
ನವದೆಹಲಿ(ಮಾ.08): ರಷ್ಯಾ ಉಕ್ರೇನ್ ಯುದ್ಧ ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಏರಿಕೆಗೆ ಕಾರಣವಾಗಿದೆ. ಈಗಾಗಲೇ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಇದೀಗ ರಷ್ಯಾಗೆ ಹೊಡೆತ ನೀಡಲು ಅಮೆರಿಕ ಮುಂದಾಗಿದೆ. ರಷ್ಯಾದಿಂದ ತೈಲ ಆಮದು ನಿರ್ಬಂಧ ವಿಧಿಸಲು ಅಮೆರಿಕ ಮುಂದಾಗಿದೆ. ಅಮೆರಿಕ ಈ ನಡೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.
ಅಮೆರಿಕ ತೈಲ ನಿರ್ಬಂಧಕ್ಕೆ ಮುಂದಾದ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಶೇಕಡಾ 5 ರಷ್ಟು ಏರಿಕೆಯಾಗಿದೆ.ಯುದ್ಧದಿಂದ ಸಂಪೂರ್ಣ ಯೂರೋಪ್ ತೈಲ ಪೂರೈಕೆ ಸಮಸ್ಯೆಯಾಗಿದೆ. ಈ ಎಲ್ಲಾ ಹೊಡೆತಗಳು ಭಾರತದ ಮೇಲೂ ನೇರ ಪರಿಣಾಮ ಬೀರಲಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ 130 ರೂಪಾಯಿಗೂ ಅಧಿಕವಾಗವು ಸಾಧ್ಯತೆ ಇದೆ.
Petrol Diesel Price ಯುದ್ಧ, ರೂಪಾಯಿ ಮೌಲ್ಯ ಕುಸಿತ,ಮಧ್ಯರಾತ್ರಿಯಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ!
ಕಚ್ಚಾತೈಲ ಬೆಲೆ 140 ಡಾಲರ್: 13 ವರ್ಷದಲ್ಲೇ ಗರಿಷ್ಠ ಪ್ರಮಾಣ
ರಷ್ಯಾ- ಉಕ್ರೇನ್ ಯುದ್ಧ ಕೊನೆಗೊಳ್ಳುವ ಯಾವುದೇ ಸೂಚನೆ ಕಂಡುಬರದ ಹಿನ್ನೆಲೆಯಲ್ಲಿ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಸೋಮವಾರ ಭಾರೀ ಏರಿಕೆ ಕಂಡಿದೆ. ಬ್ರೆಂಟ್ ಕಚ್ಚಾತೈಲದ ದರ ಒಂದೇ ದಿನ ಸುಮಾರು 12 ಡಾಲರ್ ಏರಿಕೆಯಾಗಿ 13 ವರ್ಷದ ಗರಿಷ್ಠಕ್ಕೆ ತಲುಪಿದೆ. ಒಂದು ಹಂತದಲ್ಲಿ ಪ್ರತಿ ಬ್ಯಾರಲ್ ಕಚ್ಚಾತೈಲದ ಬೆಲೆ 140 ಡಾಲರ್‌ಗೆ ತಲುಪಿತ್ತು. ಇದು 2008ರ ನಂತರದ ಅತ್ಯಂತ ಗರಿಷ್ಠ ದರವಾಗಿದೆ. ಬ್ರೆಂಟ್ ಕಚ್ಚಾತೈಲದ ದರ ಬ್ಯಾರಲ್‌ಗೆ 140ಕ್ಕೆ ಏರಿಕೆಯಾದರೆ, ಅಮೆರಿಕನ್ ಕಚ್ಚಾತೈಲದ ದರ ಕೂಡ ಸುಮಾರು 125 ಡಾಲರ್‌ಗೆ ಏರಿಕೆಯಾಗಿದೆ.
ಈ ವಾರ ಪೆಟ್ರೋಲ್ ದರ 15 ರು. ಏರಿಕೆ ಸಾಧ್ಯತೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆ ನಿಶ್ಚಿತವಾಗಿದೆ. ಮೂಲಗಳ ಪ್ರಕಾರ ಪೆಟ್ರೋಲ್ ಹಾಗೂ ಡೀಸೆಲ್‌ನ ಪ್ರತಿ ಲೀಟರ್‌ಗೆ 15 ರು.ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ. ಕಚ್ಚಾತೈಲದ ದರ ಜೊತೆಗೆ ಡಾಲರ್ ಎದುರು ರುಪಾಯಿ ಮೌಲ್ಯ ಕೂಡಾ ಕುಸಿದ ಕಾರಣ ಭಾರತದ ತೈಲ ಕಂಪನಿಗಳಿಗೆ ಭಾರಿ ನಷ್ಟವಾಗಲಿದೆ. ಕಳೆದ ನಾಲ್ಕು ತಿಂಗಳಿನಿಂದ ದೇಶದಲ್ಲಿ ತೈಲಬೆಲೆ ಏರಿಸಿಲ್ಲ. ಅಲ್ಲಿಂದ ಈವರೆಗೆ ಆಗಿರುವ ನಷ್ಟಹಾಗೂ ಈಗ ಕಚ್ಚಾತೈಲದ ದರದಲ್ಲಿ ಉಂಟಾಗಿರುವ ಏರಿಕೆಯನ್ನು ಸರಿದೂಗಿಸಲು ಈ ವಾರದಿಂದಲೇ ಹಂತ ಹಂತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
Rahul Gandhi Taunt "ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ" ಚುನಾವಣೆಯ ಆಫರ್ ಕ್ಲೋಸ್ ಆಗಲಿದೆ!
ಹಣದುಬ್ಬರಕ್ಕೆ ತಕ್ಕಂತೆ ದೇಶದ ಜನರ ಆದಾಯವೂ ಏರಿಕೆಯಾದರೆ ಮಾತ್ರ ಅವರಿಗೆ ಬೆಲೆಯೇರಿಕೆಯನ್ನು ತಾಳಿಕೊಳ್ಳುವ ಶಕ್ತಿ ಬರುತ್ತದೆ. ಆದರೆ, ನಮ್ಮ ದೇಶದಲ್ಲೀಗ ವಿಚಿತ್ರ ಪರಿಸ್ಥಿತಿಯಿದೆ. ಹಣದುಬ್ಬರ ಏರುತ್ತಿದೆ, ಆದರೆ ಎಲ್ಲ ಜನರ ಆದಾಯ ಏರುತ್ತಿಲ್ಲ. ಶ್ರೀಮಂತರ ಆದಾಯ ಏರುತ್ತಿದ್ದರೆ, ಬಡವರ ಆದಾಯ ಏರುತ್ತಿಲ್ಲ ಅಥವಾ ಕುಸಿತ ಕಂಡಿದೆ. ದೇಶದ ಬೊಕ್ಕಸಕ್ಕೆ ಹರಿದುಬರುವ ತೆರಿಗೆ ಪ್ರಮಾಣ ಹೆಚ್ಚುತ್ತಿದ್ದರೂ ಅಭಿವೃದ್ಧಿಗೆ ಇನ್ನಷ್ಟುಆರ್ಥಿಕ ಸಂಪನ್ಮೂಲಗಳು ಬೇಕೆಂದು ಸರ್ಕಾರ ಜಿಎಸ್‌ಟಿ ದರ ಏರಿಸಲು ಹೊರಟಿದೆ. ಇದರಿಂದಾಗಿ ದೇಶ ಆರ್ಥಿಕವಾಗಿ ಸದೃಢವಾಗುತ್ತದೆ, ಆದರೆ ಜನರು ಆರ್ಥಿಕವಾಗಿ ದುರ್ಬಲರಾಗುತ್ತಾರೆ ಎಂಬಂತಹ ಸ್ಥಿತಿ ಬರಬಹುದು. ಸರ್ಕಾರದ ಆರ್ಥಿಕ ನೀತಿಗಳು ಯಾವತ್ತೂ ಬಡವರ ಹಾಗೂ ಜನಸಾಮಾನ್ಯರ ಬದುಕಿಗೆ ಪೂರಕವಾಗಿರಬೇಕು. ಆ ನಿಟ್ಟಿನಲ್ಲಿ ಸರ್ಕಾರ ಈಗಲೇ ಕಠಿಣ ಕ್ರಮಗಳಿಗೆ ಮುಂದಾಗಬೇಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.