
ನವದೆಹಲಿ(ಅ.11): ಆನ್‌ಲೈನ್ ಸೇಲ್(Online sale), ಇ ಕಾಮರ್ಸ್(Ecommerce) ದೇಶದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಉದ್ಯಮ. ದೇಶದ ಮೂಲೆ ಮೂಲೆಗೂ ಕೈಗೆಟುವ ಬೆಲೆಯಲ್ಲಿ ವಸ್ತಗಳು ತಲುಪತ್ತಿವೆ. ಇದರ ನಡುವೆ ಮಾರಾಟ ವೇಳೆ ಸೇರಿದಂತೆ ಹಲವು ರಿಯಾಯಿತಿಗಳು ಇವೆ. ಹೀಗೆ ಫ್ಲಿಪ್‌ಕಾರ್ಟ್(Flipkart) ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳದಲ್ಲಿ ಆ್ಯಪಲ್ ಐಫೋನ್ ಖರೀದಿಸಿದ ಗ್ರಾಹಕರನಿಗೆ ಫ್ಲಿಪ್ ಕಾರ್ಟ್ ನಿರ್ಮಾ ಸೋಪ್ ನೀಡಿದ ಘಟನೆ ನಡೆದಿದೆ.
ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ಮತ್ತೊಂದು ಹಿನ್ನಡೆ, CCI ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ!
ಸಿಮ್ರನ್ ಪಾಲ್ ಸಿಂಗ್ ಹಣ ಒಟ್ಟುಗೂಡಿಸಿ ಆ್ಯಪಲ್ ಐಫೋನ್(Apple iPhone) ಖರೀದಿಗೆ ಮುಂದಾಗಿದ್ದಾನೆ. ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳದಲ್ಲಿ ಫ್ಲಿಪ್‌ಕಾರ್ಟ್ ಭರ್ಜರಿ ರಿಯಾಯಿತಿಯಲ್ಲಿ ಐಫೋನ್ ಸೇಲ್ ಘೋಷಿಸಿತ್ತು. ಹೀಗಾಗಿ 53,000 ರೂಪಾಯಿ ಪಾವತಿಸಿ ಸಿಮ್ರನ್ ಪಾಲ್ ಸಿಂಗ್ ಆ್ಯಪಲ್ iPhone ಬುಕ್ ಮಾಡಿದ್ದಾನೆ.
ಬುಕ್ ಮಾಡಿದ ಬಳಿಕ ಬುಕಿಂಗ್ ಆರ್ಡರ್(Order) ಮೆಸೇಜ್, ಪ್ರಾಡಕ್ಟ್ ಟ್ರಾಕ್ ಐಡಿ ಎಲ್ಲವನ್ನೂ ಇಟ್ಟುಕೊಂಡು ತನ್ನ ಐಫೋನ್ ಯಾವಾಗ ಬರುತ್ತ ಎಂದು ಪದೇ ಪದೇ ಚೆಕ್ ಮಾಡುತ್ತಲೇ ಇದ್ದ. ಕೊನೆಗೂ ಫ್ಲಿಪ್‌ಕಾರ್ಟ್ ಆರ್ಡರ್ ಮಾಡಿದ ಆ್ಯಪಲ್ ಐಫೋನ್ ಬಾಕ್ಸ್ ಬಂದೇ ಬಿಟ್ಟಿತು.
ಸಂತಸದಿಂದ ಸಿಮ್ರನ್ ಪಾಲ್ ಬಾಕ್ಸ್ ಒಪನ್ ಮಾಡಿದ್ದಾನೆ. ಕಾದು ಕುಳಿತ ಆ್ಯಪಲ್ ಐಫೋನ್ ಬದಲು 10 ರೂಪಾಯಿಯ ಎರಡು ನಿರ್ಮಾ ಸೋಪ್(soap) ಬಾಕ್ಸ್‌ನಲ್ಲಿ ಬಂದಿದೆ. ಈ ಸೋಪ್ ನೋಡಿ ಬೆಚ್ಚಿ ಬಿದ್ದ ಸಿಮ್ರನ್ ಪಾಲ್ ಫ್ಲಿಪ್‌ಕಾರ್ಟ್‌ಗೆ ದೂರು ನೀಡಿದ್ದಾನೆ. ತಕ್ಷಣವೇ ಸ್ಪಂದಿಸಿದ ಫ್ಲಿಪ್‌ಕಾರ್ಟ್ ಆರ್ಡರ್ ಕುರಿತು ಪರಿಶೀಲಿಸಿದೆ.
ಅಮೇಜಾನ್‌ಗೆ ಬುದ್ಧಿ ಕಲಿಸಿದ ಕನ್ನಡಿಗರು, ಭೇಷ್ ಎಂದ ಮಾಜಿ ಮುಖ್ಯಮಂತ್ರಿ!
ಬಳಿಕ ಡೆಲಿವರಿ ಮಾಡಿದ ಎಜೆನ್ಸಿ ಜೊತೆ ಫ್ಲಿಪ್‌ಕಾರ್ಟ್ ಮಾತುಕತೆ ನಡೆಸಿದೆ. ಗ್ರಾಹಕರನ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ ಫ್ಲಿಪ್‌ಕಾರ್ಟ್ ಗ್ರಾಹಕನಿಗೆ ಹಣ ವಾಪಸ್ ನೀಡಿದೆ. ಫ್ಲಿಪ್‌ಕಾರ್ಟ್ ಸಿಮ್ರನ್ ಪಾಲ್ ಸಿಂಗ್ ಆರ್ಡರ್ ರದ್ದು ಮಾಡಿದೆ.
ಆರ್ಡರ್ ಬದಲಾಗುವುದು, ಬೇರೆ ವಸ್ತು ವಿತರಣೆಯಾಗುವು ಸಂದರ್ಭ ತೀರಾ ಕಡಿಮೆ. ಇದು ಅಚಾತುರ್ಯದಿಂದ ಆಗಿರುವ ಸಾಧ್ಯತೆ ಇದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಆದರೆ 53,000 ರೂಪಾಯಿ ಪಾವತಿಸಿ 10 ರೂಪಾಯಿ ನಿರ್ಮಾ ಸೋಪ್ ಬಂದಾಗ ಪರಿಸ್ಥಿತಿಯನ್ನು ಎದುರಿಸಲು ಗ್ರಾಹಕನ ಹಾರ್ಟ್, ಮನಸ್ಸು ಎಲ್ಲವೂ ಗಟ್ಟಿ ಇರಬೇಕು..
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.