ಒಂದು ರೂಪಾಯಿಗೂ ಭಾರೀ ಬೆಲೆಯುಂಟು!ಈ ರಾಷ್ಟ್ರಗಳಲ್ಲಿ ಭಾರತೀಯ ಕರೆನ್ಸಿ ಮೌಲ್ಯ 100ಕ್ಕಿಂತಲೂ ಹೆಚ್ಚು

By Suvarna News  |  First Published Mar 6, 2024, 3:03 PM IST

ಭಾರತದ ರೂಪಾಯಿ ಮೌಲ್ಯ ಕೆಲವು ರಾಷ್ಟ್ರಗಳಲ್ಲಿ 100ಕ್ಕಿಂತ ಹೆಚ್ಚಿದೆ. ಹಾಗಾದ್ರೆ ಯಾವೆಲ್ಲ ರಾಷ್ಟ್ರಗಳಲ್ಲಿ 1 ರೂಪಾಯಿ ಮೌಲ್ಯ 100 ಅಥವಾ ಅದಕ್ಕಿಂತ ಹೆಚ್ಚಿದೆ? ಇಲ್ಲಿದೆ ಮಾಹಿತಿ. 
 


Business Desk:ಡಾಲರ್ ಎದುರು ರೂಪಾಯಿ ಮೌಲ್ಯ ಲೆಕ್ಕ ಹಾಕಿ ಬೆಚ್ಚಿ ಬೀಳುವ ನಾವು, ಕೆಲವು ದೇಶಗಳ ಕರೆನ್ಸಿ ಮುಂದೆ ರೂಪಾಯಿ ಮೌಲ್ಯ ನೋಡಿದ್ರೆ ಬೆರಗಾಗೋದು ಗ್ಯಾರಂಟಿ. ವಿದೇಶಿ ಪ್ರವಾಸಕ್ಕೆ ಹೋಗುವಾಗ ಆ ದೇಶದ ಕರೆನ್ಸಿ ಹಾಗೂ ಭಾರತೀಯ ರೂಪಾಯಿಯನ್ನು ಹೋಲಿಸಿ ನೋಡೋದು ಅಗತ್ಯ. ಏಕೆಂದರೆ ಆ ಕರೆನ್ಸಿ ಮುಂದೆ ನಮ್ಮ ರೂಪಾಯಿ ಮೌಲ್ಯ ಎಷ್ಟಿದೆ ಎಂಬುದು ಅಲ್ಲಿನ ನಮ್ಮ ವೆಚ್ಚವನ್ನು ಅಂದಾಜಿಸಲು ನೆರವು ನೀಡುತ್ತದೆ. ಇಲ್ಲವಾದ್ರೆ ಅಲ್ಲಿಗೆ ತೆರಳಿದ ಮೇಲೆ ತೊಂದ್ರೆ ತಪ್ಪಿದ್ದಲ್ಲ. ಅಂದಹಾಗೇ ಭಾರತದ ರೂಪಾಯಿ ಮೌಲ್ಯ ಕೆಲವು ರಾಷ್ಟ್ರಗಳ ಕರೆನ್ಸಿ ಮುಂದೆ ಹೆಚ್ಚಿದೆ. ಇಂಥ ರಾಷ್ಟ್ರಗಳಿಗೆ ಪ್ರವಾಸಕ್ಕೆ ತೆರಳೋರು ಹೆಚ್ಚಿನ ಹಣಕಾಸಿನ ಹೊರೆ ಮಾಡಿಕೊಳ್ಳಬೇಕಾದ ಅಗತ್ಯವಿರೋದಿಲ್ಲ. ಬಜೆಟ್ ನೊಳಗೆ ಪ್ರವಾಸದ ವೆಚ್ಚವನ್ನು ಸರಿದೂಗಿಸಬಹುದು. ಅಂದಹಾಗೇ ಯಾವೆಲ್ಲ ರಾಷ್ಟ್ರಗಳಲ್ಲಿ ಭಾರತದ 1 ರೂಪಾಯಿ ಮೌಲ್ಯ 100 ಅಥವಾ ಅದಕ್ಕಿಂತ ಹೆಚ್ಚಿದೆ ಗೊತ್ತಾ?

ಇರಾನ್: ಇರಾನ್ ಕರೆನ್ಸಿ ರಿಯಲ್ ಮುಂದೆ ಒಂದು ರೂಪಾಯಿ ಮೌಲ್ಯ 507.02. ಇರಾನ್ ಯಾವುದೇ ಪ್ರಮುಖ ಅಂತಾರಾಷ್ಟ್ರೀಯ ಕಾರ್ಡ್ ನೆಟ್ ವರ್ಕ್ ಹೊಂದಿಲ್ಲ. ಇದಕ್ಕೆ ಕಾರಣ ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ. ಸ್ಥಳಿಯ ಪ್ರೀಪೇಯ್ಡ್ ಕಾರ್ಡ್ ಖಾತೆಗೆ ಪ್ರವಾಸಿಗರು ಹಣ ಭರ್ತಿ ಮಾಡಿ ಅದನ್ನು ಬಳಸಬಹುದಾಗಿದೆ. 

Tap to resize

Latest Videos

2024ನೇ ಸಾಲಿನ ಭಾರತದ ಜಿಡಿಪಿ ಪ್ರಗತಿ ಅಂದಾಜು ದರ ಪರಿಷ್ಕರಿಸಿದ ಮೂಡೀಸ್; ಶೇ.6.8ಕ್ಕೆ ಹೆಚ್ಚಿಸಿದ ರೇಟಿಂಗ್ ಸಂಸ್ಥೆ

ವಿಯೆಟ್ನಾಂ: ವಿಯೆಟ್ನಾಂ ಕರೆನ್ಸಿ ಡೊಂಗ್ ಮೌಲ್ಯ ಕೂಡ ರೂಪಾಯಿ ಮುಂದೆ ಕಡಿಮೆಯಿದೆ. ಒಂದು ರೂಪಾಯಿ ಅಂದ್ರೆ 297.95ಡೊಂಗ್. ವಿಯೆಟ್ನಾಂಗೆ ಭೇಟಿ ನೀಡೋರಿಗೆ ಅಲ್ಲಿ ಭೇಟಿ ನೀಡಲು ಅನೇಕ ಪ್ರವಾಸಿ ತಾಣಗಳಿವೆ. ಫ್ರೆಂಚ್ ವಸಾಹತುಶಾಹಿ ವಾಸ್ತುಶಿಲ್ಪದಿಂದ ಹಿಡಿದು ಯುದ್ಧ ಮ್ಯೂಸಿಯಂ, ವಿಶ್ವದ ಅತೀ ದೊಡ್ಡ ಗುಹೆ ವ್ಯವಸ್ಥೆ ತನಕ ಅನೇಕ ಆಕರ್ಷಕ ತಾಣಗಳು ವಿಯೆಟ್ನಾಂನಲ್ಲಿವೆ.  ಅಲ್ಲದೆ, ಇಲ್ಲಿನ ಅನೇಕ ಜಲಕ್ರೀಡೆಗಳು ಹಾಗೂ ತಿನಿಸುಗಳು ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುತ್ತಿವೆ. 

ಲಾವೋಸ್: ಲಾವೋಸ್ ಆಗ್ನೇಯ ಏಷ್ಯಾದ ಏಕೈಕ ಭೂಖಂಡಗಳಿಂದ ಆವೃತ್ತವಾಗಿರುವ ರಾಷ್ಟ್ರ.  ರೂಪಾಯಿ ಎದುರು ಈ ರಾಷ್ಟ್ರದ ಕರೆನ್ಸಿ ಲಾವೋಟಿಯನ್ ಕಿಪ್ ಮೌಲ್ಯ 252. 

ಇಂಡೋನೇಷ್ಯಾ: ನೀಲಿ ಬಣ್ಣದ ಸಮುದ್ರದಿಂದ ಆವೃತ್ತವಾಗಿರುವ ಇಂಡೋನೇಷ್ಯಾ ಪ್ರವಾಸಿಗರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯುತ್ತಿದೆ. ಈ ದ್ವೀಪ ರಾಷ್ಟ್ರ ಭಾರತೀಯ ಪ್ರವಾಸಿಗರಿಗೆ ಅಲ್ಲಿಗೆ ಭೇಟಿ ನೀಡಿದ ತಕ್ಷಣ ವೀಸಾ ನೀಡುವ ವ್ಯವಸ್ಥೆ ಒಂದಿದೆ. ಅಂದರೆ ಈ ರಾಷ್ಟ್ರಕ್ಕೆ ತೆರಳಲು ಮುಂಚಿತವಾಗಿ ವೀಸಾ ಹೊಂದಿರಬೇಕಾದ ಅಗತ್ಯವಿಲ್ಲ. ಅಲ್ಲದೆ, ಇಂಡೋನೇಷ್ಯಾದ ಕರೆನ್ಸಿ ಇಂಡೋನೇಷಿಯನ್ ರುಪಿಯಾ ಮುಂದೆ ಭಾರತೀಯ ರೂಪಾಯಿ ಮೌಲ್ಯ ಹೆಚ್ಚಿದೆ. 1 ರೂಪಾಯಿ ಅಂದ್ರೆ 180 ಇಂಡೋನೇಷಿಯನ್ ರುಪಿಯಾ. ಹೀಗಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಜಾಸ್ತಿ ಖರ್ಚಿಲ್ಲದೆ ಅಲ್ಲಿನ ರಮಣೀಯ ತಾಣಗಳಿಗೆ ಭೇಟಿ ನೀಡುವ ಜೊತೆಗೆ ಶಾಪಿಂಗ್ ಕೂಡ ಮಾಡಬಹುದು. 

ದೇಶದ ಜಿಡಿಪಿ ಪ್ರಗತಿ ದರ ವಿಶ್ವದಲ್ಲೇ ನಂ.1: ಚೀನಾ ಹಿಂದಿಕ್ಕಿದ ಭಾರತ

ಉಜ್ಬೇಕಿಸ್ತಾನ:  ಮಧ್ಯ ಏಷ್ಯಾದಲ್ಲಿರುವ ಈ ರಾಷ್ಟ್ರದ ಕರೆನ್ಸಿ ಮುಂದೆ ಕೂಡ ರೂಪಾಯಿ ಮೌಲ್ಯ ಹೆಚ್ಚಿದೆ. ಒಂದು ರೂಪಾಯಿ ಅಂದ್ರೆ 151.12 ಉಜ್ಬೇಕಿಸ್ತಾನಿ ಸೋಮ್. ಹಿಂದೆ ಸೋವಿಯತ್ ಒಕ್ಕೂಟಕ್ಕೆ ಸೇರಿದ ಈ ರಾಷ್ಟ್ರದಲ್ಲಿ ಅನೇಕ ಪುರಾತನ ಇತಿಹಾಸಿಕ ಕಟ್ಟಡಗಳು ಹಾಗೂ ತಾಣಗಳಿವೆ. 

ಸಿಯೆರಾ  ಲಿಯೋನ್: ಈ ರಾಷ್ಟ್ರದ ಕರೆನ್ಸಿ ಲಿಯೋನ್ ಮೌಲ್ಯ ಕೂಡ ಭಾರತೀಯ ರೂಪಾಯಿಗಿಂತ ಕಡಿಮೆಯಿದೆ. ಈ ರಾಷ್ಟ್ರ ಪಶ್ಚಿಮ ಆಫ್ರಿಕಾದ ನೈಋತ್ಯ ಕರಾವಳಿಯಲ್ಲಿದೆ. ಒಂದು ರೂಪಾಯಿ ಅಂದ್ರೆ 237.38 ಲಿಯೋನ್. 


 

click me!