Personal Finance: ಧನ ತ್ರಯೋದಶಿ ದಿನ ಹೂಡಿಕೆ ಇಲ್ಮಾಡಿ, ಲಾಭ ಗಳಿಸಿ

Published : Oct 17, 2022, 12:48 PM IST
Personal Finance: ಧನ ತ್ರಯೋದಶಿ ದಿನ ಹೂಡಿಕೆ ಇಲ್ಮಾಡಿ, ಲಾಭ ಗಳಿಸಿ

ಸಾರಾಂಶ

ಹಬ್ಬದ ದಿನಗಳಲ್ಲಿ ಹೊಸ ಹೂಡಿಕೆ ಮಾಡಲು ಅನೇಕರು ಬಯಸ್ತಾರೆ. ಧನ ತ್ರಯೋದಶಿ ಇದಕ್ಕೆ ಪ್ರಸಿದ್ಧಿ ಪಡೆದಿದೆ. ಈ ದಿನ ಬಂಗಾರದ ಆಭರಣ ಖರೀದಿ ಮಾಡೋರು ಹೆಚ್ಚು. ಆದ್ರೆ ಈ ಬಾರಿ ಆಭರಣದ ಬದಲು ಇಲ್ಲಿ ಹೂಡಿಕೆ ಮಾಡಿ, ಹೆಚ್ಚು ಲಾಭ ಗಳಿಸಿ.  

ಧನ ತ್ರಯೋದಶಿ ದಿನದಂದು ಜನರು ಬಂಗಾರ, ಬೆಳ್ಳಿ ಸೇರಿದಂತೆ ಲೋಹದ ವಸ್ತುಗಳನ್ನು ಖರೀದಿ ಮಾಡ್ತಾರೆ. ಈ ದಿನ ಬಂಗಾರ, ಬೆಳ್ಳಿ ವಸ್ತುಗಳನ್ನು ಖರೀದಿ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಬೆಳ್ಳಿ ಖರೀದಿ ಮಾಡಿದ್ರೆ ಕುಬೇರ ಕೃಪೆ ತೋರುತ್ತಾನೆ ಎಂಬ ನಂಬಿಕೆಯಿದೆ. ಹಾಗೆಯೇ ಬಂಗಾರ ಖರೀದಿ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಇದೇ ಕಾರಣಕ್ಕೆ ಜನರು ಬಂಗಾರ, ಬೆಳ್ಳಿ ಖರೀದಿಗೆ ಧನ ತ್ರಯೋದಶಿ ದಿನವನ್ನು ಆಯ್ಕೆ ಮಾಡಿಕೊಳ್ತಾರೆ. ಈ ದಿನ ನೀವು ಹೂಡಿಕೆ ಕೂಡ ಮಾಡಬಹುದು. ಬಂಗಾರ, ಬೆಳ್ಳಿ ಅಂದ್ರೆ ಅನೇಕರು ಆಭರಣ ಖರೀದಿ ಮಾಡ್ತಾರೆ. ಆಭರಣ ಖರೀದಿ ತಪ್ಪಲ್ಲ. ಆದ್ರೆ ಅದನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಸವಾಲು. ಮನೆಯಲ್ಲಿ ಚಿನ್ನವಿದ್ರೆ ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಸ್ಥಿತಿ ಈಗಿದೆ. ಅದೇ ಬ್ಯಾಂಕ್ ಲಾಕರ್ ನಲ್ಲಿಟ್ಟರೆ ಅದ್ರ ನಿರ್ವಹಣೆಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಅದೆಲ್ಲದಕ್ಕಿಂತ ಬಂಗಾರದ ಮೇಲೆ ನೀವು ಹೂಡಿಕೆ ಹೀಗೆ ಮಾಡಿದ್ರೆ ಒಳ್ಳೆಯದು. ಅದು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ.

ಬಂಗಾರ (Gold) ದ ಮೇಲೆ ಹೂಡಿಕೆ (Investment) ಅಂದ್ರೆ ನೀವು ಬಂಗಾರ ಖರೀದಿ ಮಾಡಬೇಕಾಗಿಲ್ಲ. ಷೇರು (share) ಅಥವಾ ಬಾಂಡ್ ಖರೀದಿ ಮಾಡುವ ಮೂಲಕ ನೀವು ಬಂಗಾರದ ಮೇಲೆ ಹೂಡಿಕೆ ಮಾಡಬಹುದು.

ಗೋಲ್ಡ್ ಇಟಿಎಫ್‌ ನಲ್ಲಿ ಮಾಡಿ ಹೂಡಿಕೆ : ಷೇರು ವಿನಿಮಯದ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀವು ಹೊಂದಿದ್ದರೆ ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಇದ್ರಿಂದ ನೀವು ಸಾಕಷ್ಟು ಲಾಭವನ್ನು ಪಡೆಯಬಹುದು. ಡಿ-ಮೆಟಿರಿಯ ಲೈಸ್ಡ್ ರೂಪದಲ್ಲಿ ಚಿನ್ನವನ್ನು ಹೂಡಿಕೆ ಮಾಡುವ ಸೌಲಭ್ಯ ಇದರಲ್ಲಿ ಲಭ್ಯವಿದೆ. ಅಂದ್ರೆ ನೀವು ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಚಿನ್ನವನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಕಾಗದದ ರೂಪದಲ್ಲಿ ಚಿನ್ನ ಖರೀದಿ ಮಾಡಲು ಇದು ಅತ್ಯುತ್ತಮ ಮಾರ್ಗವಾಗಿದೆ. ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಮತ್ತು ಆನ್‌ಲೈನ್ ಟ್ರೇಡಿಂಗ್ ಖಾತೆಗಳನ್ನು ತೆರೆಯಬಹುದು. ನೀವು ಇದ್ರಲ್ಲಿ ಬೆಲೆ ಏರಿಕೆ, ಇಳಿಕೆ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು.

Personal Finance : ಸ್ವಂತ ಉದ್ಯೋಗ ಬಯಸುವ ಬಡವರಿಗೆ ಇಲ್ಲಿ ಸಿಗ್ತಿದೆ ನೆರವು

ಸಾರ್ವಭೌಮ ಗೋಲ್ಡ್ ಬಾಂಡ್ ನಲ್ಲೂ ಇದೆ ಲಾಭ : ಸಾರ್ವಭೌಮ ಗೋಲ್ಡ್ ಬಾಂಡ್ (SGB) ನಲ್ಲಿ ಕೂಡ ನೀವು ಚಿನ್ನದ ಹೂಡಿಕೆ ಮಾಡಬಹುದು. ಸಾರ್ವಭೌಮ ಗೋಲ್ಡ್ ಬಾಂಡ್ (SGB) ಸರ್ಕಾರಿ ಭದ್ರತೆ ಇರುವ ಯೋಜನೆಯಾಗಿದೆ. ಹೂಡಿಕೆ ಮಾಡುವ ವೇಳೆ ಜನರು ನಗದು ರೂಪದಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ. ಬಾಂಡ್ ಪಕ್ವವಾದಾಗ ಹೂಡಿಕೆದಾರರು ಅದನ್ನು ರಿಡೀಮ್ ಮಾಡಿಕೊಳ್ಳುವುದು ಸುಲಭ. ನೀವು ಸುಮಾರು 10 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಇದನ್ನು ಅತ್ಯಂತ ಸುರಕ್ಷಿತ ವಿಧಾನವೆಂದು ಪರಿಗಣಿಸಲಾಗುತ್ತದೆ. ಸರ್ಕಾರಿ ಭದ್ರತೆ ಹೊಂದಿರುವ ಈ ಯೋಜನೆ ಹೆಚ್ಚು ಸುರಕ್ಷಿತವಾಗಿದೆ.  ಭೌತಿಕವಾಗಿ ಚಿನ್ನ (Physical gold) ಇಡಲು ಇದು ಉತ್ತಮ ಆಯ್ಕೆಯಾಗಿದೆ. ಆರ್‌ಬಿಐ ಹೊಸ ಸರಣಿಯ ಸಾರ್ವಭೌಮ ಗೋಲ್ಡ್ ಬಾಂಡ್ ಸ್ಕೀಮ್ ಪ್ರಾರಂಭಿಸಿದಾಗ ಬೆಲೆ ನವೀಕರಣ ಮಾಡಿದೆ. ಒಂದು ಗ್ರಾಂಗೆ ಕನಿಷ್ಠ 5147 ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು ಎಂದು ಆರ್ ಬಿಐ ಹೇಳಿದೆ. ಸಾರ್ವಭೌಮ ಗೋಲ್ಡ್ ಬಾಂಡ್ (Gold Bond) ನಲ್ಲಿ ನೀವು ಡಿಜಿಟಲ್ ರೂಪದಲ್ಲಿಯೂ (Digital Format) ಹೂಡಿಕೆ ಮಾಡಬಹುದು. ಆನ್‌ಲೈನ್ ಶಾಪಿಂಗ್‌ ವೇಳೆ ನಿಮಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ ಗರಿಷ್ಠ 4 ಕೆಜಿ ಚಿನ್ನವನ್ನು ನೀವು ಇಡಬಹುದು.

Personal Finance : ಕ್ರೆಡಿಟ್ ಕಾರ್ಡ್ ಮೂಲಕ ನಗದು ವಿತ್ ಡ್ರಾ ಮಾಡ್ತೀರಾ? ಎಚ್ಚರ..

ಗೋಲ್ಡ್ ಫಂಡ್ ಆಫ್ ಫಂಡ್‌ ನಲ್ಲಿ ಹೂಡಿಕೆ : ನೀವು ಎಫ್ ಒಎಫ್ ಅಂದರೆ ಗೋಲ್ಡ್ ಫಂಡ್ ಆಫ್ ಫಂಡ್‌ ನಲ್ಲಿ ಹೂಡಿಕೆ ಮಾಡಿದ್ರೆ ನಿಮಗೆ ಭದ್ರತೆ ಜೊತೆಗೆ ಉತ್ತಮ ಆದಾಯ ಸಿಗುತ್ತದೆ ಎಂಬುದು ನೆನಪಿರಲಿ. ದೀರ್ಘಕಾಲ ಹೂಡಿಕೆ ಮಾಡಲು ಬಯಸುವವರು ಗೋಲ್ಡ್ ಫಂಡ್ ಆಫ್ ಫಂಡ್‌ ಆಯ್ಕೆ ಮಾಡಿಕೊಳ್ಳಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!