Dealing with Banks: ಭಾರತ ಮತ್ತು ಅಮೆರಿಕ ಬ್ಯಾಂಕ್‌ಗಳ ನಡುವಿನ ವ್ಯತ್ಯಾಸವೇನು? ಸಾಲ ತೆಗೆದುಕೊಳ್ಳುವುದು ಎಲ್ಲಿ ಸುಲಭ?

Published : Aug 12, 2026, 03:16 PM IST
Bank AI Image

ಸಾರಾಂಶ

ಭಾರತ ಮತ್ತು ಅಮೆರಿಕ ಬ್ಯಾಂಕ್‌ಗಳ ನಡುವಿನ ಭಿನ್ನತೆಯನ್ನು ಗಮನಿಸಿರುವ ನೆಟ್ಟಿಗರು ಭಾರತದಲ್ಲಿ ಗ್ರಾಹಕ ಸ್ನೇಹಿ ವಿಶ್ವಾಸರ್ಹ ಬ್ಯಾಂಕ್ ಅಗತ್ಯವಿದೆ. ಉತ್ತಮ ಸ್ಟಾಫ್ಟ್‌ವೇರ್, ಗ್ರಾಹಕರ ಸೇವೆ ಮತ್ತು ದಾಖಲೆಗಳ ಅಗತ್ಯವಿರುವ ಬ್ಯಾಂಕ್ ಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಭಾರತದ ಮೂಲಕದ ಉದ್ಯಮಿಯೊಬ್ಬರು ಎರಡು ದೇಶಗಳಲ್ಲಿ ಬ್ಯಾಂಕ್‌ಗಳಲ್ಲಿ ಲೋನ್ ಮಾಡುವ ಹಾಗೂ ಬ್ಯಾಂಕ್‌ಗಳು ಸಾಲಗಾರರನ್ನು ನಿರ್ಣಹಿಸುವ ವಿಧಾನ ಎಷ್ಟು ಭಿನ್ನವಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಉದ್ಯಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಭಾರತದಲ್ಲಿನ ಬ್ಯಾಂಕ್‌ಗಳ ಮಹತ್ವದ ಮಾಹಿತಿಯನ್ನು ತಿಳಿಸಿದ್ದಾರೆ.

ಶ್ರೇಯನ್ಸ್ ಜೈನ್ ಹೇಳಿದ್ದೇನು?

ವೈ ಕಾಂಬಿನೇಟರ್‌ ಬೆಂಬಲಿಸಿರುವ ಮ್ಯಾನಿಕುಲ್ ಸಂಸ್ಥೆಯ ಸಹ ಸಂಸ್ಥಾಪಕರಾಗಿರುವ ಶ್ರೇಯನ್ಸ್ ಜೈನ್ ಈ ಕುರಿತಂತೆ ವಿವರಣೆ ನೀಡಿದ್ದು, ಭಾರತದ ಬ್ಯಾಂಕ್ಗಳು ಯಾವುದೇ ಸಾಲವನ್ನು ನೀಡಿರುವ ಮುನ್ನ ನೂರಾರು ದಾಖಲೆಗಳನ್ನು ಕೇಳುತ್ತವೆ. ಆದರೆ ಅಮೆರಿಕ ಬ್ಯಾಂಕ್‌ಗಳು ಲೆಕ್ಕಾಚಾರದೊಂದಿಗೆ ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತವೆ ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ಬ್ಯಾಂಕ್‌ಗಳೊಂದಿಗೆ ಈಗಾಗಲೇ ವ್ಯವಹರಿಸುರುವ ಅನುಭವವನ್ನು ಹೊಂದಿರುವ ಜೈನ್ ಅವರು, ಈಗ ಅಮೆರಿಕದಲ್ಲಿಯೂ ಬ್ಯಾಂಕ್‌ಗಳೊಂದಿಗೆ ಸಮನ್ವಯ ನಡೆಸಿ ಸಾಲ ಪಡೆದುಕೊಂಡು ಉದ್ಯಮವನ್ನು ಸ್ಥಾಪನೆ ಮಾಡಿದ್ದಾರೆ. ಈ ಎರಡು ಸಂದರ್ಭದಲ್ಲಿ ಅವರು ಬ್ಯಾಂಕ್‌ಗಳ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗುತ್ತದೆ, ಏಕೆಂದರೆ ನಿಮ್ಮ ದೇಶಗಳು ಯಾವ ಕಡೆ ನಡೆಯುತ್ತಿದೆ ಎಂದು ತಿಳಿಸುತ್ತವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಬ್ಯಾಂಕ್‌ ವ್ಯವಹಾರ!

ವಿಶೇಷ ಎಂದರೆ ಭಾರತದಲ್ಲಿ ಉತ್ತಮ ಹಿನ್ನೆಲೆ ಹಾಗೂ ದಾಖಲೆಗಳನ್ನು ಹೊಂದಿದ್ದರು ಸಾಲ ಪಡೆದುಕೊಳ್ಳುವ ಪ್ರಕ್ರಿಯೆ ಬಹಳ ಕಷ್ಟವಾಗಿರುತ್ತದೆ. ಅಮೆರಿಕದ ಬ್ಯಾಂಕ್‌ಗಳಿಗೆ ನೀವು ಸಾಲ ಪಡೆದುಕೊಳ್ಳಲು ಹೋದರೆ ನಿಮಗೆ ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಸಣ್ಣ ಕ್ರೆಡಿಟ್ ಹಿಸ್ಟರಿ ಇದ್ದರೆ ಸಾಕು. ನಿಮ್ಮ ವಾರ್ಷಿಕ ಆದಾಯದ ಹಲವು ಪಟ್ಟು ಮೌಲ್ಯದ ಸಾಲವನ್ನು ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಬ್ಯಾಂಕಿಂಗ್!

ಆದರೆ, ಭಾರತದಲ್ಲಿ ನೀವು ಸಾಲ ಪಡೆದುಕೊಳ್ಳಬೇಕಾದರೆ, ಉತ್ತಮ ಕ್ರೆಡಿಟ್ ಸ್ಕೋರ್ ಜೊತೆಗೆ ದೀರ್ಘ ಕ್ರೆಡಿಟ್ ಹಿಸ್ಟರಿ, ಆದಾಯ ತೆರಿಗೆ ಮಾಹಿತಿ, ಬ್ಯಾಂಕ್ ಸ್ಟೇಟ್ಮೆಂಟ್, ಸಿಎ ಅನುಮೋದಿಸಿದ ನಿವ್ವಳ ಮೌಲ್ಯದ ಪತ್ರ, ಬ್ಯುಸಿನೆಸ್ ಬ್ಯಾಲೆನ್ಸ್ ಶೀಟ್ ಹೀಗೆ ಹಲವು ದಾಖಲೆಗಳನ್ನು ಪಟ್ಟಿ ಮಾಡುತ್ತಲೇ ಹೋಗಬಹುದು ಎಂದು ಜೈನ್ ಹೇಳಿದ್ದಾರೆ.

ಇಷ್ಟೆಲ್ಲಾ ದಾಖಲೆಗಳನ್ನು ನೀಡಿದ ಬಳಿಕವೂ ನಿಮಗೆ ಸಾಲ ಸಿಗೋದು ಅನುಮಾನ. ಅಲ್ಲದೇ, ಎಲ್ಲಾ ಸರಿಯಾಗಿ ಸಾಲ ನೀಡಲು ಮುಂದಾದರು, ಬ್ಯಾಂಕ್ ನಿಮ್ಮ ವಾರ್ಷಿಕ ವರಮಾನದ ಕೇವಲ 3 ಪಟ್ಟು ಮಾತ್ರ ನೀಡುತ್ತವೆ ಎಂದಿದ್ದಾರೆ. ಬ್ಯಾಂಕ್‌ಗಳು ಸಾಲ ನೀಡಲು ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂದರೆ, ದೊಡ್ಡ ದೊಡ್ಡ ಉದ್ಯಮಗಳ ನಿರ್ಮಾಣಕ್ಕೆ ಹಣ ಸಂಗ್ರಹಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಹಲವು ಜಾಗತಿಕ ಕಂಪನಿಗಳನ್ನು ಹುಟ್ಟು ಹಾಕಲು ಭಾರತ ಹೆಣಗಾಡುತ್ತಿರುವುದಕ್ಕೆ ದೊಡ್ಡ ಉದಾಹರಣೆ ಎಂದಿದ್ದಾರೆ.

ಇನ್ನು, ಜೈನ್ ಅವರ ಪೋಸ್ಟ್‌ಗೆ ಹವರು ಪ್ರತಿಕ್ರಿಯೆ ನೀಡಿದ್ದು, 2011ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿ $ ಎರಡು ಮಿಲಿಯನ್ ಸಾಲ ಪಡೆದುಕೊಂಡಿದ್ದೆ. ಯಾವುದೇ ಎಸ್‌ಎಸ್‌ಎನ್ ಇಲ್ಲದೆ ಸಿಕ್ಕಿತ್ತು. ಇದು ಭಾರತದಲ್ಲಿ ಎಂದಿಗೂ ಸಾಧ್ಯವಿಲ್ಲ. ಯುಎಸ್ ನನಗೆ ವೃತ್ತಿ ಪರವಾಗಿ ದೊಡ್ಡ ನೆರವು ನೀಡಿತ್ತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವರು ಪ್ರತಿಕ್ರಿಯೆ ನೀಡಿ, ಭಾರತದಲ್ಲಿ ಗ್ರಾಹಕ ಸ್ನೇಹಿ ವಿಶ್ವಾಸರ್ಹ ಬ್ಯಾಂಕ್ ಅಗತ್ಯವಿದೆ. ಉತ್ತಮ ಸ್ಟಾಫ್ಟ್‌ವೇರ್, ಗ್ರಾಹಕರ ಸೇವೆ ಮತ್ತು ದಾಖಲೆಗಳ ಅಗತ್ಯವಿರುವ ಬ್ಯಾಂಕ್ ಬೇಕಿದೆ ಎಂದು ಬರೆದುಕೊಂಡಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಸೌದಿ ಜಿಡಿಪಿಗಿಂತಲೂ ಹೆಚ್ಚಾಯ್ತು ಭಾರತದ ಟಾಪ್ ಕುಟುಂಬಗಳ ಆಸ್ತಿ, ಅಂಬಾನಿ ಸಾಮ್ರಾಜ್ಯದ ಅಬ್ಬರಕ್ಕೆ ಇಡೀ ಜಗತ್ತೇ ಶರಣು
Bengaluru Cafe: ಟಿಪ್ಸ್ ಕೊಟ್ರೆ ಡಾನ್ಸ್ ! ಸದ್ದಿಲ್ದೆ ಲಕ್ಷಾಂತರ ರೂ. ಗಳಿಸ್ತಿರೋ ಬೆಂಗಳೂರು ಕೆಫೆ