ಯುಗಾದಿ-ರಂಜಾನ್ ಹಬ್ಬ ಹಿನ್ನೆಲೆ ಗಗನಕ್ಕೇರಿದ ಮಾಂಸದ ಬೆಲೆ, ಮಟನ್ ಕೆಜಿಗೆ 850 ರೂ!

By Suvarna NewsFirst Published Apr 10, 2024, 9:43 AM IST
Highlights

ಯುಗಾದಿ ಹಾಗೂ ರಂಜಾನ್ ಹಬ್ಬ ಒಟ್ಟಿಗೆ ಬಂದಿರುವ ಹಿನ್ನಲೆ ಮಾಂಸಕ್ಕೆ ಬಾರೀ ಬೇಡಿಕೆ ಬಂದಿದ್ದು, ಬೆಲೆ ಗಗನಕ್ಕೇರಿದೆ. ಬೆಲೆ ಎಷ್ಷಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು(ಏ.10):  ಯುಗಾದಿ ಹಾಗೂ ರಂಜಾನ್ ಹಬ್ಬ ಒಟ್ಟಿಗೆ ಬಂದಿರುವ ಹಿನ್ನಲೆ ಮಾಂಸಕ್ಕೆ ಬಾರೀ ಬೇಡಿಕೆ ಬಂದಿದ್ದು, ಬೆಲೆ ಗಗನಕ್ಕೇರಿದೆ. ನಿನ್ನೆ ಯುಗಾದಿ ಹಬ್ಬವಿತ್ತು ಅದರ ಮರುದಿನ ಅಂದರೆ ಇಂದು ಹೊಸತೊಡಕು ಮಾಡುವುದು ವಾಡಿಕೆ. ಇದರ ಜೊತೆಗೆ ಇಂದು  ರಂಜಾನ್ ಹಬ್ಬ ಕೂಡ ಇದ್ದು ಮಾಂಸದ ಬೆಲೆ ಡಬಲ್ ಆಗಿದೆ.

ಚಿಕನ್ ಹಾಗೂ ಮಟನ್ ಗೆ ಬಾರಿ ಬೇಡಿಕೆ ಹಿನ್ನೆಲೆ ಬೆಲೆ ಏರಿಯಾಗಿದ್ದು, ಒಂದು ಕೆಜಿ ಸ್ಕೀನ್ ಔಟ್ ಗೆ 300 ರುಪಾಯಿ. ನಾಟಿ ಕೋಳಿ ಕೆಜಿಗೆ 400 ರೂಪಾಯಿ, ಫಾರಮ್ ಕೋಳಿಗೆ 160 ರೂಪಾಯಿ , ಬಾಯ್ಲರ್ ಕೋಳಿಗೆ 200 ರೂಪಾಯಿ, ವಿತ್ ಸ್ಕಿನ್  ಚಿಕನ್ ಗೆ  280 ರುಪಾಯಿ, ಬೋನ್‌ಲೆಸ್‌ ಚಿಕನ್‌ಗೆ 520 ರೂ.  ಇನ್ನು ಒಂದು ಕೆಜಿ ಮಟನ್ ಗೆ 850 ರುಪಾಯಿ ಏರಿಕೆಯಾಗಿದೆ. ಬೆಲೆ ಏರಿಕೆಯಾದ್ರು ಜನ ಮಾತ್ರ ಮಾಂಸ ಖರೀದಿಗೆ ಮುಗಿಬೀಳುತ್ತಿದ್ದಾರೆ.

ಬಾಪೂಜಿನಗರದ ಪಾಪಣ್ಣ ಮಟನ್ ಸ್ಟಾಲ್ ಬಳಿ ಕಿಲೋ ಮೀಟರ್ ಗಟ್ಟಲೆ ಕ್ಯೂ ನಿಂತಿರುವ ನಾನ್ ವೆಜ್ ಪ್ರಿಯರು ಮಾಂಸ ಖರೀದಿ ಮಾಡುತ್ತಿದ್ದಾರೆ. ಬೆಳ್ಳಗ್ಗಿನ ಜಾವ 4 ಗಂಟೆಯಿಂದಲೂ ಜನರು ಕ್ಯೂ ನಿಂತಿದ್ದಾರೆ.

ಕೋಟಿ ಕುಳದ ಮಗನಾಗಿದ್ದರೂ ಕೇರಳ, ಬೆಂಗಳೂರಿನಲ್ಲಿ ಸಾಮಾನ್ಯರಂತೆ ಬದುಕಿದ ವಜ್ರದ ವ್ಯಾಪಾರಿ ಮೊಮ್ಮಗ!

ಇನ್ನು ಬೆಂಗಳೂರಿನಲ್ಲಿ 300 ರೂ ಇದ್ದ ಹಂದಿ ಮಾಂಸದ ಬೆಲೆ 600ರ ಗಡಿ ತಲುಪಿದೆ. ಕರಾವಳಿ ಮತ್ತು ಕೊಡಗು, ಮಂಡ್ಯ ಕಡೆಯಲ್ಲಿ ಹಂದಿ ಮಾಂಸದ ಬಳಕೆ ಹೆಚ್ಚು ಇದ್ದು, ಮದುವೆ ಮತ್ತು ಇನ್ನಿತರ ಸಮಾರಂಭದ ಹಿನ್ನೆಲೆ ಹಂದಿ ಮಾಂಸದ ಬೆಲೆ ಹೆಚ್ಚಿದೆ. ಹಂದಿಯ ಇಳುವರಿ ಕಡಿಮೆ ಇದ್ದು, ಪೂರೈಕೆ ಆಗದಿರುವುದು ಇದಕ್ಕೆ ಕಾರಣವಾಗಿದೆ. 

ಕಳೆದ ಕೆಲ ವಾರಗಳಿಂದಲೇ ಬಿಸಿಲಿನ ತಾಪ ಏರುತ್ತಿದ್ದಂತೆ ನಗರದಲ್ಲಿ ತರಕಾರಿ ಜೊತೆಗೆ ಚಿಕನ್‌, ಮೀನು, ಮಾಂಸಾಹಾರಗಳ ಬೆಲೆಯೂ ಹೆಚ್ಚಳ ಕಾಣುತ್ತಿರುವುದು ಗ್ರಾಹಕರಲ್ಲಿ ಚಿಂತೆ ಮೂಡಿಸಿದೆ. ಇಲ್ಲಿನ ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆಗಳಿಗೆ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಸಗಟು ತರಕಾರಿ ಪೂರೈಕೆ ಆಗುತ್ತಿಲ್ಲ. ಇದರಿಂದ ಇಡೀ ನಗರದ ಮಾರುಕಟ್ಟೆಗಳಲ್ಲಿ ದರ ಹೆಚ್ಚಳವಾಗಿದೆ.

ಕೋಟಿ ಕೋಟಿ ಎಣಿಸಿ, ಬೀದಿಗೆ ಬಿದ್ದ ಭಾರತೀಯ ಉದ್ಯಮಿಗಳಿವರು, ಲಕ್ ಯಾವಾಗ ಕೈ ಕೊಡುತ್ತೋ ಯಾರಿಗ್ಗೊತ್ತು?

ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಬಿಸಿಲಿನ ಕಾರಣಕ್ಕೆ ಇಳುವರಿ ಕುಂಠಿತ ಆಗಿರುವುದು, ಕೈಗೆ ಬಂದ ಬೆಳೆಯೂ ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಮಾರುಕಟ್ಟೆಗೆ ತರಕಾರಿ ಬರುವುದು ಕಡಿಮೆಯಾಗಿದೆ. ಹೀಗಾಗಿ ಕಳೆದೊಂದು ವಾರದಿಂದ ಬೆಲೆ ಏರಿಕೆ ಕಾಣುತ್ತಿದ್ದು, ಮುಂದಿನ ಒಂದೂವರೆ ಎರಡು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ. 

click me!