Elon Musk ಸಕ್ಸಸ್ ಸೀಕ್ರೆಟ್ ಕೊನೆಗೂ ರಿವೀಲ್ ಆಯ್ತು; ಇಷ್ಟು ದಿನ ಗುಟ್ಟಾಗಿತ್ತು ಯಾಕೆ?

Published : Feb 13, 2025, 10:11 PM ISTUpdated : Feb 14, 2025, 10:41 AM IST
Elon Musk ಸಕ್ಸಸ್ ಸೀಕ್ರೆಟ್ ಕೊನೆಗೂ ರಿವೀಲ್ ಆಯ್ತು; ಇಷ್ಟು ದಿನ ಗುಟ್ಟಾಗಿತ್ತು ಯಾಕೆ?

ಸಾರಾಂಶ

ರಾಕೆಟ್ ಉಡಾವಣೆಯ ದುಬಾರಿ ವೆಚ್ಚಕ್ಕೆ ಪರಿಹಾರವಾಗಿ ಎಲಾನ್ ಮಸ್ಕ್ ಸ್ಪೇಸ್‌ಎಕ್ಸ್ ಸ್ಥಾಪಿಸಿ, ಬಹುತೇಕ ಬಿಡಿಭಾಗಗಳನ್ನು ಸ್ವತಃ ತಯಾರಿಸುವ ಮೂಲಕ ವೆಚ್ಚ ಕಡಿಮೆ ಮಾಡಿದರು. ಟೆಸ್ಲಾದಲ್ಲೂ ಇದೇ ತಂತ್ರ ಅನುಸರಿಸಿ ಯಶಸ್ಸು ಕಂಡರು. ಸಮಸ್ಯೆಯ ಮೂಲವನ್ನು ಅರಿತು ಪರಿಹಾರ ಕಂಡುಕೊಳ್ಳುವ ಈ "ಫಸ್ಟ್ ಪ್ರಿನ್ಸಿಪಲ್ ಥಿಂಕಿಂಗ್" ಅವರ ಯಶಸ್ಸಿನ ಗುಟ್ಟು.

ಇಂದು ಜಗತ್ತಿನಲ್ಲಿ ಎಲಾನ್ ಮಸ್ಕ್ ಎಂಬ ಹೆಸರು ತೀರಾ ಪ್ರಸಿದ್ಧಿ ಪಡೆದಿದೆ. ಆದರೆ ಒಂದು ಕಾಲದಲ್ಲಿ ಈ ಎಲಾನ್ ಮಸ್ಕ್ ಜನಸಾಮಾನ್ಯರಂತೆ ಸಕ್ಸಸ್‌ಗೆ ಹಂಬಲಿಸುತ್ತಿದ್ದ ವ್ಯಕ್ತಿ ಆಗಿದ್ದವರು. 2002ರಲ್ಲಿ ಎಲಾನ್ ಮಸ್ಕ್ (Elon Musk) ಮಂಗಳ ಗ್ರಹಕ್ಕೆ ರಾಕೆಟ್‌ ಕಳುಹಿಸಲು ಪ್ಲಾನ್ ಮಾಡಿದ್ರು.. ಆದ್ರೆ ಅದ್ರಲ್ಲಿ ದೊಡ್ಡ ಸಮಸ್ಯೆ ಇತ್ತು.. ಅದೇನೆಂದರೆ, ರಾಕೆಟ್ ಖರೀದಿ ಮಾಡಲು ಬೆಲೆ ಬಹಳಷ್ಟು ಹೆಚ್ಚಾಗಿತ್ತು.

ಏಕೆಂದರೆ, ಯಾವುದೇ ಒಂದು ಕಂಪನಿ ಸಂಪೂರ್ಣವಾಗಿ ಒಂದು ರಾಕೆಟ್ ತಯಾರು ಮಾಡುತ್ತಿರಲಿಲ್ಲ. ರಾಕೆಟ್ ಬೇಕಂದ್ರೆ ಯಾರೇ ಆದ್ರೂ ಬೇರೆ ಬೇರೆ ಕಂಪನಿಗಳಿಂದ ಕೊಂಡು ಅಸೆಂಬಲ್ ಮಾಡ್ತಾ ಇದ್ರು.. ಕೊಡುವವರೂ ಕೂಡ ಆ ಸಣ್ಣ ಸಣ್ಣ ಭಾಗಗಳನ್ನು ಇನ್ನಿತರ ಕಂಪನಿಗಳಿಂದ ಕೊಂಡುಕೊಳ್ತಾ ಇದ್ರು.. ಈ ಒಂದು ಪ್ರಕ್ರಿಯೆಯಲ್ಲಿ ಪ್ರತಿ ಕಂಪನಿಯೂ ತನ್ನ ಸಾಗಾಟ ಹಾಗೂ ಮಾರಾಟದ ಬೆಲೆಯನ್ನು ಸೇರಿಸುತ್ತಿತ್ತು. ಇದರಿಂದ ರಾಕೆಟ್‌ ಬಿಡಿ ಭಾಗಗಳೂ ಕೂಡ ತುಂಬಾ ದುಬಾರಿ ಎನಿಸಿದ್ದವು.

'ಫಸ್ಟ್ ಪ್ರಿನ್ಸಿಪಲ್ ಥಿಂಕಿಂಗ್‌' ಬಗ್ಗೆ ಗೊತ್ತಾ? ಗ್ರೇಟ್ ಸಕ್ಸಸ್ ಪಡೆದೋರೆಲ್ಲಾ ಇದೇ ದಾರೀಲಿ ಹೋಗಿದ್ದು!

ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಯೋಚಿಸಿದ ಎಲಾನ್ ಮಸ್ಕ್ ಸ್ಪೇಸ್ ಎಕ್ಸ್‌ ಎಂಬ ಕಂಪನಿಯನ್ನು ಹುಟ್ಟುಹಾಕಿದರು. ಇಂದು ಅವರ ಸ್ಪೇಸ್ ಎಕ್ಸ್‌ ಕಂಪನಿ ರಾಕೆಟ್ ಉಡಾವಣೆಗೆ ಬೇಕಾದ 80 ರಿಂದ 90% ಬಿಡಿ ಭಾಗಗಳನ್ನು ತಯಾರಿಸುತ್ತಿದೆ. ಹೀಗಾಗಿ ಉಡಾವಣೆಗೆ ಬೇಕಾದ ರಾಕೆಟ್ ಖರ್ಚು ಕೂಡ ತುಂಬಾ ಕಡಿಮೆ ಆಗುತ್ತೆ.. 

ಇದೇ ಥಿಯರಿಯನ್ನು ಎಲಾನ್‌ ಮಸ್ಕ್ ಅವರು ಟೆಸ್ಲಾ ಕಾರ್ ಕಂಪನಿಯಲ್ಲಿ ಕೂಡ ಅಪ್ಲೈ ಮಾಡಿದ್ರು. ಕಾರ್ ಬ್ಯಾಟರಿ ಸೇರಿದಂತೆ ಎಲ್ಲ ಬಿಡಿ ಭಾಗಗಳನ್ನು ಸಾಧ್ಯವಾದಷ್ಟೂ ತಾವೇ ಮ್ಯಾನ್ಯುಫ್ಯಾಕ್ಚರ್ ಮಾಡಿದರು. ಇದರಿಂದ ಕಾರಿನ ಟೆಸ್ಲಾ ಕಾರಿನ ಬೆಲೆಯನ್ನು ತುಂಬಾನೇ ಕಡಿಮೆಗೆ ಇಳಿಸಲು ಸಾಧ್ಯವಾಯ್ತು. ಹೀಗೆ ಎಲ್ಲಾ ಕಡೆ ಎಲಾನ್ ಮಸ್ಕ್ ಅವರು 'ಫಸ್ಟ್ ಪ್ರಿನ್ಸಿಪಲ್ ಥಿಂಕಿಂಗ್‌' (First Principle Thinking) ಅಳವಡಿಸಿಕೊಂಡು ಸಕ್ಸಸ್ ಕಂಡರು. 

ಶಂಕರ್ ಅಶ್ವಥ್ 'ಕಣ್ಣೀರ ಕಥೆ'ಗೆ ಹೀಗೆ ಕಾಮೆಂಟ್ ಹಾಕೋದಾ? ಅಂಗೈ ತೋರ್ಸಿ ಅವಲಕ್ಷಣ ಕೇಳ್ಬೇಕಿತ್ತಾ?   

ಬೇರೆಯವರು ಸಮಸ್ಯೆಯನ್ನು ಕಂಡಾಗ, ಫಸ್ಟ್ ಪ್ರಿನ್ಸಿಪಲ್ ಥಿಂಕಿಂಗ್‌ ಬಗ್ಗೆ (First Principle Thinking) ಯೋಚಿಸದೇ ಎಲ್ಲರೂ ನಾರ್ಮಲ್ ಆಗಿ ಅಪ್ಲೈ ಮಾಡೋದನ್ನೇ ಮಾಡಿ ಸಮಸ್ಯೆಯಲ್ಲೆ ಬಿದ್ದು ಒದ್ದಾಡುತ್ತಾರೆ. ಆದರೆ, ಎಲಾನ್ ಮಸ್ಕ್ ಅಂಥವರು ಸಮಸ್ಯೆಯ ಮೂಲವನ್ನು ಅರಿತುಕೊಂಡು ಅದರ ಪರಿಹಾರಕ್ಕೆ ಪ್ರಯತ್ನಿಸಿ ಯಶಸ್ಸು ಸಾಧಿಸುತ್ತಾರೆ. ಇದೇ ಯಶಸ್ಸಿನ ಗುಟ್ಟು, ಇದನ್ನು ಜಗತ್ತಿನಲ್ಲಿ ಫಸ್ಟ್ ಪ್ರಿನ್ಸಿಪಲ್ ಥಿಂಕಿಂಗ್‌ ಬಗ್ಗೆ (First Principle Thinking) ಹೆಸರಿನಿಂದ ಕರೆಯುತ್ತಾರೆ. ಅಂದಹಾಗೆ, ಈ ಸ್ಟೋರಿ 'ಸಿಜಿಎನ್ ಕ್ರಿಯೇಟಿವಿಟಿ (CGN Creativity) ಯೂ ಟ್ಯೂಬ್‌ ಚಾನೆಲ್‌' ವಿಡಿಯೋ. ಈ ಕಥೆಯನ್ನು ಅಲ್ಲಿಂದ ತೆಗೆದುಕೊಳ್ಳಲಾಗಿದೆ. ಲಿಂಕ್ ನೋಡಿ.. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ