Goat Farming: ಅತ್ಯಧಿಕ ಹಣ, ಹಾಲು ನೀಡುವ ಮೇಕೆ ತಳಿ ಯಾವುದು? ಲಕ್ಷಾಧಿಪತಿಯಾಗೋ ಚಾನ್ಸ್

Published : Aug 15, 2026, 12:45 PM IST
Goat Farming

ಸಾರಾಂಶ

Goat Farming: ಮೇಕೆ ಸಾಕಾಣಿಕೆಯು ಹಾಲು ಮತ್ತು ಮಾಂಸದಿಂದ ಉತ್ತಮ ಆದಾಯ ತರುವ ಲಾಭದಾಯಕ ಉದ್ಯಮವಾಗಿದೆ. ಯಶಸ್ವಿ ಸಾಕಾಣಿಕೆಗೆ ಜಮುನಾಪರಿ, ಬಾರ್ಬರಿ, ಬೀಟಲ್, ಮತ್ತು ಓಸ್ಮಾನಬಾದಿಯಂತಹ ವಿವಿಧ ತಳಿಗಳ ಬಗ್ಗೆ ತಿಳಿದುಕೊಂಡು, ನಿಮ್ಮ ಪ್ರದೇಶ ಮತ್ತು ಉದ್ದೇಶಕ್ಕೆ ಸರಿಹೊಂದುವ ತಳಿಯನ್ನು ಆಯ್ಕೆ ಮಾಡುವುದು ಅತ್ಯಗತ್ಯ.

ಇತ್ತೀಚಿನ ದಿನಗಲ್ಲಿ ಯುವ ಸಮುದಾಯ 9 To 5 ಜಾಬ್‌ನಿಂದ ಬೇಸತ್ತು, ಸ್ವಂತ ಉದ್ಯಮದತ್ತ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲಿ ಗ್ರಾಮೀಣ ಭಾಗದವರು ಹಸು ಮತ್ತು ಮೇಕೆ ಸಾಕಾಣಿಕೆಯತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲಿಯೂ ಮೇಕೆ ಸಾಕಾಣಿಕೆ ಲಾಭದಾಯಕ ಉದ್ಯಮ ಎಂದು ಪರಿಗಣಿಸಲಾಗುತ್ತದೆ. ಹಾಲು ಮತ್ತು ಮಾಂಸದಿಂದ ಮೇಕೆ ಸಾಕಾಣಿಕೆಯಿಂದ ಹೆಚ್ಚು ಆದಾಯವನ್ನು ನಿಮ್ಮದಾಗಿಸಿಕೊಳ್ಳಬಹುದು. ಆದ್ರೆ ಮೇಕೆ ಸಾಕಾಣಿಕೆಯಲ್ಲಿ ಯಾವ ತಳಿ ಮುಖ್ಯ ಎಂಬುವುದು ಪ್ರಮುಖವಾಗುತ್ತದೆ. ನಿಮ್ಮ ಪ್ರದೇಶ ಮತ್ತು ಬಜೆಟ್‌ಗೆ ಅನುಗುಣವಾಗಿ ಮೇಕೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಜಮುನಾಪರಿ ತಳಿ

ಈ ತಳಿಯ ಮೇಕೆಗಳು ಹೆಚ್ಚು ತೂಕವನ್ನು ಹೊಂದಿದ್ದು, ಉತ್ತರಪ್ರದೇಶದ ಇಟಾವಾದಲ್ಲಿ ಜನಪ್ರಿಯತೆಯನ್ನು ಹೊಂದಿವೆ. ಉದ್ದವಾದ ಕಿವಿಗಳು ಮತ್ತು ಗಿಳಿಯಂತಹ ಬಾಗಿದ ಮೂಗಿನಂತೆ ಈ ಮೇಕೆಗಳು ಕಾಣಿಸುತ್ತವೆ. ಈ ಮೇಕೆ ದಿನಕ್ಕೆ ಸುಮಾರು 2 ರಿಂದ 3 ಲೀ.ನಷ್ಟು ಗಾಢವಾದ ಹಾಲನ್ನು ನೀಡುತ್ತವೆ. ತೂಕದಿಂದ ಹೆಚ್ಚಿನ ಬೆಲೆಗೆ ಈ ಮೇಕೆಗಳು ಮಾರಾಟಗೊಳ್ಳುತ್ತವೆ.

ಬಾರ್ಬಳಿ ತಳಿ

ಸಣ್ಣ ಪ್ರಮಾಣದ ರೈತರು ಬಾರ್ಬಳಿ ತಳಿಯ ಮೇಕೆ ಆಯ್ಕೆ ಮಾಡಿಕೊಳ್ಳಬಹುದು. ಈ ಮೇಕೆಗಳು ಒಂದೇ ಬಾರಿಗೆ 2ಕ್ಕಿಂತ ಹೆಚ್ಚಿನ ಮರಿ ಹಾಕುವ ಸಾಮರ್ಥ್ಯವನ್ನು ಹೊಂದಿದ್ದು, ಜಿಂಕೆಯ ಹೋಲಿಕೆಯನ್ನು ಹೊಂದಿವೆ. ಚಿಕ್ಕ ಸ್ಥಳದಲ್ಲಿಯೂ ಮೇಕೆಗಳನ್ನು ಸುಲಭವಾಗಿ ಸಾಕಬಹುದಾಗಿದ್ದು, ಪ್ರತಿದಿನ 1 ರಿಂದ ಒಂದೂವರೆ ಲೀ.ನಷ್ಟು ನೀಡುತ್ತವೆ. ವರ್ಷದಲ್ಲಿ ಎರಡು ಬಾರಿ ಮರಿಗಳಿಗೆ ಜನ್ಮ ನೀಡುತ್ತವೆ.

ಬೀಟಲ್ ತಳಿ

ಈ ತಳಿಯು ಪಂಜಾಬ್ ಮತ್ತು ಹರಿಯಾಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಎತ್ತರದಲ್ಲಿ ಜಮುನಾಪರಿ ತಳಿಯನ್ನು ಬೀಟಲ್ ಹೊಂದಿದ್ದು, ಚಿಕ್ಕ ಜಾಗಕ್ಕೆ ಕಡಿಮೆ ಸಮಯದಲ್ಲಿ ಹೊಂದಿಕೊಳ್ಳುತ್ತವೆ. ಈ ಮೇಕೆಗಳು ದಿನಕ್ಕೆ ಸುಮಾರು 2 ರಿಂದ 3.5 ಲೀಟರ್‌ನಷ್ಟು ಹಾಲು ನೀಡುತ್ತವೆ. ಕಡಿಮೆ ಸಮಯದಲ್ಲಿ ಈ ಮೇಕೆಗಳ ತೂಕ ಹೆಚ್ಚಳವಾಗುತ್ತದೆ.

ಬ್ಲ್ಯಾಕ್ ಬೆಂಗಾಲ

ಮಾಂಸಕ್ಕಾಗಿ ಮೇಕೆಗಳನ್ನು ಸಾಕುತ್ತಿದ್ರೆ ಬ್ಲ್ಯಾಕ್ ಬೆಂಗಾಲ ಬೆಸ್ಟ್ ಆಯ್ಕೆಯಾಗುತ್ತದೆ. ಪಶ್ಚಿಮ ಬಂಗಾಳ ಮತ್ತು ಬಿಹಾರ ಭಾಗದಲ್ಲಿ ಈ ತಳಿಯ ಮೇಕೆಗಳು ಅಧಿಕವಾಗಿ ಸಾಕಾಣಿಕೆ ಮಾಡಲಾಗುತ್ತದೆ. ಬ್ಲ್ಯಾಕ್ ಬೆಂಗಾಲ ದಿನಕ್ಕೆ ಅರ್ಧ ಲೀಟರ್‌ನಿಂದ 1 ಲೀ. ಮಾತ್ರ ಹಾಲು ನೀಡುತ್ತದೆ. ಈ ಮೇಕೆಗಳು ಏಕಕಾಲದಲ್ಲಿ ಎರಡರಿಂದ ಮೂರು ಮರಿಗಳಿಗೆ ಜನ್ಮ ನೀಡುತ್ತವೆ. ಇದು ಆದಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸುರತಿ ಮೇಕೆ

ಸೌಮ್ಯ ಸ್ವಭಾವದ ಸುರತಿ ಮೇಕೆಗಳು ಹೆಚ್ಚಾಗಿ ಗುಜರಾತ್ ಪ್ರದೇಶದಲ್ಲಿ ಕಾಣಸಿಗುತ್ತವೆ. ಪ್ರತಿದಿನ 1.5 ರಿಂದ 2.5 ಲೀಟರ್ ಹಾಲು ನೀಡುವ ಈ ಮೇಕೆಗಳು, ಹೆಚ್ಚು ಬೇಡಿಕೆಯನ್ನು ಹೊಂದಿವೆ. ಪೋಷಕಾಂಶಯುಕ್ತ ಹಾಲು ಬೇಗ ಜೀರ್ಣವಾಗುತ್ತದೆ. ವಿಶೇಷ ಬೇಡಿಕೆಯನ್ನು ಈ ಮೇಕೆಯ ಹಾಲು ಮಾರಾಟದಿಂದ ಉತ್ತಮ ಆದಾಯವನ್ನು ನಿಮ್ಮದಾಗಿಸಿಕೊಳ್ಳಬಹುದು.

ಸಿರೋಹಿ ತಳಿ

ಈ ಮೇಕೆಗಳು ಹೆಚ್ಚು ತಾಪಮಾನ ಪ್ರದೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಆಹಾರ ಸೇವಿಸುತ್ತವೆ. ಪ್ರತಿದಿನ 1 ರಿಂದ 1.5 ಲೀಟರ್ ಹಾಲು ನೀಡುವ ಸಿರೋಹಿ ತಳಿಯ ಮೇಕೆಗಳು ಕಡಿಮೆ ಸಮಯದಲ್ಲಿಯೇ ತೂಕ ಹೆಚ್ಚಿಸಿಕೊಳ್ಳುತ್ತವೆ. ಈ ಮೇಕೆಗಳು ದೇಹದ ಮೇಲೆ ಕಂದು ಚುಕ್ಕೆಗಳಿದ್ದು, ರಾಜಸ್ಥಾನದಂತಹ ಪ್ರದೇಶದಲ್ಲಿಯೂ ಇವುಗಳನ್ನು ಕಾಣಬಹುದಾಗಿದೆ.

ಓಸ್ಮಾನಬಾದಿ ತಳಿ

ಮಹಾರಾಷ್ಟ್ರ ಮತ್ತು ಕರ್ನಾಟಕ ಭಾಗದಲ್ಲಿ ಓಸ್ಮಾನಬಾದಿಯ ತಳಿಯ ಮೇಕೆಗಳನ್ನು ಸಾಕಾಣಿಕೆ ಮಾಡಲಾಗುತ್ತದೆ. ಈ ಮೇಕೆಗಳು ಯಾವುದೇ ಹವಾಮಾನಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ದಿನಕ್ಕೆ 1 ರಿಂದ 1.5 ಲೀಟರ್ ಹಾಲು ನೀಡುತ್ತವೆ. ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಅವಳಿ ಮರಿಗಳಿಗೆ ಜನ್ಮ ನೀಡುತ್ತವೆ. ಮರಿಗಳ ಮಾರಾಟದಿಂದ ರೈತರಿಗೆ ಉತ್ತಮ ಆದಾಯ ನೀಡುತ್ತವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಕ್ರಿಕೆಟ್‌ನಂತೆ ಬಿಸಿನೆಸ್‌ನಲ್ಲೂ ಸಿಕ್ಸರ್ ಹೊಡೆದ 'ಮಾಸ್ಟರ್ ಬ್ಲಾಸ್ಟರ್': ಸಚಿನ್ ತೆಂಡೂಲ್ಕರ್ ₹5 ಕೋಟಿ ಹೂಡಿಕೆ ಈಗ ಮಲ್ಟಿಬ್ಯಾಗರ್!
Jamshedpur FC : ಕೇವಲ 100 ರು.ಗೆ ಫುಟ್ಬಾಲ್‌ ತಂಡ ಮಾರಿದ ಟಾಟಾ!