ಕೊರೋನಾ ತವರು ಚೀನಾದ ಜಿಡಿಪಿ ಶೇಕಡಾ 3.2ರಷ್ಟು ಏರಿಕೆ!

By Kannadaprabha NewsFirst Published Sep 1, 2020, 7:22 AM IST
Highlights

ಚೀನಾ ಜಿಡಿಪಿ ಮಾತ್ರ ಶೇ.3.2 ಏರಿಕೆ!| ಇತರ ರಾಷ್ಟ್ರಗಳಲ್ಲಿ ಕುಸಿದಿದ್ದರೂ ಚೀನಾದಲ್ಲಿ ಮಾತ್ರ ಹೆಚ್ಚಳ| ಕೊರೋನಾ ತವರು ಚೀನಾದಲ್ಲಿ ಆರ್ಥಿಕ ಚೇತರಿಕೆ

ಬೀಜಿಂಗ್‌(ಸೆ. 01): ಕೊರೋನಾ ವೈರಸ್‌ ಹಾವಳಿಯಿಂದಾಗಿ ವಿಶ್ವದ ಘಟಾನುಘಟಿ ದೇಶಗಳ ಆರ್ಥಿಕತೆ ಕುಸಿದಿದ್ದರೆ, ಜೀನಾದ ಪ್ರಗತಿ ದರ (ಜಿಡಿಪಿ) ಶೇ.3.2ರಷ್ಟುಏರಿಕೆ ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ವಿಶ್ವದಲ್ಲೇ ಮೊದಲು ಕೊರೋನಾ ಕಾಣಿಸಿಕೊಂಡಿದ್ದು ಚೀನಾದಲ್ಲಿ. ಆದರೆ ಅದನ್ನು ಬಹುಬೇಗನೆ ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಯಿತು. ಆದರೆ ಬೇರೆ ದೇಶಗಳು ಕೊರೋನಾದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಿಂದ ಅವುಗಳ ಜಿಡಿಪಿ ನೆಲಕಚ್ಚಿದೆ. ಆದರೆ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಶೇ.3.2ರಷ್ಟುಹೆಚ್ಚಳವಾಗಿದೆ.

ಭಾರತ ಸೇರಿ ಹಲವು ದೇಶಗಳಲ್ಲಿ ಏ.1ರಿಂದ ಮಾ.31ರ ಅವಧಿಯನ್ನು ಹಣಕಾಸು ವರ್ಷ ಎಂದು ಪರಿಗಣಿಸಿದರೆ, ಚೀನಾದಲ್ಲಿ ಜ.1ರಿಂದ ಡಿ.31ರ ಅವಧಿಯನ್ನು ವಿತ್ತೀಯ ವರ್ಷ ಎಂದು ಪರಿಗಣಿಸಲಾಗುತ್ತದೆ. ಚೀನಾದಲ್ಲಿ ಜನವರಿ, ಫೆಬ್ರವರಿಯಲ್ಲಿ ಕೊರೋನಾ ವಿಕೋಪಕ್ಕೆ ಹೋಗಿತ್ತು. ಹೀಗಾಗಿ ಆ ದೇಶದಲ್ಲಿ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.6.8ರಷ್ಟುಕುಸಿತ ದಾಖಲಿಸಿತ್ತು. ನಂತರದ ದಿನಗಳಲ್ಲಿ ಚೀನಾದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದು ಆರ್ಥಿಕತೆ ತೆರೆದುಕೊಂಡಿತ್ತು. ಹೀಗಾಗಿ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇ.3.2ರಷ್ಟು ಹೆಚ್ಚಳವಾಗಿದೆ.

click me!