Dearness Relief Hike: ಕೇಂದ್ರ ಸರ್ಕಾರಿ ಪಿಂಚಣಿದಾರರ ಡಿಆರ್ ಹೆಚ್ಚಳ; ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ?

By Suvarna News  |  First Published May 13, 2022, 8:02 PM IST

*ಡಿಯರ್ ನೆಸ್  ರಿಲೀಫ್  ಮೂಲ ಪಿಂಚಣಿಯ ಶೇ.368ರಿಂದ ಶೇ.381 ಕ್ಕೆ ಏರಿಕೆ
*ಡಿಆರ್ ಹೆಚ್ಚಳ 2022ರ ಜನವರಿ 1ರಿಂದಲೇ ಅನ್ವಯ
*ನಿವೃತ್ತಿ ಹೊಂದಿದ ಜೀವಂತವಿರುವ ಸಿಪಿಎಫ್ ಫಲಾನುಭವಿಗಳಿಗೆ ಡಿಆರ್ ಹೆಚ್ಚಳ


ನವದೆಹಲಿ (ಮೇ 13): ನಿರ್ದಿಷ್ಟ ವರ್ಗದ ಸರ್ಕಾರಿ ಉದ್ಯೋಗಿಗಳ (Government employees) ಡಿಯರ್ ನೆಸ್  ರಿಲೀಫ್  (DR) ಅನ್ನು ಮೂಲ ಪಿಂಚಣಿಯ ಶೇ.368ರಿಂದ ಶೇ.381 ಕ್ಕೆ ಏರಿಕೆ ಮಾಡಲಾಗಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ  ಹಾಗೂ ಪಿಂಚಣಿ ಸಚಿವಾಲಯದ (Ministry of Personnel, Public Grievances and Pensions) ಅಧಿಕೃತ ಅಧಿಸೂಚನೆ ಪ್ರಕಾರ 1960ರ ನವೆಂಬರ್ 18 ಹಾಗೂ 1985ರ ಡಿಸೆಂಬರ್ 31ರ ನಡುವೆ ಸೇವೆಯಿಂದ (service) ನಿವೃತ್ತಿ ( retired) ಹೊಂದಿದ ಜೀವಂತವಿರುವ ಸಿಪಿಎಫ್ (CPF) ಫಲಾನುಭವಿಗಳಿಗೆ ಡಿಆರ್ (DR) ಹೆಚ್ಚಳದ ಸೌಲಭ್ಯ ಸಿಗಲಿದೆ.

ಗ್ರೂಪ್ ಎ, ಬಿ, ಸಿ, ಡಿಯ ಕ್ರಮವಾಗಿ 3,000ರೂ., 1,000ರೂ., 750ರೂ. ಹಾಗೂ  650 ರೂ. ಮೂಲ ಪಿಂಚಣಿ ಪಡೆಯುತ್ತಿರುವ ಸೇವೆಯಿಂದ ನಿವೃತ್ತರಾಗಿದ್ದು, ಜೀವಂತವಿರುವ ಸಿಪಿಎಫ್ (CPF)  ಫಲಾನುಭವಿಗಳ ಡಿಆರ್ ಅನ್ನು (DR) 2022ರ ಜನವರಿ 1ರಿಂದಲೇ ಅನ್ವಯಿಸುವಂತೆ ಮೂಲ ಪಿಂಚಣಿಯ ಶೇ.368ರಿಂದ ಶೇ.381 ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಮೇ 11ರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.5ನೇ ವೇತನ ಆಯೋಗದಲ್ಲಿ ನಿಗದಿಪಡಿಸಿರುವ ಮೂಲ ಪಿಂಚಣಿಯ (Basic ex-gratia) ಡಿಎಯನ್ನು   2022ರ ಜನವರಿ 1ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 

Tap to resize

Latest Videos

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್ ಗ್ರೀನ್‌ ಸಿಗ್ನಲ್!

1986 ರ ಜನವರಿ 1ಕ್ಕಿಂತ ಮೊದಲು ಸೇವೆಯಿಂದ ನಿವೃತ್ತರಾದ ಅಥವಾ 1986 ರ ಜನವರಿ 1ಕ್ಕಿಂತ ಮುನ್ನ ಸೇವೆಯಲ್ಲಿರುವಾಗಲೇ ಮೃತಪಟ್ಟ ಸಿಪಿಎಫ್ ಫಲಾನುಭವಿಯ  ವಿಧವೆ ಪತ್ನಿಯರು ಹಾಗೂ ಮಕ್ಕಳು  ಮಾಸಿಕ 645 ರೂ. ಪರಿಷ್ಕೃತ ಪಿಂಚಣಿ ಪಡೆಯುತ್ತಿರುವವರು ಮೊದಲಿಗೆ ಮೂಲ ಪಿಂಚಣಿಯ ಶೇ.360ರಿಂದ ಶೇ.373 ಹೆಚ್ಚಳದ ಪ್ರಯೋಜನ ಪಡೆಯಲಿದ್ದಾರೆ. ಇದರ ಎರಡನೇ ಫಲಾನುಭವಿಗಳು  1960ರ ನವೆಂಬರ್ 18ಕ್ಕೂ ಮುನ್ನ ಸಿಪಿಎಫ್ ಪ್ರಯೋಜನದ ಅಡಿಯಲ್ಲಿ ನಿವೃತ್ತರಾದ ಕೇಂದ್ರ ಸರ್ಕಾರಿ ಉದ್ಯೋಗಿಗಳು. ಇವರು 654ರೂ., 659ರೂ., 703ರೂ. ಹಾಗೂ 965ರೂ. ಪಿಂಚಣಿ (Pension) ಪಡೆಯುತ್ತಿದ್ದಾರೆ. 

ಜುಲೈನಲ್ಲಿ ತುಟ್ಟಿ ಭತ್ಯೆ (DA) ಹೆಚ್ಚಳ?
ಕೇಂದ್ರ ಸರ್ಕಾರಿ ನೌಕರರು (employees)  ಕೂಡ ವೇತನಕ್ಕೆ (Salary) ಸಂಬಂಧಿಸಿ ಶೀಘ್ರದಲ್ಲಿ ಶುಭ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ.  ವರದಿಗಳ ಪ್ರಕಾರ ಜುಲೈ (July) ಅಥವಾ ಆಗಸ್ಟ್ ನಲ್ಲಿ (August) ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆಯನ್ನು (DA) ಹೆಚ್ಚಳ ಮಾಡುವ ಸಾಧ್ಯತೆಯಿದೆ. ವರದಿಗಳ ಪ್ರಕಾರ ತುಟ್ಟಿಭತ್ಯೆಯು ಜುಲೈನಲ್ಲಿ ಇನ್ನೂ ನಾಲ್ಕು ಪ್ರತಿಶತದಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಇದ್ರಿಂದ ಡಿಎ (DA) ಶೇ.38ಕ್ಕೆ ಏರಿಕೆಯಾಗಲಿದೆ.

Retail Inflation: 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಏಪ್ರಿಲ್ ನಲ್ಲಿ ಶೇ.7.79ಕ್ಕೆ ಏರಿಕೆ

ಮಾರ್ಚ್‌ನಲ್ಲಿ, ಕೇಂದ್ರ ಸಚಿವ ಸಂಪುಟವು 7ನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯೆ (ಡಿಎ) ಯಲ್ಲಿ ಶೇಕಡಾ 3 ರಷ್ಟು ಹೆಚ್ಚಿಸಲು ಅನುಮೋದಿಸಿತು, ಹೀಗಾಗಿ ಡಿಎಯನ್ನು ಮೂಲ ಆದಾಯದ ಶೇಕಡಾ 34 ಕ್ಕೆ ತೆಗೆದುಕೊಂಡಿತು. ಈ ಕ್ರಮದಿಂದ 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಲಾಭ ಪಡೆಯುತ್ತಿದ್ದಾರೆ.  ಚಿಲ್ಲರೆ ಹಣದುಬ್ಬರದ ದತ್ತಾಂಶದ ಆಧಾರದ ಮೇಲೆ ಜನವರಿ ಮತ್ತು ಜುಲೈ ನಲ್ಲಿ ವರ್ಷಕ್ಕೆ ಎರಡು ಬಾರಿ ಡಿಎ (DA) ಮತ್ತು ಡಿಆರ್  (DR) ಪರಿಷ್ಕರಿಸಲಾಗುತ್ತದೆ.ದೇಶದಲ್ಲಿ ಚಿಲ್ಲರೆ ಹಣದುಬ್ಬರ ಏಪ್ರಿಲ್ ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟ ಶೇ.7.79ಕ್ಕೆ ಏರಿಕೆಯಾಗಿದ್ದು, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಡಿಎ ಅನ್ನು ಸರ್ಕಾರಿ ಉದ್ಯೋಗಿಗಳಿಗೆ ನೀಡಿದರೆ, ಡಿಆರ್ ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ. 

click me!