ದೀಪಾವಳಿಗೆ ಬಂಪರ್ ಗಿಫ್ಟ್, ಉದ್ಯೋಗಳಿಗೆ ಸಿಗ್ತಿದೆ ಕಾರ್, ಬೈಕು, ಇದ್ಯಾವ ಕಂಪನೀಲಿ?

By Suvarna NewsFirst Published Nov 4, 2023, 12:21 PM IST
Highlights

ದೀಪಾವಳಿ ಹತ್ತಿರ ಬರ್ತಿದೆ. ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಂದರ್ಭದಲ್ಲಿ ಅನೇಕ ಕಂಪನಿಗಳು ಭರ್ಜರಿ ಉಡುಗೊರೆ ನೀಡ್ತಿವೆ. ಕೆಲ ಕಂಪನಿಗಳು ಉದ್ಯೋಗಿಗಳು ಊಹಿಸದಂತ ಗಿಫ್ಟ್ ನೀಡ್ತಿವೆ. 

ದೀಪಾವಳಿ ಹಬ್ಬದಂದು ಪ್ರತಿಯೊಂದು ಕಂಪನಿಯು ತನ್ನ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುತ್ತದೆ. ಈ ಉಡುಗೊರೆಗಳು ಸಿಹಿತಿಂಡಿಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಅನೇಕ ವಸ್ತುಗಳು ಸೇರಿರುತ್ತವೆ. ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಊಹೆಗೆ ಮೀರಿದ ಗಿಫ್ಟ್ ನೀಡುತ್ವೆ. ಉದ್ಯೋಗಿಗಳನ್ನು ಕೆಲ ಕಂಪನಿ ಟ್ರಿಪ್ ಗೆ ಕಳಿಸಿದ್ರೆ ಮತ್ತೆ ಕೆಲ ಕಂಪನಿ ಭರ್ಜರಿ ಉಡುಗೊರೆ ನೀಡುತ್ತದೆ. 

ಹರಿಯಾಣ (Haryana) ದ ಪಂಚಕುಲದಲ್ಲಿರುವ ಮಿಟ್ಸ್‌ಕಾರ್ಟ್ ಫಾರ್ಮಾಸ್ಯುಟಿಕಲ್ ಕಂಪನಿ  ತನ್ನ ಉದ್ಯೋಗಿ (Employee) ಗಳನ್ನು ಅಚ್ಚರಿಗೊಳಿಸಿದೆ. ಈ ಕಂಪನಿ ತನ್ನ 12  ಅತ್ಯುತ್ತಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ (Gift) ಯಾಗಿ 7 ಲಕ್ಷ ರೂಪಾಯಿ ಮೌಲ್ಯದ ಟಾಟಾ ಪಂಚ್ ಕಾರನ್ನು ನೀಡಿದೆ. ಕಂಪನಿಯ ಮಾಲೀಕರಿಂದ ಈ ಅದ್ಭುತ ದೀಪಾವಳಿ ಉಡುಗೊರೆಯನ್ನು ಪಡೆದ ನೌಕರರು ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಇಲ್ಲಿಯವರೆಗೆ ಗುಜರಾತ್ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದ ಉದ್ಯೋಗಿಗಳು ಇಷ್ಟು ದೊಡ್ಡ ಉಡುಗೊರೆಯನ್ನು ಪಡೆದಿರಲಿಲ್ಲ.   ಉತ್ತರ ಭಾರತದ ಯಾವುದೇ ರಾಜ್ಯದಲ್ಲಿ ಈ ರೀತಿಯ ಉಡುಗೊರೆ ಉದ್ಯೋಗಿಗಳಿಗೆ ಸಿಕ್ಕಿರಲಿಲ್ಲ. ಆದ್ರೆ ಈಗ ಫಾರ್ಮಾ ಕಂಪನಿ ತನ್ನ ಉದ್ಯೋಗಿಗಳಿಗೆ ದೊಡ್ಡ ಉಡುಗೊರೆ ನೀಡಿದೆ. ಕಾರುಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ ಉದ್ಯೋಗಿಗಳ ಫೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ದೀಪಾವಳಿ ಬಂಪರ್‌ ಆಫರ್ ನೀಡಿದ ಮುಕೇಶ್ ಅಂಬಾನಿ; ಕೇವಲ 2599 ರೂ. ಸಿಗ್ತಿದೆ ಜಿಯೋ ಸ್ಮಾರ್ಟ್‌ಫೋನ್‌

ಹಲವು ವರ್ಷಗಳ ನೌಕರರ ಪರಿಶ್ರಮದಿಂದ ಇಂದು ನಾನು ಉನ್ನತ ಸ್ಥಾನಕ್ಕೆ ತಲುಪಿದ್ದೇನೆ. ಕೆಲ ಸಮಯದ ಹಿಂದೆ ನಾನು ನನ್ನ ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದೆ. ನನ್ನ ಭರವಸೆಯನ್ನು ಈಡೇರಿಸಿದ್ದೇನೆ. ಸ್ವಂತ ಕಾರು ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ ಎಂದು ಕಂಪನಿಯ ಮಾಲೀಕ ಎಂ.ಕೆ.ಭಾಟಿಯಾ ಹೇಳಿದ್ದಾರೆ.  

ಕಂಪನಿಯ ಮಾಲೀಕ ಭಾಟಿಯಾ ತನ್ನ ಯಾವುದೇ ಉದ್ಯೋಗಿಗಳನ್ನು ಉದ್ಯೋಗಿಗಳು ಎಂದು ಕರೆಯುವುದಿಲ್ಲ. ಪ್ರತಿ ಉದ್ಯೋಗಿಯನ್ನು ಸೆಲೆಬ್ರಿಟಿ ಎಂದು ಭಾವಿಸುತ್ತಾರೆ. ನಾನು ಕಂಪನಿ ಮಾಲಿಕನಲ್ಲ, ಅವರು ಉದ್ಯೋಗಿಗಳಲ್ಲ. ಇತರ ಉದ್ಯೋಗಿಗಳಂತೆ ನಾನು ಕೆಲಸ ಮಾಡ್ತೇನೆ ಎಂದು ಭಾಟಿಯಾ ಹೇಳಿದ್ದಾರೆ. ಶೀಘ್ರದಲ್ಲೇ ಕಂಪನಿಯ 38 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಲು ಯೋಜಿಸಿದೆ. ಆದ್ರೆ ಕಾರನ್ನು ಪಡೆದ ಕೆಲವರು ಮಹಿಳೆಯರು ಸೇರಿದ್ದಾರೆ. ಅವರಿಗೆ ಕಾರು ಚಲಾಯಿಸಲು ಬರೋದಿಲ್ಲ. ಅವರಿಗೆ ಕಾರು ಓಡಿಸುವುದನ್ನು ಕಲಿಸಲಾಗ್ತಿದೆ.

ಉದ್ಯೋಗಿಗೆ ಬರೋಬ್ಬರಿ 4.3 ಕೋಟಿ ರೂ. ಸಂಬಳ ನೀಡುತ್ತೆ ಭಾರತದ ಈ ದಿಗ್ಗಜ ಐಟಿ ಕಂಪೆನಿ!

ಉದ್ಯೋಗಿಗಳಿಗೆ ಬೈಕ್ ಉಡುಗೊರೆ ನೀಡಿದ ಕಂಪನಿ : ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಅನೇಕ ಕಂಪನಿ ಉದ್ಯೋಗಿಗಳು ಬಂಪರ್ ಹೊಡೆದಿದ್ದಾರೆ. ನೀಲಗಿರಿಯ ಎಸ್ಟೇಟ್ ಮಾಲೀಕರು ತಮ್ಮ ಉದ್ಯೋಗಿಗಳಿಗೆ ತಮ್ಮ ಆಯ್ಕೆಯ ದ್ವಿಚಕ್ರ ವಾಹನಗಳು, LCD ಟಿವಿಗಳು ಮತ್ತು ನಗದು ಬೋನಸ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಉದ್ಯೋಗಿಗಳನ್ನು ಖುಷಿಗೊಳಿಸಿದ್ದಾರೆ. ತಿರುಪ್ಪೂರಿನ ವಂಜಿಪಾಳ್ಯಂ ಮೂಲದ ಪಿ ಶಿವಕುಮಾರ್ ಅವರು 190 ಎಕರೆ ಟೀ ಎಸ್ಟೇಟ್ ಮತ್ತು ಕೋಟಗಿರಿ ಬಳಿಯ 315 ಎಕರೆ ಆಸ್ತಿಯಲ್ಲಿ ತರಕಾರಿ ಮತ್ತು ಹೂವಿನ ತೋಟವನ್ನು ಹೊಂದಿದ್ದಾರೆ. ಕಳೆದ ಎರಡು ದಶಕಗಳಿಂದ ಎಸ್ಟೇಟ್ ನಲ್ಲಿ ಒಟ್ಟು 627 ನೌಕರರು ಕೆಲಸ ಮಾಡುತ್ತಿದ್ದಾರೆ. 

ಶಿವಕುಮಾರ್ ಅವರು ತಮ್ಮ ತಂದೆಯ ಉಡುಪು ತಯಾರಿಕಾ ಘಟಕಗಳನ್ನು ಸಹ ನಿರ್ವಹಿಸುತ್ತಿದ್ದಾರೆ. ಶಿವಕುಮಾರ್ ಕಳೆದ ಐದು ವರ್ಷಗಳಿಂದ ಗೃಹೋಪಯೋಗಿ ಉಪಕರಣಗಳು ಮತ್ತು ನಗದು ಬೋನಸ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಈ ವರ್ಷ ಮ್ಯಾನೇಜರ್, ಸೂಪರ್ ವೈಸರ್, ಸ್ಟೋರ್ ಕೀಪರ್, ಕ್ಯಾಷಿಯರ್, ಫೀಲ್ಡ್ ಸ್ಟಾಫ್, ಡ್ರೈವರ್ ಗಳಂತಹ 15 ಉದ್ಯೋಗಿಗಳಿಗೆ ತಲಾ 2 ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಖರೀದಿಸಿದ್ದಾರೆ.

ಶಿವಕುಮಾರ್ ಕೆಲಸ ಮೆಚ್ಚುವಂತಹದ್ದು, ಕಾರ್ಮಿಕರ ಮಕ್ಕಳಿಗೆ ಆಂಗ್ಲ ಭಾಷೆ ಶಿಕ್ಷಣ ಬೇಕು ಎನ್ನುವ ಕಾರಣಕ್ಕೆ ಪಂಚಾಯತ್ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಇಂಗ್ಲೀಷ್ ಶಿಕ್ಷಕರನ್ನು ನೇಮಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರಿಗೆ ಸಂಬಳ ನೀಡುತ್ತಿದ್ದಾರೆ.
 

click me!