ಚಕ್ರ ಬಡ್ಡಿ ಮನ್ನಾದಿಂದ ಸರ್ಕಾರಿ ಬ್ಯಾಂಕುಗಳಿಗೆ 2000 ಕೋಟಿ ಹೊರೆ!

Published : Apr 05, 2021, 09:01 AM ISTUpdated : Apr 05, 2021, 09:14 AM IST
ಚಕ್ರ ಬಡ್ಡಿ ಮನ್ನಾದಿಂದ ಸರ್ಕಾರಿ ಬ್ಯಾಂಕುಗಳಿಗೆ 2000 ಕೋಟಿ ಹೊರೆ!

ಸಾರಾಂಶ

 2020ರ ಮಾರ್ಚ್‌ನಿಂದ- ಆಗಸ್ಟ್‌ವರೆಗೆ ಸಾಲದ ಮೇಲಿನ ಕಂತು ಪಾವತಿಗೆ ನೀಡಿದ್ದ ವಿನಾಯಿತಿ ಯೋಜನೆ| ಚಕ್ರ ಬಡ್ಡಿ ಮನ್ನಾದಿಂದ ಸರ್ಕಾರಿ ಬ್ಯಾಂಕುಗಳಿಗೆ 2000 ಕೋಟಿ ಹೊರೆ

ನವದೆಹಲಿ(ಏ.05): 2020ರ ಮಾರ್ಚ್‌ನಿಂದ- ಆಗಸ್ಟ್‌ವರೆಗೆ ಸಾಲದ ಮೇಲಿನ ಕಂತು ಪಾವತಿಗೆ ನೀಡಿದ್ದ ವಿನಾಯಿತಿ ಯೋಜನೆಯ ಅಡಿ ಎಲ್ಲಾ ರೀತಿಯ ಸಾಲಗಳ ಮೇಲಿನ ಚಕ್ರ ಬಡ್ಡಿಯನ್ನೂ ಮನ್ನಾ ಮಾಡುವಂತೆ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶದಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸುಮಾರು 1,800-2,000 ಕೋಟಿ ರು.ನಷ್ಟು ನಷ್ಟ ಸಂಭವಿಸಲಿದೆ.

2 ಕೋಟಿ ರು.ಗಿಂತಲೂ ಕಡಿಮೆ ಸಾಲಕ್ಕೆ ಸಂಪೂರ್ಣ ಬಡ್ಡಿ ಮನ್ನಾ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಕಳೆದ ವರ್ಷದ ನವೆಂಬರ್‌ನಲ್ಲಿ ತೀರ್ಪು ನೀಡಿತ್ತು. ಇದೀಗ ಅದನ್ನು 2 ಕೋಟಿ ರು.ಗಿಂತ ಮೇಲಿನ ಸಾಲಕ್ಕೂ ವಿಸ್ತರಿಸಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದೆ.

ಹೀಗಾಗಿ ಬ್ಯಾಂಕುಗಳಿಗೆ ಸುಮಾರು 2000 ಕೋಟಿ ರು.ನಷ್ಟುಹೊರೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?