ಮಗುವಿಗೆ ಜನ್ಮ ನೀಡಿದ್ರೆ 62 ಲಕ್ಷ ರೂಪಾಯಿ; ಏನಿದು ಆಫರ್?

By Suvarna News  |  First Published Feb 12, 2024, 12:22 PM IST

ಮಕ್ಕಳ ಸಂಖ್ಯೆ ಹೆಚ್ಚಾದಂತೆ ಮನೆ ಖರ್ಚು ಏರಿಕೆಯಾಗುತ್ತದೆ. ಮಕ್ಕಳ ಶಿಕ್ಷಣ, ಆರೈಕೆಗೆ ಎಷ್ಟು ಹಣವಿದ್ರೂ ಸಾಲದು. ಈ ವಿಷ್ಯವನ್ನು ಚೆನ್ನಾಗಿ ಅರಿತಿರುವ ಕಂಪನಿಯೊಂದ ಭರ್ಜರಿ ಆಫರ್ ನೀಡಿದೆ. ಮಕ್ಕಳನ್ನು ಪಡೆದ ಉದ್ಯೋಗಿಗೆ ಲಕ್ಷ ಲಕ್ಷ ಸಿಗ್ತಿದೆ. 


ಕಂಪನಿಗಳು ತಮ್ಮ ನೌಕರರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತವೆ. ಕೆಲ ಕಂಪನಿ ಬೋನಸ್ ಜೊತೆ ವರ್ಷಕ್ಕೊಂದು ಟ್ರಿಪ್ ಗೆ ಕರೆದುಕೊಂಡು ಹೋಗುತ್ತದೆ. ಮತ್ತೆ ಕೆಲ ಕಂಪನಿ ಹಬ್ಬದ ಸಮಯದಲ್ಲಿ ಉದ್ಯೋಗಿಗಳಿಗೆ ಅಗತ್ಯವಿರುವ ವಸ್ತುಗಳನ್ನು ಗಿಫ್ಟ್ ರೂಪದಲ್ಲಿ ನೀಡುತ್ತವೆ. ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವ ಕಂಪನಿ ಕೂಡ ಇದೆ. ಕೆಲಸಗಾರರು ಖುಷಿಯಾದ್ರೆ, ಸಂತೋಷದಿಂದ ಇದ್ರೆ ಅವರು ಸರಿಯಾಗಿ ಕೆಲಸ ಮಾಡ್ತಾರೆ. ಇದ್ರಿಂದ ಕಂಪನಿಗೆ ಲಾಭ ಸಿಗುತ್ತದೆ. ಈ ಗುಟ್ಟನ್ನು ಅರಿತಿರುವ ಬಹುತೇಕ ಕಂಪನಿಗಳು ಕೆಲಸಗಾರರ ಆರೋಗ್ಯ, ಆರ್ಥಿಕ ಸ್ಥಿತಿ ಬಗ್ಗೆಯೂ ಗಮನ ನೀಡುತ್ತದೆ. ಆರೋಗ್ಯ ವಿಮೆ ಅಥವಾ ಅನಾರೋಗ್ಯದ ಪರಿಸ್ಥಿತಿಯಲ್ಲಿ ಉದ್ಯೋಗಿಗಳಿಗೆ ಹಣದ ಸಹಾಯ ಮಾಡುವ ಕಂಪನಿಗಳೂ ಸಾಕಷ್ಟಿವೆ.

ಹೆರಿಗೆ (Childbirth) ಸಮಯದಲ್ಲಿ ಮೂರು ತಿಂಗಳು ವೇತನ ಸಹಿತ ರಜೆಯನ್ನು ಕಂಪನಿಗಳು ನೀಡುವುದು ನಿಮಗೆ ಗೊತ್ತು. ಆದ್ರೆ ಈ ಕಂಪನಿ (Company) ಮಕ್ಕಳನ್ನು ಹೆರಲು ಉದ್ಯೋಗಿ (employee) ಗಳಿಗೆ ಹಣದ ಸಹಾಯ ಮಾಡುತ್ತದೆ. ಹತ್ತೋ, ಇಪ್ಪತ್ತೋ ಸಾವಿರ ಅಲ್ಲ, ಮಕ್ಕಳನ್ನು ಪಡೆಯಲು ಬಯಸಿರುವ ಉದ್ಯೋಗಿಗಳಿಗೆ ಕಂಪನಿ ಲಕ್ಷಾಂತರ ರೂಪಾಯಿ ಸಹಾಯ ಮಾಡುತ್ತದೆ.

Tap to resize

Latest Videos

ಇಂದೋರ್: ಒಂದೂವರೆ ತಿಂಗಳಲ್ಲಿ 2.5 ಲಕ್ಷ ಗಳಿಸಿದ ಭಿಕ್ಷುಕಿ! ಇವಳ ಬಳಿ ಇದೆ ಜಮೀನು, ಮನೆ, ಕಾರು..

ಮಕ್ಕಳನ್ನು ಹೆರಲು ಹಣ ಸಹಾಯ : ಮಕ್ಕಳನ್ನು ಪಡೆಯಲು ಉದ್ಯೋಗಿಗಳಿಗೆ ಹಣದ ಸಹಾಯ ಮಾಡುವ ಕಂಪನಿ ಹೆಸರು ಬೋಯಂಗ್ ಗ್ರೂಪ್ ( Booyoung Group). ಕಂಪನಿ ಯಾಕೆ ನಾವು ಹೀಗೆ ಮಾಡ್ತಿದ್ದೇವೆ ಎಂಬುದನ್ನು ಕೂಡ ಹೇಳಿದೆ. ಕಂಪನಿ ಇದನ್ನು ಪ್ರೋತ್ಸಾಹಧನ ಎಂದು ಕರೆದಿದೆ. 

ಜಗತ್ತಲ್ಲಿ ಕೇವಲ 3 ವ್ಯಕ್ತಿಗಳ ಬಳಿಯಿದೆ ವಿಶ್ವದ ಅತ್ಯಂತ ದುಬಾರಿ ಕಾರು; ಅಬ್ಬಬ್ಬಾ ಬೆಲೆ ಇಷ್ಟೊಂದಾ?

ಕಂಪನಿ ಇದಕ್ಕೆ ಸಂಬಂಧಿಸಿದಂತೆ ಒಂದು ಪ್ರೆಸ್ ನೋಟ್ ಬಿಡುಗಡೆ ಮಾಡಿದೆ. ಅದ್ರಲ್ಲಿ ತನ್ನ ಉದ್ಯೋಗಿಗಳಿಗೆ ಮಗುವನ್ನು ಹೊಂದಲು 100 ಮಿಲಿಯನ್ ಕೊರಿಯನ್ ವಾನ್ ಅಂದ್ರೆ ಸುಮಾರು 62.34 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದೆ. ಇದಲ್ಲದೆ 2021 ರಿಂದ ಒಟ್ಟು 70 ಮಕ್ಕಳನ್ನು ಹೊಂದಿರುವ ಸಿಬ್ಬಂದಿ ಸದಸ್ಯರಿಗೆ ಒಟ್ಟು 7 ಬಿಲಿಯನ್ ಕೊರಿಯನ್ ವಾನ್ ಅಂದಾಜು 43.6 ಕೋಟಿ ರೂಪಾಯಿ ನಗದನ್ನು ವಿತರಿಸಲು ಕಂಪನಿಯು ಘೋಷಿಸಿದೆ. ಇಲ್ಲಿ ಬರೀ ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ ಪುರುಷ ಉದ್ಯೋಗಿಗಳಿಗೂ ಮಕ್ಕಳನ್ನು ಪಡೆಯಲು ಹಣದ ನೆರವು ಸಿಗಲಿದೆ.

ಕೋರಿಯಾದಲ್ಲಿ ಜನನ ಪ್ರಮಾಣವು ವೇಗವಾಗಿ ಕಡಿಮೆಯಾಗುತ್ತಿದೆ. ಸದ್ಯ ದರವು ಶೇಕಡಾ 0.78 ರಷ್ಟಿದೆ. ಇದು ವಿಶ್ವದ ಅತ್ಯಂತ ಕಡಿಮೆ ಫಲವತ್ತತೆ ದರವಾಗಿದೆ. ಕೊರಿಯಾದ ಅಧಿಕೃತ ಮಾಹಿತಿಯ ಪ್ರಕಾರ, ಈ ದರವು 2025 ರ ವೇಳೆಗೆ ಶೇಕಡಾ 0.65ರಷ್ಟು ತಲುಪುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕಂಪನಿ ಇಂಥ ಕ್ರಮಕೈಗೊಂಡಿದೆ. ಕಂಪನಿಯು   ಹೆಚ್ಚಿನ ಮಕ್ಕಳನ್ನು ಹೊಂದುವ ಉದ್ಯೋಗಿಗಳಿಗೆ ಆರ್ಥಿಕವಾಗಿ ಹಣವನ್ನು ನೀಡುವ ಘೋಷಣೆ ಮಾಡಿದೆ. 

ಮಕ್ಕಳ ಪಾಲನೆ ಈಗಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕೆ ಜನರು ಒಂದೋ ಎರಡೋ ಮಕ್ಕಳಿಗೆ ಸೀಮಿತಗೊಳಿಸ್ತಿದ್ದಾರೆ. ಕಂಪನಿ ಆರ್ಥಿಕ ಸಹಾಯ ಮಾಡುತ್ತಿರುವ ಕಾರಣ, ಮಕ್ಕಳ ಪೋಷಣೆ ಉದ್ಯೋಗಿಗಳಿಗೆ ಸುಲಭವಾಗಲಿದೆ ಎಂದು ಕಂಪನಿಯ ಅಧ್ಯಕ್ಷ ಲೀ ಜಂಗ್-ಕ್ಯುನ್ ಹೇಳಿದ್ದಾರೆ. ಮಕ್ಕಳನ್ನು ಪಡೆಯಲು ಇದ್ರಿಂದ ಪ್ರೋತ್ಸಾಹ ಕೂಡ ಸಿಗಲಿದೆ. 

ಮೂರು ಮಕ್ಕಳನ್ನು ಹೊಂದಿರುವ ಉದ್ಯೋಗಿಗಳು ಬಾಡಿಗೆ ಮನೆ ಅಥವಾ 1.8 ಕೋಟಿ ರೂಪಾಯಿ ಮಧ್ಯೆ ಒಂದನ್ನು ಆಯ್ಕೆ ಮಾಡುವ ಸೌಲಭ್ಯ ಹೊಂದಿರುತ್ತಾರೆ. ಈ ಕಂಪನಿಯನ್ನು 1983 ರಲ್ಲಿ ಸ್ಥಾಪಿಸಲಾಗಿದೆ.  ಇಲ್ಲಿಯವರೆಗೆ 270,000 ಮನೆಗಳನ್ನು ನಿರ್ಮಿಸಲಾಗಿದೆ. ಈ ಕಂಪನಿ ಅಲ್ಲದಷೆ ಕೋರಿಯಾ ಸರ್ಕಾರ ಹಾಗೂ ಕೆಲ ಸಂಘ ಸಂಸ್ಥೆಗಳು ಕೂಡ ವಾರ್ಷಿಕ ಸಹಾಯ ನೀಡುತ್ತಿವೆ.

click me!