
ನವದೆಹಲಿ(ಡಿ.02): ಸ್ಥಳೀಯ ಕರೆನ್ಸಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ನಡೆಸಲು ಭಾರತ ನೀಡಿದ್ದ ಪ್ರಸ್ತಾವನೆಯನ್ನು ಚೀನಾ ತಿರಸ್ಕರಿಸಿದೆ.
ಹೆಚ್ಚುತ್ತಿರುವ ಟ್ರೇಡ್ ಡೆಫಿಸಿಟ್(ವ್ಯಾಪಾರ ಕೊರತೆ)ನ್ನು ಸರಿದೂಗಿಸಲು ಭಾರತ ಸ್ಥಳೀಯ ಕರೆನ್ಸಿಯಲ್ಲೇ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ನಡೆಸುವ ಪ್ರಸ್ತಾವನೆ ನೀಡಿತ್ತು.
2017-18 ನೇ ಸಾಲಿನಲ್ಲಿ ಚೀನಾಗೆ ಭಾರತದ ರಫ್ತು 13.4 ಬಿಲಿಯನ್ ನಷ್ಟಾಗಿದ್ದರೆ, ಆಮದು ಪ್ರಮಾಣ 76.4 ಬಿಲಿಯನ್ ಡಾಲರ್ ನಷ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ನೆರೆಯ ರಾಷ್ಟ್ರ ಚೀನಾದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಸ್ಥಳೀಯ ಕರೆನ್ಸಿಯಲ್ಲಿ ನಡೆಸಲು ಉದ್ದೇಶಿಸಿತ್ತು.
ಆದರೆ ಚೀನಾ ನಮ್ಮ ಪ್ರಸ್ತಾವನೆಗೆ ಒಪ್ಪಿಗೆ ನೀಡದೇ ಇರುವುದು ಭಾರತ-ಚೀನಾ ನಡುವಿನ ವಾಣಿಜ್ಯ ಸಂಬಂಧಕ್ಕೆ ಹಿನ್ನಡೆಯಾದಂತೆ ಎಂದು ತಜ್ಞರು ಅಭಿಪ್ರಯೊಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.