ಎಸ್ ಬಿಐ, ಯೆಸ್ ಬ್ಯಾಂಕ್, ಐಸಿಐಸಿಐ ಸೇರಿದಂತೆ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿನ ಬದಲಾವಣೆಗಳು ಸೇರಿದಂತೆ ಏಪ್ರಿಲ್ ತಿಂಗಳಲ್ಲಿ 6 ಹಣಕಾಸು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಅವುಗಳ ಮಾಹಿತಿ ಇಲ್ಲಿದೆ.
ನವದೆಹಲಿ (ಮಾ.29): 2024-25ನೇ ಹಣಕಾಸು ಸಾಲು ಏಪ್ರಿಲ್ ತಿಂಗಳಿಂದ ಪ್ರಾರಂಭವಾಗಲಿದೆ. ಈ ತಿಂಗಳಲ್ಲಿ ಹಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬದಲಾವಣೆಗಳಾಗಲಿದ್ದು, ಇವು ನಿಮ್ಮ ಹಣದ ವೆಚ್ಚ ಹಾಗೂ ಹೂಡಿಕೆ ಮೇಲೆ ಪರಿಣಾಮ ಬೀರಲಿವೆ. ಹೀಗಾಗಿ ಈ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಇಲ್ಲವಾದರೆ ಮುಂದೆ ತೊಂದರೆ ಎದುರಾಗಬಹುದು. ಹೊಸ ಎನ್ ಪಿಎಸ್ ನಿಯಮ, ಎಸ್ ಬಿಐ ಕ್ರೆಡಿಟ್ ಕಾರ್ಡ್ ನಲ್ಲಿ ಬದಲಾವಣೆಗಳು ಸೇರಿದಂತೆ ಏಪ್ರಿಲ್ ತಿಂಗಳಲ್ಲಿ ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಅನೇಕ ಬದಲಾವಣೆಗಳು ಆಗಲಿವೆ. ಹಾಗಾದ್ರೆ ಏಪ್ರಿಲ್ ತಿಂಗಳಲ್ಲಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗುತ್ತವೆ? ಇಲ್ಲಿದೆ ಮಾಹಿತಿ.
1.ಹೊಸ ಎನ್ ಪಿಎಸ್ ನಿಯಮ: ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ ಡಿಎ) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿಎಸ್) ಭದ್ರತೆ ಹೆಚ್ಚಿಸಿದೆ. ಬದಲಾವಣೆಯ ಅನ್ವ ಯ ಒಂದು ಹೊಸ ಭದ್ರತಾ ಪದರವನ್ನು ಪರಿಚಯಿಸಲಾಗುವುದು. ಇದು ಟೂ ಫ್ಯಾಕ್ಟರ್ ಆಧಾರ್ ಅಥೆಂಟಿಕೇಷನ್ ಅನ್ನು ಹೊಂದಿದೆ. ಸಿಆರ್ ಎ ವ್ಯವಸ್ಥೆಗೆ ಲಾಗಿನ್ ಆಗುವ ಎಲ್ಲ ಬಳಕೆದಾರರಿಗೂ ಇದು ಕಡ್ಡಾಯ.
ಗಮನಿಸಿ, ಏ.1ರಂದು 2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿಗೆ ಅವಕಾಶವಿಲ್ಲ: ಆರ್ ಬಿಐ
2.ಎಸ್ ಬಿಐ ಕ್ರೆಡಿಟ್ ಕಾರ್ಡ್ ಬದಲಾವಣೆಗಳು: ಬಾಡಿಗೆ ಪಾವತಿ ವಹಿವಾಟಿನ ಮೇಲಿನ ರಿವಾರ್ಡ್ ಪಾಯಿಂಟ್ಸ್ ಸಂಚಯವನ್ನು ಎಸ್ ಬಿಐ ಕಾರ್ಡ್ ಘೋಷಿಸಿತ್ತು. ಇದನ್ನು ನಿರ್ದಿಷ್ಟ ಕ್ರೆಡಿಟ್ ಕಾರ್ಡ್ ಗಳಿಗೆ ಕಡಿತಗೊಳಿಸಲಾಗುವುದು. ಏಪ್ರಿಲ್ 1, 2024ರಿಂದ ಇದನ್ನು ಮಾಡಲಾಗುತ್ತದೆ. ಇದರಲ್ಲಿ ಔರೊಮ್, ಎಸ್ ಬಿಐ ಕಾರ್ಡ್ ಎಲೈಟ್, ಎಸ್ ಬಿಐ ಕಾರ್ಡ್ ಎಲೈಟ್ ಅಡ್ವಾನಟೇಜ್, ಎಸ್ ಬಿಐ ಕಾರ್ಡ್ ಫ್ಲಸ್ ಹಾಗೂ ಸಿಂಪ್ಲಿ ಕ್ಲಿಕ್ ಎಸ್ ಬಿಐ ಕಾರ್ಡ್ ಸೇರಿವೆ. ಇನ್ನು ಹೊಸ ಎಸ್ ಬಿಐ ಕ್ರೆಡಿಟ್ ಕಾರ್ಡ್ ಕನಿಷ್ಠ ಮೊತ್ತ ಲೆಕ್ಕಾಚಾರದ ನಿಯಮ ಮಾ.15ರಿಂದಲೇ ಬದಲಾಗಲಿದೆ. ಈ ಬಗ್ಗೆ ಬ್ಯಾಂಕ್ ಈಗಾಗಲೇ ತನ್ನ ಎಲ್ಲ ಗ್ರಾಹಕರಿಗೂ ಇ-ಮೇಲ್ ಮುಖಾಂತರ ಮಾಹಿತಿ ನೀಡಿದೆ.
3.ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬದಲಾವಣೆಗಳು: ಕ್ಯಾಲೆಂಡರ್ ತ್ರೈಮಾಸಿಕದಲ್ಲಿ 10,000ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸುವ ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಪೂರಕ ದೇಶೀಯ ಲಾಂಜ್ ಪ್ರವೇಶ ಪಡೆಯಲು ಏಪ್ರಿಲ್ 1ರಿಂದ ಅರ್ಹರಾಗಿದ್ದಾರೆ.
Bank Holidays:ಏಪ್ರಿಲ್ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ
4.ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬದಲಾವಣೆಗಳು: ಮುಂಬರುವ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ 35,000ರೂ. ವ್ಯಯಿಸಿದರೆ ನೀವು ಒಂದು ಪೂರಕ ಏರ್ ಪೋರ್ಟ್ ಲಾಂಜ್ ಪ್ರವೇಶ ಪಡೆಯಬಹುದು. ಏಪ್ರಿಲ್-ಮೇ-ಜೂನ್ 2024ರ ತ್ರೈಮಾಸಿಕದಲ್ಲಿ ಈ ಬಹುಮಾನದ ಲಾಂಜ್ ಸೇವೆಗೆ ಅರ್ಹರಾಗಲು ನೀವು ಕನಿಷ್ಠ 35,000 ರೂ. ವ್ಯಯಿಸಬೇಕು. ಹಾಗೆಯೇ ಅದರ ನಂತರದ ತ್ರೈಮಾಸಿಕಗಳಲ್ಲಿ ಕೂಡ ಅಷ್ಟೇ ಹಣ ವ್ಯಯಿಸಬೇಕು.
5.ಓಲಾ ಮನಿ ವ್ಯಾಲೆಟ್: ಓಲಾ ಮನಿ ಕಿರು ಪಿಪಿಐ (ಪ್ರೀಪೇಯ್ಡ್ ಪಾವತಿ ಸಾಧನ) ವ್ಯಾಲೆಟ್ ಸೇವೆಗಳನ್ನು ಒದಗಿಸೋದಾಗಿ ಈಗಾಗಲೇ ಘೋಷಿಸಿದೆ. ಇದು ೇಪ್ರಿಲ್ 1ರಿಂದ ತಿಂಗಳಿಗೆ 10,000 ರೂ. ಗರಿಷ್ಠ ವ್ಯಾಲೆಟ್ ಲೋಡ್ ನಿರ್ಬಂಧ ಹೊಂದಿರಲಿದೆ.
6.ಎಸ್ ಬಿಐ ಅಮೃತ್ ಕಲಶ್ ವಿಶೇಷ ಎಫ್ ಡಿ: ಈ ವಿಶೇಷ ಎಫ್ ಡಿ ಯೋಜನೆ ಏಪ್ರಿಲ್ 1ರಿಂದ ಲಭ್ಯವಿರೋದಿಲ್ಲ. ಇದು 400 ದಿನಗಳ ಅವಧಿಯದ್ದಾಗಿದೆ. ಈ ಎಫ್ ಡಿಯಲ್ಲಿನ ಹೂಡಿಕೆಗೆ ಶೇ.7.10 ಬಡ್ಡಿ ನೀಡಲಾಗುತ್ತಿದೆ. ಈ ಎಫ್ ಡಿಯನ್ನು 2023ರ ಏಪ್ರಿಲ್ 12ರಂದು ಪ್ರಾರಂಭಿಸಲಾಗಿದೆ. ಇನ್ನು ಹಿರಿಯ ನಾಗರಿಕರು ಈ ಎಫ್ ಡಿಗೆ ಶೇ.7.60 ಬಡ್ಡಿ ಪಡೆಯುತ್ತಾರೆ. ಎಸ್ ಬಿಐ ವೆಬ್ ಸೈಟ್ ನಲ್ಲಿರುವ ಮಾಹಿತಿ ಅನ್ವಯ ಈ ಯೋಜನೆ 2024ರ ಮಾರ್ಚ್ 31ರ ತನಕ ಜಾರಿಯಲ್ಲಿರಲಿದೆ.