ್ನುವ ಅಂದಾಜಿನಲ್ಲಿ ಪೋಸ್ಟ್

ಎಲಾನ್ ಮಸ್ಕ್ ಟ್ವೀಟ್ ಗೆ ಲಕ್ಷಗಟ್ಟಲೆ ಪ್ರತಿಕ್ರಿಯೆಗಳು


ಬೆಂಗಳೂರು (ಮಾ.9): ಟೆಕ್ ಶತಕೋಟ್ಯಾಧಿಪತಿ ಎಲಾನ್ ಮಸ್ಕ್ (Elon Musk) ನಿಗೂಢ ಬಿಟ್‌ಕಾಯಿನ್ ಸೃಷ್ಟಿಕರ್ತ ಸತೋಶಿ ನಕಾಮೊಟೊ (mysterious Bitcoin creator Satoshi Nakamoto) ಅವರ ಗುರುತನ್ನು ರಹಸ್ಯ ಟ್ವೀಟ್‌ನೊಂದಿಗೆ ಡಿಕೋಡ್ ಮಾಡಲು ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಹೊಸ ಮಾದರಿಯ ಡಿಜಿಟಲ್ ಕರೆನ್ಸಿಯಲ್ಲಿ ಹೊಸ ದಿಕ್ಕನ್ನೇ ತೋರಿರುವ ಬಿಟ್ ಕಾಯಿನ್ ನ ಸೃಷ್ಟಿಕರ್ತ ಎಂದು "ಸತೋಶಿ ನಕಾಮೊಟೊ" ಎಂದು ಪರಿಗಣನೆ ಮಾಡುಲಾಗುತ್ತದೆ. ಇದು ಹೌದೋ ಅಲ್ಲವೋ ಎನ್ನುವುದು ಸಹ ಜನರಿಗೆ ತಿಳಿದಿಲ್ಲ. ಕೆಲವೊಮ್ಮೆ ಬಿಟ್ ಕಾಯಿನ್ ಗಳ ಕೋಡರ್ ಗಳು ಎಂದು ವಿವಿಧ ಸಮಯಗಳಲ್ಲಿ ಕೆಲವರನ್ನು ಗುರುತಿಸಲಾಗಿದೆ.

ಟೆಸ್ಲಾ ಸಿಇಒ (Tesla CEO) ಎಲೋನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ವಿಚಿತ್ರವಾದ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಬಿಟ್‌ಕಾಯಿನ್ ಸೃಷ್ಟಿಕರ್ತರ ಗುರುತಿನ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದಾರೆ. ಬಿಲಿಯನೇರ್ ನಾಲ್ಕು ಎಫ್‌ಎಂಸಿಜಿ ಕಂಪನಿಯ ಬ್ರಾಂಡ್ ಹೆಸರುಗಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಪ್ರತಿ ಹೆಸರಿನಿಂದ ಕೆಲವು ಅಕ್ಷರಗಳನ್ನು ತೆಗೆದು "ಸತೋಶಿ ನಕಾಮೊಟೊ" ಎಂಬ ಪದವನ್ನು ಮಾಡಲು ಯಶಸ್ವಿಯಾಗಿದ್ದಾರೆ. ಬಿಟ್‌ಕಾಯಿನ್ ಸಂಸ್ಥಾಪಕರ ನಿಜವಾದ ಗುರುತು ಈಗಲೂ ಚರ್ಚೆಯ ವಿಷಯವಾಗಿದೆ. ಎಲಾನ್ ಮಸ್ಕ್ ಅವರನ್ನೇ ಈ ಹಿಂದೆ ಸತೋಶಿ ನಕಮೊಟೊ ಎಂದು ಜನರು ಶಂಕೆ ಮಾಡಿದ್ದರು. ಆದರೆ, ಅದನ್ನು ನಿರಾಕರಿಸಿದ್ದ ಅವರು. 2017 ರ ಟ್ವೀಟ್‌ನಲ್ಲಿ ಈ ಕುರಿತಾಗಿ ಸ್ಪಷ್ಟನೆಯನ್ನೂ ನೀಡಿದ್ದರು.

ಸತೋಶಿ ನಕಾಮೊಟೊ ಬಗ್ಗೆ ಎಲಾನ್ ಮಸ್ಕ್ ಮಾಡಿರುವ ಟ್ವೀಟ್ 274ಕೆ ಲೈಕ್, 39ಕೆ ರೀಟ್ವೀಟ್ ಗಳನ್ನು ಕಂಡಿದ್ದು ಮಾತ್ರವಲ್ಲೆ ಇನ್ನೂ ಜನರಿಂದ ವೀಕ್ಷಣೆ ಹಾಗೂ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಅಂದಾಜು 7200ಕ್ಕೂ ಅಧಿಕ ವ್ಯಕ್ತಿಗಳು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. 

pic.twitter.com/e3kFCmREaC

— Elon Musk (@elonmusk)


ಇದಕ್ಕೆ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬ, "ಊಹೆ ಮಾಡಿ ಎಲಾನ್ ಮಸ್ಕ್, ಈಗ ತಾವೇ ಸತೋಶಿ ನಕಾಮೊಟೊ ಎಂದು ಹೇಳಬಹುದು..." ಎಂದು ಬರೆದಿದ್ದರೆ, ಇನ್ನೊಬ್ಬ ವ್ಯಕ್ತಿ, "ನಮಗೆ ಏನಾದರೂ ವಿಷಯ ಹೇಳಬೇಕೆಂದು ಕಾಯುತ್ತಿದ್ದೀರಾ" ಎಂದು ಪ್ರಶ್ನೆ ಮಾಡಿದ್ದಾರೆ.

ಏನಿದೆ ಟ್ವೀಟ್ ನಲ್ಲಿ: ಸ್ಯಾಮ್‌ಸಂಗ್ (Samsung), ತೋಷಿಬಾ (Toshiba), ನಕಮಿಚಿ (Nakamichi ) ಮತ್ತು ಮೊಟೊರೊಲಾ (Motorola) ಬ್ರಾಂಡ್‌ಗಳ ಹೆಸರುಗಳನ್ನು ಹೊಂದಿರುವ ಫೋಟೋವನ್ನು ಮಸ್ಕ್ ಹಂಚಿಕೊಂಡಿದ್ದಾರೆ. ಸ್ಯಾಮ್‌ಸಂಗ್‌ನಿಂದ 'ಸಾ', (Sa) ತೋಷಿಬಾದಿಂದ 'ತೊಷಿ', (Toshi) ನಕಮಿಚಿಯಿಂದ 'ನಾಕಾ'  (Naka)ಮತ್ತು ಮೊಟೊರೊಲಾದಿಂದ 'ಮೊಟೊ' (Moto) ಈ ಹೆಸರುಗಳನ್ನುಎತ್ತಿ ತೋರಿಸಿದ್ದು, 'ಸತೋಶಿ ನಕಾಮೊಟೊ' ಎಂಬ ಗುಪ್ತನಾಮವು ಕೇವಲ ಬಿಟ್‌ಗಳು ಮತ್ತು ಬ್ರಾಂಡ್ ಹೆಸರುಗಳ ಭಾಗಗಳು ಎಂದು ಸೂಚಿಸುತ್ತದೆ.

Bitcoin ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ : ಪ್ರತಾಪ್ ಸಿಂಹ
ಹಲವಾರು ಜನರು ಜಪಾನಿನ ಪ್ರಸಿದ್ಧ ಕೋಡರ್ ಮತ್ತು ಡೆವಲಪರ್ 'ಸತೋಶಿ ನಕಮೊಟೊ' ಎಂದು ಹೇಳಿಕೊಂಡಿದ್ದಾರೆ, ಆದರೆ ಗುರುತನ್ನು ಎಂದಿಗೂ ದೃಢೀಕರಿಸಲಾಗಿಲ್ಲ. ನಕಾಮೊಟೊ 2007 ರಲ್ಲಿ ಬಿಟ್‌ಕಾಯಿನ್‌ಗಾಗಿ ಕೋಡ್ ಅನ್ನು ಬರೆಯಲು ಪ್ರಾರಂಭಿಸಿದರು ಮತ್ತು 2011 ರವರೆಗೆ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದರು. ಜಪಾನೀಸ್ ಗುಪ್ತನಾಮದ ಹೊರತಾಗಿಯೂ, ನಕಮೊಟೊ ಬಹುಶಃ ಜಪಾನೀಸ್ ಅಲ್ಲ ಮತ್ತು ಒಂದು ತಂಡವಾಗಿರಬಹುದು ಮತ್ತು ಒಬ್ಬ ವ್ಯಕ್ತಿಯಾಗಿರಬಹುದು ಎಂಬ ಊಹಾಪೋಹಗಳು ತುಂಬಿವೆ.

Bitcoin Scam Exclusive: ಬಿಟ್‌ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್, IPS ಅಧಿಕಾರಿಯ ಆಡಿಯೋ ಲೀಕ್!
ಶಿಬೆಟೋಶಿ ನಕಾಮೊಟೊ ಎಂಬ ಅಡ್ಡ ಹೆಸರಿನಿಂದ ಮತ್ತು ಅಧಿಕೃತ ಟ್ವಿಟರ್ ಖಾತೆಯನ್ನು ಹೊಂದಿರುವ ಡಾಗ್‌ಕಾಯಿನ್ ಸೃಷ್ಟಿಕರ್ತ ಕಾಮೆಂಟ್ ಕೂಡ ಇದಕ್ಕೆ ಕಾಮೆಂಟ್ ಮಾಡಿದ್ದು, "ವಾಹ್ ಬಿಟ್‌ಕಾಯಿನ್‌ನ ಸೃಷ್ಟಿಕರ್ತ ಅರ್ಧ ಜಪಾನೀಸ್, ಕಾಲು ಕೊರಿಯನ್ ಮತ್ತು ಕಾಲು ಅಮೆರಿಕನ್." ಆಗಿದ್ದಾನೆ ಎಂದಿದ್ದಾರೆ. ನಕಾಮೊಟೊ ಅವರು 750,000 ಮತ್ತು 1,100,000 ಬಿಟ್‌ಕಾಯಿನ್‌ಗಳನ್ನು ಹೊಂದಿದ್ದು, ಅವರನ್ನು ಬಿಲಿಯನೇರ್ ಮತ್ತು ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎನ್ನಲಾಗಿದೆ.

Tap to resize

Latest Videos

click me!