* ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರ
* ಉಪ್ಪಿನಿಂದ ಸೋಪಿನವರೆಗೆ.... ಬೆಲೆ ಹೆಚ್ಚಳವಿಲ್ಲ, ಆದ್ರೆ ಪ್ರಮಾಣ ಕಡಿಮೆ
* ದೈನಂದಿನ ಜೀವನದಲ್ಲಿ ಬಳಸುವ ಎಲ್ಲಾ ವಸ್ತುಗಳ ಗಾತ್ರ ಈಗ ಚಿಕ್ಕದಾಗಿದೆ
ನವದೆಹಲಿ(ಮೇ.13): ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ, ಅನೇಕ ಕಂಪನಿಗಳು ತಮ್ಮ ಪ್ಯಾಕೆಟ್‌ಗಳ ಬೆಲೆಯನ್ನು ಹೆಚ್ಚಿಸಿಲ್ಲ. ಅರೇ... ಹೌದಾ ಇದು ಒಳ್ಳೆಯದೇ ಅಲ್ವಾ ಎಂದು ನೀವು ಯೋಚಿಸಬಹುದು. ಆದರೆ ಇದು ಕೇವಲ ಅರ್ಧ ಸತ್ಯ. ಇನ್ನರ್ಧ ಸತ್ಯವೆಂದರೆ ಕಂಪನಿಗಳು ಪ್ಯಾಕೆಟ್‌ಗಳಲ್ಲಿ ಬರುವ ಸರಕುಗಳ ಪ್ರಮಾಣವನ್ನೇ ಕಡಿಮೆ ಮಾಡಿದ್ದಾರೆ. ಭುಜಿಯಾ ಅಥವಾ ಸಾಬೂನು.. ಹೀಗೆ ನೀವು ದೈನಂದಿನ ಜೀವನದಲ್ಲಿ ಬಳಸುವ ಎಲ್ಲಾ ವಸ್ತುಗಳ ಗಾತ್ರ ಈಗ ಚಿಕ್ಕದಾಗಿದೆ.
ಅವರ ಪ್ಯಾಕೆಟ್‌ಗಳು ಅಥವಾ ಪ್ಯಾಕ್‌ಗಳು ಹಗುರವಾಗಿರುವುದಕ್ಕೆ ಕಾರಣ ಹಣದುಬ್ಬರ, ಆದರೆ ಬಹುತೇಕ ಎಲ್ಲಾ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಬೇಡಿಕೆಯನ್ನು ಕಾಪಾಡಿಕೊಳ್ಳಲು ಈ ತಂತ್ರವನ್ನು ಅಳವಡಿಸಿಕೊಂಡಿವೆ. ಪ್ಯಾಕ್ ಹಗುರವಾದಾಗ, ಗ್ರಾಹಕರು ಒಂದೇ ಹೊಡೆತದಲ್ಲಿ ಹಣದುಬ್ಬರವನ್ನು ಅನುಭವಕ್ಕೆ ಬರುವುದಿಲ್ಲ, ಆದರೆ ದರವನ್ನು ಹೆಚ್ಚಿಸುವುದರಿಂದ ಹಣದುಬ್ಬರವು ಗೋಚರಿಸುತ್ತದೆ ಮತ್ತು ಗ್ರಾಹಕರು ಆ ವಸ್ತುವನ್ನು ಖರೀದಿಸುವುದನ್ನು ನಿಲ್ಲಿಸಬಹುದು ಎಂಬುವುದು ಕಂಪನಿಗಳ ಲೆಕ್ಕಾಚಾರ.
ಸ್ಥಿರ ಬೆಲೆಯ ವಸ್ತುಗಳ ತೂಕವನ್ನು ಕಡಿಮೆ ಮಾಡುವ ಮೂಲಕ ಕಂಪನಿಗಳು ಹೆಚ್ಚಿನ ಇನ್‌ಪುಟ್ ಬೆಲೆಯನ್ನು ಅಂದರೆ ಹೆಚ್ಚಿನ ವೆಚ್ಚದ ಬೆಲೆಯನ್ನು ಸರಿಹೊಂದಿಸುತ್ತಿವೆ. ಕಡಿಮೆ ಆದಾಯ ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಬದಲು ಗಾತ್ರ ಅಥವಾ ತೂಕವನ್ನು ಕಡಿಮೆ ಮಾಡುವ ನೀತಿಯನ್ನು ಅವರು ಅಳವಡಿಸಿಕೊಂಡಿದ್ದಾರೆ. ಖಾದ್ಯ ತೈಲಗಳು, ಧಾನ್ಯಗಳು ಮತ್ತು ಇಂಧನದ ಬೆಲೆಗಳು ಏರುತ್ತಿರುವ ನಡುವೆ, ಯೂನಿಲಿವರ್ ಪಿಎಲ್‌ಸಿಯ ಭಾರತೀಯ ಅಂಗ ಮತ್ತು ದೇಶೀಯ ಗ್ರಾಹಕ ಸರಕುಗಳ ಕಂಪನಿ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್, ಡಾಬರ್ ಇಂಡಿಯಾ ಲಿಮಿಟೆಡ್ ಇನ್ನಿತರರು ತಮ್ಮ ಅತೋ ಅಗ್ಗದ ಪ್ಯಾಕೇಜ್‌ಗಳ ತೂಕ ಮತ್ತಷ್ಟು ಹಗುರಗೊಳಿಸುತ್ತಿವೆ.
ಅಮೆರಿಕದಲ್ಲೂ ಇದೇ ತಂತ್ರ
ಕಂಪನಿಗಳು ಪ್ಯಾಕೆಟ್‌ಗಳ ತೂಕವನ್ನು ಕಡಿಮೆ ಮಾಡುವುದು ಭಾರತಕ್ಕೆ ಹೊಸ ವಿಷಯವಲ್ಲ ಎಂದು ತಜ್ಞರು ಹೇಳಿ ದ್ದಾರೆ. US ನಲ್ಲಿ, ಸಬ್‌ವೇ ರೆಸ್ಟೋರೆಂಟ್‌ಗಳು, ಡೊಮಿನೊಸ್ ಪಿಜ್ಜಾ ಸೇರಿದಂತೆ ಇತರ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡಲು ಉತ್ಪನ್ನವನ್ನು ಕಡಿಮೆ ಮಾಡುವ ತಂತ್ರವನ್ನು ಅಳವಡಿಸಿಕೊಂಡಿವೆ. ಕಳೆದ ನಾಲ್ಕು ತಿಂಗಳುಗಳಿಂದ ಭಾರತೀಯ ಗ್ರಾಹಕ ಬೆಲೆ ಅಂದರೆ ಹಣದುಬ್ಬರವು ಕೇಂದ್ರ ಬ್ಯಾಂಕ್‌ನ ಗುರಿಯಾದ ಶೇಕಡಾ 6 ರಷ್ಟು ಗರಿಷ್ಠ ಮಿತಿಗಿಂತ ಹೆಚ್ಚಿರುವ ಸಮಯದಲ್ಲಿ ಕಂಪನಿಗಳು ಈ ತಂತ್ರವನ್ನು ಅಳವಡಿಸಿಕೊಂಡಿವೆ. ಏಪ್ರಿಲ್‌ನಲ್ಲಿ, ಹಣದುಬ್ಬರ ದರವು 8 ವರ್ಷಗಳ ಗರಿಷ್ಠ ಮಟ್ಟವಾದ ಸುಮಾರು 7.8 ಪ್ರತಿಶತವನ್ನು ತಲುಪಿದೆ.
ಪ್ರಮಾಣವನ್ನು ಕಡಿಮೆ ಮಾಡುವುದು ಒಂದೇ ಪರಿಹಾರ
ಹಿಂದುಸ್ತಾನ್ ಯೂನಿಲಿವರ್ ಮುಖ್ಯ ಹಣಕಾಸು ಅಧಿಕಾರಿ ರಿತೇಶ್ ತಿವಾರಿ ಅವರು ಲೈವ್‌ಮಿಂಟ್‌ನಲ್ಲಿ “ಮುಂದಿನ 2 ರಿಂದ 3 ತ್ರೈಮಾಸಿಕಗಳಲ್ಲಿ ನಾವು ಹೆಚ್ಚು ಹಣದುಬ್ಬರವನ್ನು ನೋಡುತ್ತೇವೆ. ಕೆಲವು ಪ್ಯಾಕ್‌ಗಳಲ್ಲಿನ ಪ್ರಮಾಣವನ್ನು ಕಡಿಮೆ ಮಾಡುವುದು, ಬೆಲೆ ಏರಿಕೆಯನ್ನು ತಡೆಯಲು ನಮ್ಮ ಬಳಿ ಇರುವ ಏಕೈಕ ಮಾರ್ಗವಾಗಿದೆ. ಹಿಂದೂಸ್ತಾನ್ ಯೂನಿಲಿವರ್‌ನ ಉತ್ಪನ್ನದ ಪ್ರಾಮುಖ್ಯತೆಯನ್ನು 10 ರಲ್ಲಿ 9 ಭಾರತೀಯ ಕುಟುಂಬಗಳು ಪ್ರತಿದಿನ ಈ ಕಂಪನಿಯ ಉತ್ಪನ್ನವನ್ನು ಬಳಸುತ್ತಾರೆ ಎಂಬ ಅಂಶದಿಂದ ಅಳೆಯಬಹುದು ಎಂದಿದ್ದಾರೆ