ಇಂದಿನ ಪೆಟ್ರೋಲ್, ಡೀಸೆಲ್ ರೇಟ್ ಕೇಳಿದ್ರಾ?: ಜೇಬು ಗಟ್ಟಿಗಿರಲಿ!

By Web DeskFirst Published 30, Aug 2018, 3:52 PM IST
Highlights

ತೈಲದರಲ್ಲಿ ಮತ್ತೆ ಭಾರೀ ಏರಿಕೆ! ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ! ಕಚ್ಚಾ ತೈಲ ದರದಲ್ಲಿ ಏರಿಕೆಯೇ ಬೆಲೆ ಏರಿಕೆಗೆ ಕಾರಣ! ರೂಪಾಯಿ ಮೌಲ್ಯ ಕುಸಿತವೂ ತೈಲದರ ಏರಿಕೆಗೆ ಕಾರಣ

ನವದೆಹಲಿ(ಆ.30): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಏರಿಕೆಯಾಗುತ್ತಿರುವ ಬೆನ್ನಲ್ಲೇ, ದೇಶದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಿವೆ. ಅದರಂತೆ ಇಂದೂ ಕೂಡ ದೇಶದ ನಾಲ್ಕು ಮಹಾನಗರಗಳಲ್ಲಿ ತೈಲದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 69.93 ರೂ. ಆಗಿದೆ. ಅದರಂತೆ ಮುಂಬೈನಲ್ಲಿ 74.24 ರೂ. ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಡೀಸೆಲ್ ಬೆಲೆ 72.78 ರೂ, ಚೆನ್ನೈನಲ್ಲಿ 73.88 ರೂ. ಗೆ ತಲುಪಿದೆ.

ಇನ್ನು ಪೆಟ್ರೋಲ್ ಬೆಲೆಯಲ್ಲೂ ಏರಿಕೆ ಕಂಡು ಬಂದಿದ್ದು, ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 78.30 ರೂ. ಆಗಿದೆ. ಅದರಂತೆ ಮುಂಬೈನಲ್ಲಿ 85.72 ರೂ. ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 81.23 ರೂ, ಚೆನ್ನೈನಲ್ಲಿ 81.35 ರೂ. ಗೆ ಬಂದು ತಲುಪಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ತೈಲದರದಲ್ಲೂ ಭಾರೀ ಏರಿಕೆ ಕಂಡು ಬರುತ್ತಿದೆ ಎಂದು ತೈಲ ಕಂಪನಿಗಳು ಸ್ಪಷ್ಟನೆ ನೀಡಿವೆ.

Last Updated 9, Sep 2018, 8:47 PM IST