UAEನ ಮಹಜೂಜ್; ಭಾರಿ ಮೊತ್ತದ ಬಹುಮಾನ ಗೆದ್ದ ಅದೃಷ್ಟಶಾಲಿ ಕನ್ನಡಿಗ!

Published : Oct 14, 2021, 10:07 AM ISTUpdated : Oct 14, 2021, 10:53 AM IST
UAEನ ಮಹಜೂಜ್; ಭಾರಿ ಮೊತ್ತದ ಬಹುಮಾನ ಗೆದ್ದ ಅದೃಷ್ಟಶಾಲಿ ಕನ್ನಡಿಗ!

ಸಾರಾಂಶ

* ಭಾರಿ ಸಂಚಲನ ಮೂಡಿಸುತ್ತಿದೆ UAEನ ಮಹಜೂಜ್ ಡ್ರಾ ಪ್ರದರ್ಶನ * ಮಹಜೂಜ್ ಡ್ರಾ ಪ್ರದರ್ಶನದಲ್ಲಿ ಬಹುಮಾನ ಗೆದ್ದ ಕನ್ನಡಿಗ * ಅಬುಧಾಬಿಯಲ್ಲಿ ಉದ್ಯೋಗಿಯಾಗಿರುವ ಡೇವಿಡ್

ಅಬುಧಾಬಿ(ಅ.13): ಮಹಜೂಜ್‌ನ(Mahzooz) ಮ್ಯಾನೇಜಿಂಗ್ ಆಪರೇಟರ್‌ ಇವಿಂಗ್ಸ್ 45ನೇ ವಾರದ ಲೈವ್‌ ಮಹಜೂಜ್ ಡ್ರಾ ಪ್ರದರ್ಶನದಲ್ಲಿ ಒಂಬತ್ತು ಅದೃಷ್ಟಶಾಲಿಗಳು ಎರಡನೇ ಬಹುಮಾನ ಗೆದ್ದಿದ್ದಾರೆ. ಮಹಜೂಜ್ ಯುಎಇ(UAE) ಸ್ಟುಡಿಯೋದಲ್ಲಿ ನಡೆದ ಡ್ರಾ ಪ್ರದರ್ಶನದಲ್ಲಿ ಈ ಅದೃಷ್ಟಶಾಲಿಗಳು ಬರೋಬ್ಬರಿ  1,000,000 ಅರಬ್ ಎಮಿರೇಟ್ಸ್ ದಿರ್ಹಾಮ್ (2,05,20,690 ಕೋಟಿ)  ಮೊತ್ತವನ್ನು ಹಂಚಿಕೊಂಡಿದ್ದಾರೆ. 

ಒಟ್ಟು ಆರು ಸಂಖ್ಯೆಗಳಲ್ಲಿ ಈ ಅದೃಷ್ಟಶಾಲಿಗಳು ಐದು ನಂಬರ್‌ ಮ್ಯಾಚ್ ಆಗಿವೆ. ಈ ಮೂಲಕ ಪ್ರತಿಯೊಬ್ಬ ವಿಜೇತರು ತಲಾ 111,111ಅರಬ್ ಎಮಿರೇಟ್ಸ್ ದಿರ್ಹಾಮ್ ಗೆದ್ದಿದ್ದಾರೆ. 

ಹೆಚ್ಚುವರಿಯಾಗಿ, 199 ವಿಜೇತರು ತಲಾ 1,000 ದಿರ್ಹಾಮ್ ಪಡೆದರು.ಇದೇ ವೆಳೆ 3,845ಮಂದಿ  35 ದಿರ್ಹಾಮ್ ಗೆದ್ದಿದ್ದಾರೆ.  ಡ್ರಾದಲ್ಲಿ ಗೆದ್ದ ಒಟ್ಟು ಬಹುಮಾನದ ಮೊತ್ತವು 1,333,575 ದಿರ್ಹಾಮ್ ಆಗಿವೆ. 7, 15, 18, 20, 22 ಮತ್ತು 40 ಇವು ಡ್ರಾದಲ್ಲಿ ಬಂದ ವಿನ್ನಿಂಗ್ ನಂಬರ್ ಆಗಿವೆ

ಯುನೈಟೆಡ್ ಅರಬ್ ಎಮಿರೈಟ್ಸ್ ಮೂಲದ ಮಹಜೂಜ್(Mahzooz) ಪ್ರದರ್ಶನ ಇದೀಗ ದೇಶ ವಿದೇಶದಲ್ಲಿ ಭಾರಿ ಪ್ರಖ್ಯಾತಿ ಪಡೆದಿದೆ. ಇದೀಗ  ಇದೇ UAEನ ಡ್ರಾ ಪ್ರದರ್ಶನದಲ್ಲಿ ಕನ್ನಡಿಗ ಡೇವಿಡ್ ಪ್ರಕಾಶ್ ಡಿಸೋಜಾ ಭಾರೀ ಮೊತ್ತದ 2ನೇ ಬಹುಮಾನ ಗೆದ್ದಿದ್ದಾರೆ. 

ಮಂಗಳೂರಿನ(mangaluru) ಮೂಡಬಿದ್ರೆ ಮೂಲದ ಡೇವಿಡ್ ಪ್ರಕಾಶ್ ಅಬು ದಾಭಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಉದ್ಯೋಗಿಯಾಗಿದ್ದಾರೆ. 17 ವರ್ಷದಿಂದ ಅಬುದಾಭಿಯಲ್ಲಿರುವ ಡೇವಿಡ್ ಪ್ರಕಾಶ್, ಕುಟುಂಬವೀಗ ತವರಿನಲ್ಲಿಯೇ ಇದೆ. ಡೇವಿಡ್ ಸಹೋದರ ಈ ಡ್ರಾ ಪ್ರದರ್ಶನ ಕುರಿತು ಡೇವಿಡ್‌ಗೆ ಮಾಹಿತಿ ನೀಡಿದ್ದಾರೆ. ಕಳೆದ 8 ತಿಂಗಳಿನಿಂದ ಮಹಜೂಜ್ ಡ್ರಾ ಪ್ರದರ್ಶನ ಆಡುತ್ತಿರುವ ಡೇವಿಡ್ ಪ್ರಕಾಶ್‌ ಡಿಸೋಜಾಗೆ ಜಾಕ್‍‌ಪಾಟ್ ಹೊಡೆದಿದೆ. ಡೇವಿಡ್ ದುಬಾರಿ ಮೊತ್ತದ ಬಹುಮಾನ ಗೆದ್ದಿದ್ದಾರೆ. ಯುನೈಟೆಡ್ ಅರಬ್ ದಿರ್ಹಾಮ್ ಹಣ ಭಾರತದ ರೂಪಾಯಿಗಳಲ್ಲಿ ಪರಿವರ್ತಿಸಿದರೆ ಹಣ ದುಪ್ಪಟ್ಟಾಗಲಿದೆ.

8 ತಿಂಗಳ ಮೊದಲು ಮಹಜೂಜ್ ಡ್ರಾ ಪ್ರದರ್ಶನದಲ್ಲಿ ಭಾಗವಹಿಸಲು ಆರಂಭಿಸಿದ್ದ ಡೇವಿಡ್ ಬಳಿಕ ಕೆಲ ಕಾಲ ಆಟ ನಿಲ್ಲಿಸಿದ್ದರು. ಆದರೆ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಿದ ಡೇವಿಡ್ ಕೊರೋನಾ ಕಾರಣ ವಿಮಾನ ಇಲ್ಲದೆ ಮಂಗಳೂರಿನಲ್ಲೇ ಉಳಿದುಕೊಂಡಿದ್ದರು. ನಾಲ್ಕು ತಿಂಗಳು ಮನೆಯಲ್ಲೇ ಇದ್ದ ಡೇವಿಡ್ ಮತ್ತೆ ಮಹಜೂಜ್ ಆಟ ಆರಂಭಿಸಿದ್ದಾರೆ. ಡೇವಿಡ್ ಜೊತೆ ಆಡಿದ ಹಲವರು ಬಹುಮಾನ ಗೆಲ್ಲದೇ ಆಟ ನಿಲ್ಲಿಸಿದ್ದರು. ಆದರೆ ಡೇವಿಡ್ ಆಟ ಮುಂದುವರಿಸಿದ್ದರು.

ಡೇವಿಡ್ ಆಟ ಮುಂದುವರಿಸಿದ ಪರಿಣಾಮ ದುಬಾರಿ ಮೊತ್ತವನ್ನೇ ಬಹುಮಾನವಾಗಿ ಪಡೆದುಕೊಂಡಿದ್ದಾರೆ. ಆನ್‌ಲೈನ್ ಮೂಲಕ  ಬಹುಮಾನ ಗೆದ್ದ ಕ್ಷಣವನ್ನು ವೀಕ್ಷಿಸುತ್ತಿದ್ದ ಡೇವಿಡ್ ಸಂತಸದಲ್ಲಿ ಕುಣಿದಾಡಿದ್ದರು. ತಕ್ಷಣ ಭಾರತಕ್ಕೆ ತೆರಳಿದ್ದ ಪತ್ನಿಗೆ ಕರೆ ಮಾಡಿದ್ದರು. ಆದರೆ ತಡರಾತ್ರಿ ಕಾರಣ ಪತ್ನಿ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಪುತ್ರಿಗೆ ಮೆಸೇಜ್ ಕಳುಹಿಸಿದ್ದರು. ಪುತ್ರಿಯರ ಸಂತಸ ದ್ವಿಗುಣ ಆಗಿತ್ತು. ಪುತ್ರಿಯರು ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದರು.

ದುಬಾರಿ ಮೊತ್ತ ಗೆದ್ದ ಡೇವಿಡ್ ಪ್ರಕಾಶ್ ಹಣವನ್ನು ಹೇಗೆ ಬಳಸಬೇಕು, ಎಲ್ಲಿ ಹೂಡಿಕೆ ಮಾಡಬೇಕು ಅನ್ನೋ ಕುರಿತು ಪ್ಲಾನ್ ರೂಪಿಸಿದ್ದಾರೆ. ಮಹಜೂಜ್ ಆಟ ಆಡುವ ಮೊದಲೇ ಡೇವಿಡ್ ಅಬುಧಾಬಿಯಲ್ಲಿ ಅಪಾರ್ಟ್‌ಮೆಂಟ‌ನಲ್ಲಿ ಮನೆ ಖರೀದಿಸಲು ಯೋಚಿಸಿದ್ದರು. 8 ತಿಂಗಳ ಒಳಗೆ ಅಡ್ವಾನ್ಸ್ ಹಣ ಪಾವತಿಸುವಂತೆ ಸೂಚಿಸಿದ್ದರು. ಹೀಗಾಗಿ ಹಣ ಹೊಂದಿಸುವುದು ಹೇಗೆ ಎಂದು ಕುಳಿತಿರುವಾಗಲೇ ಮಹಜೂಜ್ ಲಾಟರಿ ಹಣ ಡೇವಿಡ್ ಪ್ರಕಾಶ್ ಕೈ ಸೇರಿದೆ. ಇವೆಲ್ಲವೂ ದೇವರ ದಯೆಯಿಂದ ಸಾಧ್ಯವಾಗಿದೆ ಎಂದು ಡೇವಿಡ್ ಪ್ರಕಾಶ್ ಡಿಸೋಜ್ ಹೇಳಿದ್ದಾರೆ.

ಡೇವಿಡ್ ಪ್ರಕಾಶ್ ಕುಟುಂಬ:

ಡೇವಿಡ್ ಪ್ರಕಾಶ್ ಡಿಸೋಜಾ , ಪತ್ನಿ ಹಾಗೂ ಇಬ್ಬರು ಪುತ್ರಿಯರು ಚೊಕ್ಕ ಸಂಸಾರ. ಪತ್ನಿ ಕೂಡ ಅಬುದಭಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮೊದಲ ಪುತ್ರಿ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿ ಇದೀಗ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಎರಡನೇ ಪುತ್ರಿ ಮಣಿಪಾಲ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಪದವಿ ಮಾಡುತ್ತಿದ್ದಾರೆ.

ಮಹಜೂಜ್ ಲಾಟರಿ ಆಡುವವರಿಗೆ ಡೇವಿಡ್ ಸಂದೇಶ:

ಹಲವರು ಮಹಜೂಜ್ ಲಾಟರಿ ಗೇಮಿಂಗ್ ಆಡುತ್ತಿದ್ದಾರೆ. ಆದರೆ ಬಹುಮಾನ ಗೆದ್ದಿಲ್ಲ, ಅಥವಾ ಇನ್ಯಾವುದೇ ಕಾರಣಕ್ಕೆ ಆಟ ಅರ್ಧಕ್ಕೆ ನಿಲ್ಲಿಸುವವರೆ ಹೆಚ್ಚು. ಇದರ ಬದಲಾಗಿ ಸ್ಥಿರವಾಗಿ ಆಡಿ, ಗೇಮಿಂಗ್ ಒಳಾರ್ಥವನ್ನು ಅರಿತು ಕೊಂಡರೆ, ಖಂಡಿತವಾಗಿ ಬಹುಮಾನ ಗೆಲ್ಲಲು ಸಾಧ್ಯ ಎಂದು ಡೇವಿಡ್ ಪ್ರಕಾಶ್ ಹೇಳಿದ್ದಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ