ಕೊರೋನಾ ವೈರಸ್ ಎಫೆಕ್ಟ್: ಜ್ವರದ ಮಾತ್ರೆಗಳು ಭಾರೀ ದುಬಾರಿ!

By Kannadaprabha NewsFirst Published Feb 18, 2020, 12:26 PM IST
Highlights

ಭಾರತದಲ್ಲಿ ಔಷಧಿಗಳ ದರ ಗಗನಕ್ಕೆ| ಭಾರತದಲ್ಲಿ ಪ್ಯಾರಾಸಿಟಮಲ್‌ ಶೇ.40ರಷ್ಟುಏರಿಕೆ

ನವದೆಹಲಿ[ಫೆ.18]: ಚೀನಾದಲ್ಲಿ 1700ಕ್ಕೂ ಹೆಚ್ಚು ಜನರ ಬಲಿಪಡೆದಿರುವ ಕೊರೋನಾ ಪರಿಣಾಮ ವಿಶ್ವದ ಆಟೋಮೊಬೈಲ್‌, ಮೊಬೈಲ್‌ ಕ್ಷೇತ್ರದ ಮೇಲಷ್ಟೇ ಅಲ್ಲದೆ, ವೈದ್ಯಕೀಯ ಕ್ಷೇತ್ರದ ಮೇಲೂ ಭಾರೀ ವ್ಯತಿರಿಕ್ತ ಪರಿಣಾಮ ಬೀರಿದೆ. ಹೌದು, ಚೀನಾದ ಕೊರೋನಾದಿಂದ ಭಾರತದಲ್ಲಿ ಮೈ-ಕಾಲು-ಕೈ ನೋವು, ಜ್ವರ, ತಲೆ ನೋವಿಗೆ ಬಳಕೆಯಾಗುತ್ತಿದ್ದ ಪ್ಯಾರಾಸಿಟಮಲ್‌ ಮಾತ್ರೆಗಳ ದರ ಶೇ.40, ರೋಗನಿರೋಧಕ ಔಷಧಿ ಅಝಿತ್ರಾಮಿಸಿನ್‌ ದರವು ಶೇ.70ರಷ್ಟುಏರಿಕೆಯಾಗಿದೆ.

ರೋಗ ನಿರೋಧಕ ಔಷಧಿಗಳ ಉತ್ಪಾದನೆಗೆ ಅಗತ್ಯವಿರುವ ಶೇ.70ರಷ್ಟುಕಚ್ಚಾವಸ್ತು ಚೀನಾದಿಂದಲೇ ಪೂರೈಕೆಯಾಗುತ್ತದೆ. ಆದರೆ, ಕೊರೋನಾ ಸೋಂಕು ಇತರ ರಾಷ್ಟ್ರಗಳಿಗೆ ಹಬ್ಬದಂತೆ ತಡೆಗಾಗಿ ಭಾರತ ಸೇರಿ ಇನ್ನಿತರ ರಾಷ್ಟ್ರಗಳಿಗೆ ಚೀನಾದಿಂದ ಯಾವುದೇ ವಸ್ತುಗಳು ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಔಷಧ ದರ ಗಗನಕ್ಕೇರಿದ್ದು, ಮಾಚ್‌ರ್‍ ಮೊದಲ ವಾರದಲ್ಲಿ ಚೀನಾದಿಂದ ಔಷಧಿಗಳ ಕಚ್ಚಾವಸ್ತುಗಳು ಪೂರೈಕೆಯಾಗದಿದ್ದರೆ, ಏಪ್ರಿಲ್‌ ವೇಳೆಗೆ ಸಿದ್ಧ ಔಷಧಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕ ವ್ಯಕ್ತವಾಗಿದೆ.

2018-19ನೇ ಸಾಲಿನಲ್ಲಿ ಭಾರತದ ಔಷಧಿ ಕಂಪನಿಗಳು 15,340 ಕೋಟಿ ರು.ನಷ್ಟುಔಷಧಗಳ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಂಡಿದ್ದವು.

click me!