ವಿಲೀನಗೊಂಡ ಬ್ಯಾಂಕ್‌ ಚೆಕ್‌ ಏ.1ರಿಂದ ಅಮಾನ್ಯ!

By Kannadaprabha NewsFirst Published Mar 14, 2021, 7:16 AM IST
Highlights

ವಿಲೀನಗೊಂಡ ಬ್ಯಾಂಕ್‌ ಚೆಕ್‌ ಏ.1ರಿಂದ ಅಮಾನ್ಯ| ಸಿಂಡಿಕೇಟ್‌, ವಿಜಯಾ ಸೇರಿ 8 ಬ್ಯಾಂಕ್‌| ಗ್ರಾಹಕರು ಹೊಸ ಚೆಕ್‌, ಪಾಸ್ಬುಕ್‌ ಪಡೆಯಿರಿ

ನವದೆಹಲಿ(ಮಾ.14): ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ ಸೇರಿದಂತೆ ಇತ್ತೀಚೆಗೆ ವಿಲೀನಗೊಂಡಿರುವ ಸಾರ್ವಜನಿಕ ವಲಯದ 8 ಬ್ಯಾಂಕುಗಳ ಚೆಕ್‌ ಮತ್ತು ಪಾಸ್‌ಬುಕ್‌ಗಳು ಏ.1ರಿಂದ ಅಮಾನ್ಯಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಈ ಬ್ಯಾಂಕುಗಳ ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಚೆಕ್‌ಬುಕ್‌ ಹಾಗೂ ಪಾಸ್‌ಬುಕ್‌ಗಳನ್ನು ಪರಿಷ್ಕರಿಸಿಕೊಳ್ಳಬೇಕಿದೆ.

ದೇನಾ ಬ್ಯಾಂಕ್‌ ಮತ್ತು ವಿಜಯಾ ಬ್ಯಾಂಕ್‌ಗಳು ಬ್ಯಾಂಕ್‌ ಆಫ್‌ ಬೊರೋಡಾದಲ್ಲಿ ವಿಲೀನಗೊಂಡಿದ್ದವು. ಅದೇ ರೀತಿ ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಆಂಧ್ರ ಬ್ಯಾಂಕುಗಳು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಜೊತೆ ವಿಲೀನಗೊಂಡಿದ್ದರೆ, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಯುನೈಟೆಡ್‌ ಬ್ಯಾಂಕ್‌ ಅನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲಾಗಿದೆ. ಸಿಂಡಿಕೇಟ್‌ ಬ್ಯಾಂಕ್‌ ಕೆನರಾ ಬ್ಯಾಂಕ್‌ನಲ್ಲಿ ಮತ್ತು ಅಲಹಾಬಾದ್‌ ಬ್ಯಾಂಕ್‌ ಇಂಡಿಯನ್‌ ಬ್ಯಾಂಕ್‌ ಜೊತೆ ವಿಲೀನಗೊಂಡಿದ್ದವು.

ಏನೇನು ಬದಲಾವಣೆ?

- ಏ.1ರಿಂದ ದೇನಾ, ವಿಜಯಾ, ಕಾರ್ಪೊರೇಷನ್‌, ಆಂಧ್ರ, ಯುನೈಟೆಡ್‌, ಸಿಂಡಿಕೇಟ್‌, ಅಲಹಾಬಾದ್‌ ಬ್ಯಾಂಕ್‌ ಮತ್ತು ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ಗಳ ಚೆಕ್‌ ಮತ್ತು ಪಾಸ್‌ಬುಕ್‌ ಸ್ವೀಕರಿಸುವುದಿಲ್ಲ.

- ಈ ಬ್ಯಾಂಕುಗಳ ಗ್ರಾಹಕರು ವಿಲೀನಗೊಂಡಿರುವ ಬ್ಯಾಂಕುಗಳಿಂದ ಹೊಸ ಚೆಕ್‌ಬುಕ್‌ ಮತ್ತು ಪಾಸ್‌ಬುಕ್‌ ಪಡೆದುಕೊಳ್ಳಬೇಕು. ಹಳೆಯದನ್ನು ಹಾಗೇ ಇಟ್ಟುಕೊಳ್ಳಬೇಕು.

- ಅಗತ್ಯಬಿದ್ದರೆ ಮೊಬೈಲ್‌ ನಂಬರ್‌, ವಿಳಾಸ, ನಾಮಿನಿ ಇತ್ಯಾದಿ ವಿವರ ಅಪ್‌ಡೇಟ್‌ ಮಾಡಿಕೊಳ್ಳಬೇಕು.

- ಹೊಸ ವಿವರಗಳನ್ನು ಮ್ಯೂಚುವಲ್‌ ಫಂಡ್‌, ಡಿಮ್ಯಾಟ್‌ ಅಕೌಂಟ್‌, ಜೀವ ವಿಮೆ, ಆದಾಯ ತೆರಿಗೆ ಖಾತೆಗಳು, ಎಫ್‌ಡಿ/ ಆರ್‌ಡಿ, ಪಿಎಫ್‌ ಖಾತೆಗಳು, ಲಾಕರ್‌ಗಳು, ಗ್ಯಾಸ್‌ ಏಜೆನ್ಸಿ ಮುಂತಾದವುಗಳಿಗೆ ನೀಡಬೇಕು.

- ವಿಲೀನಗೊಂಡ ಬ್ಯಾಂಕ್‌ಗಳ ಐಎಫ್‌ಎಸ್‌ಸಿ ಕೋಡ್‌ ಬದಲಾಗುತ್ತವೆ.

click me!