Chhattisgarh Fuel Price: ಪೆಟ್ರೋಲ್, ಡೀಸೆಲ್ ಮೇಲಿನ VAT ಕಡಿತ, ಮತ್ತೆ 1.36 ರೂ ಇಳಿಕೆ!

By Suvarna NewsFirst Published Nov 22, 2021, 10:37 PM IST
Highlights
  • ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ VAT ಕಡಿತ ಮಾಡಿದ ಚತ್ತೀಸಘಡ
  • ಇಂಧನ ಬೆಲೆ ಗರಿಷ್ಟ 1.36 ರೂಪಾಯಿ ಇಳಿಕ
  • ಜನಸಾಮಾನ್ಯರಿಗೆ ಕೊಂಚ ರಿಲೀಫ್
     

ರಾಯ್‌ಪುರ್(ನ.22):  ಪೆಟ್ರೋಲ್ ಹಾಗೂ ಡೀಸೆಲ್(Petrol Diesel Price) ಬೆಲೆ ಗಗನಕ್ಕೇರಿದ ಬಳಿಕ ಕೇಂದ್ರ ಸರ್ಕಾರ ಅಬಕಾರಿ ಸುಂಕ(Tax) ಕಡಿತಗೊಳಿಸಿ ಜನಸಾಮಾನ್ಯರಿಗೆ ಕೊಂಚ ರಿಲೀಫ್ ನೀಡಿತ್ತು. ಕೇಂದ್ರದ ನಿರ್ಧಾರ ಬಳಿಕ ಕರ್ನಾಟಕ (Karnataka) ಸೇರಿದಂತೆ ಹಲವು ರಾಜ್ಯಗಳು ತೆರಿಗೆ ಕಡಿತಗೊಳಿಸಿ ಜನಸಾಮಾನ್ಯರ ಸಂಕಷ್ಟಕ್ಕೆ ನೆರವಾಗಿತ್ತು. ಇದೀಗ ಚತ್ತೀಸಘಢ ಸರ್ಕಾರ(Chhattisgarh) ಇಂಧನದ ಮೇಲಿನ VAT(Value-Added Tax) ಕಡಿತಗೊಳಿಸಿದೆ. ಇದರಿಂದ ಗರಿಷ್ಠ 1.36 ರೂಪಾಯಿ ಇಂಧನ ಬೆಲೆ ಇಳಿಕೆಯಾಗಲಿದೆ.

ಚತ್ತೀಸಘಡ ಮುಖ್ಯಮಂತ್ರಿ ಭೂಪೇಶ್ ಬಾಘೆಲ್(Bhupesh Baghel) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ(Cabinet meeting) ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಾಘೆಲ್ ನಿವಾಸದಲ್ಲಿ ನಡೆದ ಈ ಸಭೆಯಿಂದ ಚತ್ತೀಸಘಡ ಜನರು ಮತ್ತಷ್ಟು ನಿರಾಳರರಾಗಿದ್ದಾರೆ. ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ 1,000 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಭೂಪೇಶ್ ಬಾಘೆಲ್ ಹೇಳಿದ್ದಾರೆ. ಪೆಟ್ರೋಲ್ ಬೆಲೆ 70 ಪೈಸೆ ಹಾಗೂ ಡೀಸೆಲ್ ಬಲೆ 1.36 ರೂಪಾಯಿ ಕಡಿಮೆಯಾಗಲಿದೆ ಎಂದು ಸಿಎಂ ಹೇಳಿದ್ದಾರೆ.

Petrol Diesel price: ಇತರ ಎಲ್ಲಾ ರಾಜ್ಯಕ್ಕಿಂತ ಕರ್ನಾಟಕದಲ್ಲಿ ಇಂಧನ ಅಗ್ಗ!

ಡೀಸೆಲ್ ಮೇಲೆ ಶೇಕಡಾ 2 ಹಾಗೂ ಪೆಟ್ರೋಲ್ ಮೇಲೆ ಶೇಕಡಾ 1 ರಷ್ಟು ವ್ಯಾಟ್ ತೆರಿಗೆ ಕಡಿತಗೊಳಿಸಲಾಗಿದೆ.  ಚತ್ತೀಸಘಡ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಶೇಕಡಾ 25 ರಷ್ಟು VAT ತೆರಿಗೆ ಹಾಕುತ್ತಿದೆ.  ಇದೀಗ ಕೇಂದ್ರ ಸರ್ಕಾರದ ಬಳಿಕ ವ್ಯಾಟ್ ಕಡಿತಗೊಳಿಸುವ ಮೂಲಕ ಚತ್ತೀಸಘಡ ಸರ್ಕಾರ ಇತರ ರಾಜ್ಯಗಳಂತೆ ಬೆಲೆ ಇಳಿಕೆ ಮಾಡಿದೆ. ಈ ಮೂಲಕ ಕಾಂಗ್ರೆಸ್ ಆಳ್ವಿಕೆ ರಾಜ್ಯಗಳಲ್ಲಿ ಬೆಲೆ ಇಳಿಕೆ ಮಾಡಿದ 3ನೇ ರಾಜ್ಯ ಚತ್ತೀಸಘಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಪಂಜಾಬ್ ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿತ್ತು. ಬಳಿಕ ರಾಜಸ್ಥಾನ ಸರ್ಕಾರ ತೆರಿಗೆ ಕಡಿತ ಮಾಡಿತ್ತು. ಚತ್ತೀಸಘಡದಲ್ಲಿ ತೆರಿಗೆ ಕಡಿತ ಇತರ ರಾಜ್ಯಗಳಿಗೆ ಹೋಲಿಸಿದರೆ ಕನಿಷ್ಠವಾಗಿದೆ. ಆದರೆ ಬೆಲೆ ಇಳಿಕೆಗೆ ಪ್ರಯತ್ನ ಮಾಡಿದೆ. 

ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ್ದಾರೆ. ಇದರಿಂದ ಪೆಟ್ರೋಲ್ ಬೆಲೆ  7 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಕಡಿಮೆಯಾಗಿದೆ. ಪೆಟ್ರೋಲ್ ಬೆಲೆ 113 ರೂಪಾಯಿ ದಾಟಿ ಮುನ್ನಗ್ಗುತ್ತಿದ್ದರೆ, ಡೀಸೆಲ್ 100 ರೂಪಾಯಿ ದಾಟಿತ್ತು. ಬದುಕು ಕಷ್ಟವಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿತ್ತು. 

Rajasthan ವ್ಯಾಟ್‌ ಕಡಿತ : ಪೆಟ್ರೋಲ್‌ 4 ರು., ಡೀಸೆಲ್‌ ಬೆಲೆ 5 ರು. ಇಳಿಕೆ

ಕೇಂದ್ರದ ನಿರ್ಧಾರ ಬಳಿಕ ಬಿಜೆಪಿ ಸರ್ಕಾರವಿರುವ ರಾಜ್ಯಗಳು ತಮ್ಮ ತಮ್ಮ ರಾಜ್ಯ ಸರ್ಕಾರ ವಿದಿಸಿದ್ದ ತೆರಿಗೆ ಕಡಿತಗೊಳಿಸಿತ್ತು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 7 ರೂಪಾಯಿ ಕಡಿತಗೊಳಿಸಿತ್ತು. ಇದರಿಂದ ಒಂದೇ ಬಾರಿಗೆ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ 13 ರೂಪಾಯಿ ಹಾಗೂ ಡೀಸೆಲ್ ಬೆಲೆ 17 ರೂಪಾಯಿ ಕಡಿತಗೊಂಡಿತು. ಪರಿಣಾಮ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗೆ ಇಳಿಕೆಯಾದರೆ, ಡೀಸೆಲ್ ಬೆಲೆ 85ರ ಆಸುಪಾಸಿಗೆ ಇಳಿಕೆಯಾಗಿತ್ತು.

ಈ ಬೆಳವಣಿಗೆಗಳ ಬಳಿಕ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿದ್ದರು. ಪಂಜಾಬ್‌ನಲ್ಲಿ ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಧನದ ಮೇಲಿನ ಸುಂಕ ಕಡಿತಗೊಳಿಸಲಾಗಿದೆ ಎಂದು ಚನಿ ಹೇಳಿದ್ದರು. ಪಂಜಾಬ್ ಸರ್ಕಾರ ಪೆಟ್ರೋಲ್ ಮೇಲೆ 10 ರೂಪಾಯಿ ಹಾಗೂ ಡೀಸೆಲ್ ಮೇಲೆ 5 ರೂಪಾಯಿ ಕಡಿತಗೊಳಿಸಿತು. ಈ ಮೂಲಕ ಕೇಂದ್ರ ಬಳಿಕ ತೆರಿಗೆ ಇಳಿಸಿದ ಮೊದಲ ಕಾಂಗ್ರೆಸ್ ಸರ್ಕಾರದ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರಾವಾಗಿತ್ತು.

click me!