ಡ್ರಾ ಮಾಡಿದ ಹಣ ಬರದಿದ್ದರೆ ಪರಿಹಾರ: ಆರ್‌ಬಿಐ ನೀತಿ!

By Web DeskFirst Published May 29, 2019, 5:09 PM IST
Highlights

ಎಟಿಎಂನಲ್ಲಿ ನೀವು ಡ್ರಾ ಮಾಡಿದ ಹಣ ಬಂದಿಲ್ಲವೇ?| ತಾಂತ್ರಿಕ ದೋಷದಿಂದ ಹಣ ಬಾರದಿದ್ದಾಗ ಏನು ಮಾಡಬೇಕು?| ದೂರು ನೀಡಿ 7 ದಿನಗಳ ಕೆಲಸದ ಅವಧಿಯಲ್ಲಿ ಹಣ ಮರಳಿ ಅಕೌಂಟ್ ಗೆ| 7 ದಿನಗಳ ಬಳಿಕ ಹಣ ಬರದಿದ್ದರೆ ದಿನಕ್ಕೆ 100 ರೂ.ನಂತೆ ಪರಿಹಾರ|

ನವದೆಹಲಿ(ಮೇ.29): ಎಟಿಎಂನಲ್ಲಿ ಹಣ ಡ್ರಾ ಮಾಡುವ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿರುವ ಆರ್‌ಬಿಐ, ಒಂದು ವೇಳೆ ಎಟಿಎಂನಿಂದ ಹಣ ಬರದಿದ್ದರೆ ಗ್ರಾಹಕನಿಗೆ ಪರಿಹಾರ ನೀಡುವ ಹೊಸ ನೀತಿ ಜಾರಿಗೊಳಿಸಿದೆ.

ಗ್ರಾಹಕ ಎಟಿಎಂನಲ್ಲಿ ನಿರ್ದಿಷ್ಟ ಹಣ ಡ್ರಾ ಮಾಡಿದಾಗ, ತಾಂತ್ರಿಕ ದೋಷದಿಂದ ಹಣ ಹೊರಗೆ ಬರದಿದ್ದರೆ ಕೂಡಲೇ ಅದು ಗ್ರಾಹಕನ ಅಕೌಂಟ್ ಗೆ ಮರಳಿ ಜಮೆ ಆಗುತ್ತದೆ. ಆದರೆ 7 ದಿನಗಳ ಕೆಲಸದ ಅವಧಿ ಬಳಿಕವೂ ಈ ಹಣ ಮರಳಿ ಜಮೆಯಾಗದಿದ್ದರೆ, ದಿನಕ್ಕೆ 100 ರೂ.ನಂತೆ ಗ್ರಾಹಕನಿಗೆ ಪರಿಹಾರ ನೀಡಬೇಕು ಎಂದು ಆರ್‌ಬಿಐ ಹೇಳಿದೆ.

Latest Videos

ಗ್ರಾಹಕ ಯಾವುದೇ ಬ್ಯಾಂಕ್‌ನ ಎಟಿಎಂನಿಂದ ಹಣ ಡ್ರಾ ಮಾಡಿದರೂ, ತನ್ನ ಮೂಲ ಬ್ಯಾಂಕ್‌ಗೆ ದೂರು ನೀಡಿ ಹಣ ಮರಳಿ ಪಡೆಯಬಹುದಾಗಿದೆ. ಆದರೆ 7 ದಿನಗಳ ಕೆಲಸದ ಅವಧಿ ಬಳಿಕವೂ ಹಣ ಮರಳಿ ಬಾರದಿದ್ದರೆ ಆತನಿಗೆ ಪರಿಹಾರ ನೀಡಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

click me!