
ಹೈದರಾಬಾದ್(ಜ.04): ಮನೆಗೆ ಗ್ಯಾಸ್ ಸಿಲಿಂಡರ್ ಕೊಡುವ ಡೆಲಿವರಿ ಬಾಯ್‌ಗಳು 30, 40, 50 ರು.ಗಳನ್ನು ‘ಡೆಲಿವರಿ ಚಾಜ್‌ರ್’ ಎಂದು ಹೇಳಿ ಪಡೆಯುವುದು ಮಾಮೂಲು. ಆದರೆ, ‘ಗ್ರಾಹಕರು ಡೆಲಿವರಿ ಬಾಯ್‌ಗಳಿಗೆ ಈ ಹಣ ಕೊಡುವ ಅವಶ್ಯಕತೆ ಇಲ್ಲ’ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೆಷನ್ (ಎಚ್‌ಪಿಸಿಎಲ್) ಕಂಪನಿ ಹೇಳಿದೆ.
ಕರೀಂ ಅನ್ಸಾರಿ ಎಂಬ ಹೈದರಾಬಾದ್ ನಿವಾಸಿ ಎಚ್‌ಪಿಸಿಎಲ್‌ಗೆ ಇತ್ತೀಚೆಗೆ ಮಾಹಿತಿ ಹಕ್ಕು (ಆರ್‌ಟಿಐ) ಮೂಲಕ ಅರ್ಜಿ ಸಲ್ಲಿಸಿ, ‘ನನಗೆ ಸಿಲಿಂಡರ್ ಡೆಲಿವರಿ ವೇಳೆ ಡೆಲಿವರಿ ಬಾಯ್ ಹೆಚ್ಚು ಹಣ ಕೇಳಿದ. ಇದು ನಿಯಮದಲ್ಲಿದೆಯೇ?’ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿರುವ ಎಚ್‌ಪಿಸಿಎಲ್, ‘ಗ್ರಾಹಕರ ಮನೆಗೆ ಸಿಲಿಂಡರ್ ತಲುಪಿಸುವುದು ಗ್ಯಾಸ್ ವಿತರಕರ ಜವಾಬ್ದಾರಿ. ಆ ಕಟ್ಟಡ/ಅಪಾರ್ಟ್‌ಮೆಂಟ್/ಫ್ಲ್ಯಾಟ್ ಯಾವುದೇ ಅಂತಸ್ತಿನಲ್ಲಿ ಇರಲಿ ಡೆಲಿವರಿ ಬಾಯ್‌ಗಳು ಯಾವುದೇ ಹೆಚ್ಚುವರಿ ಹಣ ಪಡೆಯದೇ ತಲುಪಿಸಬೇಕು. ಕೇವಲ ಬಿಲ್‌ನಲ್ಲಿರುವಷ್ಟುಹಣ ಮಾತ್ರ ಪಡೆಯಬೇಕು. ಒಂದು ವೇಳೆ ಡೆಲಿವರಿ ಬಾಯ್ ಹೆಚ್ಚು ಹಣ ಕೇಳಿದರೆ ನಿರಾಕರಿಸಬಹುದು’ ಎಂದು ಸ್ಪಷ್ಟಪಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.