
ಮುಂಬೈ[ಮೇ.29]: ಆನ್‌ಲೈನ್ ಮೂಲಕ ಇನ್ನೊಬ್ಬರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ವಿಧಾನದ ಮೂಲಕ ತಕ್ಷಣವೇ ಹಣ ವರ್ಗಾವಣೆ ಮಾಡುವ ಅವಧಿಯನ್ನು ಆರ್‌ಬಿಐ ಸಂಜೆ 6 ಗಂಟೆಯ ವರೆಗೆ ವಿಸ್ತರಿಸಿದ್ದು, ಈ ನಿಯಮ ಜೂ.1ರಿಂದ ಜಾರಿಗೆ ಬರಲಿದೆ.
ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ (ಆರ್‌ಟಿಜಿಎಸ್) ವ್ಯವಸ್ಥೆಯಲ್ಲಿ ಮುಂಜಾನೆ 9ರಿಂದ ಸೆಂಜೆ 4.30ರವೆಗೆ ಹಣವನ್ನು ವರ್ಗಾಯಿಸಲು ಅವಕಾಶ ಇತ್ತು. ಇದೀಗ ಆರ್‌ಟಿಜಿಎಸ್ ಸಮಯನ್ನು ಒಂದೂವರೆ ಗಂಟೆ ವಿಸ್ತರಿಸಲು ಆರ್‌ಬಿಐ ನಿರ್ಧರಿಸಿದೆ. ಸಾಮಾನ್ಯವಾಗಿ ಆರ್‌ಟಿಜಿಎಸ್ ಅನ್ನು ದೊಡ್ಡ ಮಟ್ಟದ ಹಣದ ವರ್ಗಾವಣೆ ಬಳಸಲಾಗುತ್ತದೆ.
ಕನಿಷ್ಠ 2 ಲಕ್ಷ ರು.ನಿಂದ ಎಷ್ಟುಎಷ್ಟುಬೇಕಾದರೂ ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಬಹುದಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.