ಭಾರತದ ಹೊಡೆತಕ್ಕೆ ಚೀನಾ ಟೆಕ್ಸ್‌ಟೈಲ್ ಉದ್ಯಮ ತತ್ತರ, ತೀವ್ರ ಆರ್ಥಿಕ ಸಂಕಷ್ಟ!

Published : Jul 10, 2022, 04:04 PM IST
ಭಾರತದ ಹೊಡೆತಕ್ಕೆ ಚೀನಾ ಟೆಕ್ಸ್‌ಟೈಲ್ ಉದ್ಯಮ ತತ್ತರ, ತೀವ್ರ ಆರ್ಥಿಕ ಸಂಕಷ್ಟ!

ಸಾರಾಂಶ

ಜವಳಿ ಉದ್ಯಮದಲ್ಲಿ ಭಾರತ, ವಿಯೆಟ್ನಾಂ,  ಬಾಂಗ್ಲಾದೇಶದ ಪ್ರಾಬಲ್ಯ ಅಗ್ರಸ್ಥಾನದಲ್ಲಿದ್ದ ಚೀನಾ ಟೆಕ್ಸ್‌ಟೈಲ್ ಉದ್ಯಮಕ್ಕೆ ತೀವ್ರ ನಷ್ಟ ಕಚ್ಚಾ ವಸ್ತುಗಳ ಆಮದು ಭಾರಿ ಕುಸಿತ, ಹಲವು ಜವಳಿಕಂಪನಿ ಸ್ಥಗಿತ  

ನವದೆಹಲಿ(ಜು.10):  ಕೋವಿಡ್ ಬೆನ್ನಲ್ಲೇ ಕುಸಿತ ತಂಡ ಚೀನಾ ಜವಳಿ ಉದ್ಯಮ ಇದೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.  ಕೊರೋನಾಗೂ ಮೊದಲು ವಿಶ್ವ ಟೆಕ್ಸ್‌ಟೈಲ್ ಉದ್ಯಮದಲ್ಲಿ ಚೀನಾ ಪ್ರಾಬಲ್ಯ ಸಾಧಿಸಿತ್ತು. ಆದರೆ ಕೊರೋನಾ ಸಮಯದಲ್ಲಿ ಚೀನಾ ಸೇರಿದಂತೆ ಬಹುತೇಕ ದೇಶಗಳು ಹಿನ್ನಡೆ ಅನುಭವಿಸಿತ್ತು. ಆದರೆ ಭಾರತ ಫೀನಿಕ್ಸ್‌ನಂತೆ ಎದ್ದು ಬಂದಿತ್ತು. ಇದರ ಪರಿಣಾಮ ಚೀನಾ ಟೆಕ್ಸ್‌ಟೈಲ್ ಉದ್ಯಮ ಆದಾಯ ಕೊರತೆ ಅನುಭವಿಸುತ್ತಿದೆ. 

ಕಚ್ಚಾ ವಸ್ತುಗಳ ಬೆಲೆ ಏರಿಕೆ, ಚೀನಾ ಟೆಕ್ಸ್‌ಟೈಲ್‌ಗೆ ಇದ್ದ ಬೇಡಿಕೆ ಕುಸಿತದ ಪರಿಣಾಮ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚೀನಾ ಟೆಕ್ಸ್‌ಟೈಲ್ ಬೇಡಿಕೆ ಶೇಕಡಾ 40 ರಷ್ಟು ಕುಸಿತ ಕಂಡಿದೆ. ಚೀನಾ ರಫ್ತು ಮತ್ತು ಆಮದು ಚೇಂಬರ್ ಪ್ರಕಟಿಸಿರುವ ಮಾಹಿತಿ ಪತ್ರದಲ್ಲಿ 2020ರ  ಮೊದಲ ಭಾಗದಲ್ಲಿ ಚೀನಾ ಆರ್ಡರ್ ಟ್ರಾನ್ಸ್‌ಫರ್ 6 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಿತ್ತು. ಇನ್ನು ಕಾಟನ್ ಟೆಕ್ಸ್‌ಟೈಲ್ ಆರ್ಡರ್ ಟ್ರಾನ್ಸ್‌ಫರ್ 1 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಿತ್ತು. ಆದರೆ ಇದೀಗ ಉತ್ಪನ್ನಗಳ ಬೇಡಿಕೆ ಪ್ರಮಾಣ ಶೇಕಡಾ 30 ರಷ್ಟು ಮಾತ್ರವಿದೆ. ಇನ್ನುಳಿದ 70 ರಷ್ಟು ಉತ್ಪನ್ನಗಳಿಗೆ ಬೇಡಿಕೆ ಇಲ್ಲ ಎಂದಿದೆ.

ಭಾರತದಿಂದ ಪಲಾಯನ ಮಾಡಿದ ವಿವೋ ಕಂಪನಿ ನಿರ್ದೇಶಕರು?

2020 ಹಾಗೂ 2021ರಲ್ಲಿ ಕೋವಿಡ್ ಕಾರಣ ಕಚ್ಚಾ ವಸ್ತುಗಳ ಆಮದು ಹಾಗೂ ಉತ್ಪನ್ನಗಳ ರಫ್ತು ಭಾರಿ ಕುಸಿತ ಕಂಡಿತ್ತು. ಆದರೆ ಕೋವಿಡ್‌ನಿಂದ ಚೇತರಿಸಿಕೊಂಡರೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಉತ್ಪನ್ನಗಳ ಬೆಲೆ ಅಧಿಕವಾಗಿದೆ. ಇದರಿಂದ ಬೇಡಿಕೆಯೂ ಕುಸಿತ ಕಂಡಿದೆ.  ಸೆಪ್ಟೆಂಬರ್ ವೇಳೆಗೆ ಚೀನಾದ ಹಲವು ಗಾರ್ಮೆಂಟ್ಸ್ ಫ್ಯಾಕ್ಟರಿ ಬಂದ್ ಆಗಲಿವೆ ಅನ್ನೋ ಎಚ್ಚರಿಕೆಯನ್ನು ಚೀನಾ ಆಮದು ಹಾಗೂ ರಫ್ತು ಚೇಂಬರ್ ನೀಡಿದೆ.

ಅಮೆರಿಕ ಹತ್ತಿ ಜವಳಿ ಮತ್ತು ಉಡುಪುಗಳ ಆಮದುಗಳಲ್ಲಿ ಚೀನಾದ ಪಾಲು ಶೇಕಡಾ 15.3 ಕ್ಕೆ ಇಳಿದಿದೆ. ಆದರೆ ಭಾರತ, ವಿಯೆಟ್ನಾಂ ಹಾಗೂ ಬಾಂಗ್ಲಾದೇಶ ಮೊದಲ ಮೂರು ಸ್ಥಾನದಲ್ಲಿದೆ. ಭಾರತ ಜವಳಿ ಉದ್ಯಮದಲ್ಲಿ ಭಾರಿ ಏರಿಕೆ ಕಂಡಿದೆ. ಕಚ್ಚಾ ವಸ್ತುಗಳ ಆಮದು ಹಾಗೂ ಟೆಕ್ಸ್‌ಟೈಲ್ ರಫ್ತಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇದೀಗ ಚೀನಾ ಪಾಲನ್ನು ಈ ಮೂರು ದೇಶಗಳು ಬಾಚಿಕೊಂಡಿದೆ.

ಬಾಹ್ಯಾಕಾಶದಲ್ಲಿ ಚೀನಾದಿಂದ ಸೌರ ವಿದ್ಯುತ್ ಸ್ಥಾವರ? 2028ಕ್ಕೆ ವಿದ್ಯುತ್ ಉತ್ಪಾದನೆ

ವಿಶ್ವ ಮಾರುಕಟ್ಟೆಯಲ್ಲಿದ್ದ ಕಾಟನ್ ಟೆಕ್ಸ್‌ಟೈಲ್ ಆರ್ಡರ್ ಬಹುಪಾಲು ಭಾರತದ ಪಾಲಾಗಿದೆ. ಇದರ ಜೊತೆಗೆ ಬಾಂಗ್ಲಾದೇಶ, ವಿಯೆಟ್ನಾಂ, ಕಾಂಬೋಡಿಯಾ, ಇಂಡೋನೇಷಿಯಾ ಕೂಡ ಆರ್ಡರ್ ಪಡೆದುಕೊಂಡಿದೆ. ಪ್ರಮಖ ಪ್ರತಿಸ್ಪರ್ಧಿಗಳಿಂದ ಚೀನಾ ಜವಳಿ ಉದ್ಯಮ ಆದಾಯ ಕೊರತೆ ಅನುಭವಿಸುತ್ತಿದೆ.  ಕೋವಿಡ್ ಸಂದರ್ಭದಲ್ಲಿ ಚೀನಾದ ರಿಯಲ್ ಎಸ್ಟೇಟ್ ಉದ್ಯಮ ತೀವ್ರ ಹೊಡೆತ ಅನುಭವಿಸಿತ್ತು. ಇದೀಗ ಚೀನಾ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಂಡಿದೆ. ಆದರೆ ಕಳೆದೆರಡು ವರ್ಷದಲ್ಲಿ 100ಕ್ಕೂ ಹೆಚ್ಚು ಚೀನಾ ರಿಯಲ್ ಎಸ್ಟೇಟ್ ಕಂಪನಿಗಳು ಸ್ಥಗಿತಗೊಂಡಿದೆ. ಇದೀಗ ಜವಳಿ ಉದ್ಯಮ ಕೂಡ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ