ಕೊರೋನಾ ತಾಂಡವ: ಇಂದಿನಿಂದ ಚಿನ್ನದಂಗಡಿ ಬಂದ್‌!

By Kannadaprabha News  |  First Published Mar 21, 2020, 7:59 AM IST

ಚಿನ್ನದಂಗಡಿಗಳಿಗೂ ತಟ್ಟಿದ ಕೊರೋನಾ ವೈರಸ್ ಭೀತಿ| ರಾಜ್ಯದ ಚಿನ್ನಾಭರಣ ಮಾರಾಟ ಮಳಿಗೆಗಳು ಬಂದ್


ಬೆಂಗಳೂರು(ಮಾ.21): ಕೊರೋನಾ ವೈರಸ್‌ ಭೀತಿ ಇದೀಗ ರಾಜ್ಯದ ಚಿನ್ನಾಭರಣ ಮಾರಾಟ ಮಳಿಗೆಗಳಿಗೂ ತಟ್ಟಿದೆ.

ಮುನ್ನಚ್ಚರಿಕಾ ಕ್ರಮವಾಗಿ ಮಾ.21ರಿಂದ 28ರ ವರೆಗೆ ಚಿನ್ನಾಭರಣ ಮಳಿಗೆ ಬಂದ್‌ ಮಾಡಿ ವ್ಯಾಪಾರ ಸ್ಥಗಿತಗೊಳಿಸಲು ದಿ ಜ್ಯೂವೆಲರಿ ಅಸೋಸಿಯೇಷನ್‌ ತೀರ್ಮಾನಿಸಿದೆ.

Tap to resize

Latest Videos

ಚಿನ್ನಾಭರಣ ಅಂಗಡಿಗಳಲ್ಲಿ ಹೆಚ್ಚಿನ ಜನ ಸೇರುವುದರಿಂದ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಎಂಟು ದಿನಗಳ ಕಾಲ ಚಿನ್ನಾಭರಣ ವ್ಯಾಪಾರ ಸ್ಥಗಿತಗೊಳಿಸಲು ವ್ಯಾಪಾರಿಗಳು ಮುಂದಾಗಿದ್ದಾರೆ.

ಕೊರೋನಾ ವೈರಸ್‌ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಸರ್ಕಾರ ಹೋರಾಡುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಚಿನ್ನಾಭರಣ ಮಳಿಗೆ ಬಂದ್‌ ಮಾಡುವುದಾಗಿ ಅಸೋಸಿಯೇಷನ್‌ ತಿಳಿಸಿದೆ.

click me!