Gold Silver Price:ಕೊರೋನಾ ಅಬ್ಬರದ ಮಧ್ಯೆ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ!

By Suvarna NewsFirst Published Jan 13, 2022, 2:43 PM IST
Highlights

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 13, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

ಬೆಂಗಳೂರು(ಜ.13): ಚಿನ್ನ (Gold)ಅಂದ್ರೆ ಮಹಿಳೆಯರಿಗೆ ವಿಶೇಷವಾದ ಆಕರ್ಷಣೆ.  ಅದೆಷ್ಟೇ ಆಭರಣಗಳಿದ್ರೂ ಇನ್ನೂ ಖರೀದಿಸೋ ಬಯಕೆ. ಇದೇ ಕಾರಣಕ್ಕೆ ಪ್ರತಿದಿನ ಚಿನ್ನದ ಬೆಲೆ ಪರಿಶೀಲಿಸೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂಥವರಿಗೆ ಇಂದಿನ ದರ ಕೊಂಚ ನಿರಾಸೆ ಮೂಡಿಸಲಿದೆ. ಹೌದು ಹೊಸ ವರ್ಷದಾರಂಭದಿಂದ ಇಳಿಕೆ ಹಾದಿ ಹಿಡಿದು ಗ್ರಾಹಕರ ಖುಷಿಗೆ ಕಾರಣವಾಗಿದ್ದ ಚಿನ್ನದ ರೇಟ್, ಕೊರೋನಾ ಅಬ್ಬರದ ಮಧ್ಯೆ ಏರಲಾರಮಭಿಸಿದೆ. ಇಂದು (ಜ. 13) ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು (ಜ. 13) ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚಿನ್ನದ ದರ ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,000 ರೂಪಾಯಿ ಆದರೆ, 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49,100ರೂ.ಇದೆ. ಇನ್ನು ಅತ್ತ ಒಂದು ಕೆ. ಜಿ ಬೆಳ್ಳಿ ದರ 66,000 ರೂಪಾಯಿ ಆಗಿದೆ.

ದೆಹಲಿಯಲ್ಲಿ (Delhi) ಹೇಗಿದೆ?

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಚಿನ್ನ ಏರಿಕೆಯಾಗಿದ್ದು, 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,960 ರೂ.ಆಗಿದ್ದು 24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,220 ರೂ. ಆಗಿದೆ. ಅತ್ತ ಒಂದು ಕೆ.ಜಿ.ಬೆಳ್ಳಿ ದರ 62,000 ರೂ. ಆಗಿದೆ. 

ಮುಂಬೈನಲ್ಲಿ(Mumbai) ಎಷ್ಟಿದೆ ದರ?

ಮುಂಬೈನಲ್ಲಿ ಮಾತ್ರ ಚಿನ್ನದ ದರ ಕೊಂಚ ಏರಿಕೆಯಾಗಿದೆ. ಹೌದು 22 ಕ್ಯಾರಟ್ 10 ಗ್ರಾಂ ಚಿನ್ನದ ದರ, 47,100 ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 48,590ರೂ ಆಗಿದೆ, ಆದರೆ ಬೆಳ್ಳಿ ದರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆಜಿ ಬೆಳ್ಳಿ ದರ 60,800 ರೂಪಾಯಿ ಇದೆ. 

ಚೆನ್ನೈಯಲ್ಲಿ(Chennai) ದರ ಹೀಗಿದೆ

ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 45,190ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 48,200 ರೂಪಾಯಿಯಾದರೆ, ಒಂದು ಕೆ.ಜಿ. ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿ ಒಂದು ಕೆಜಿಗೆ 66,000 ರೂಪಾಯಿ ಆಗಿದೆ. 

"

ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ. ಹೀಗಿದ್ದರೂ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗದಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ಕೊಟ್ಟಿದೆ. ಹೌದು ಇಂದು ಮುಂಬೈ ಹೊರತುಪಡಿಸಿ ಉಳಿದೆಡೆ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಿದ್ದರೂ ಒಮಿಕ್ರಾನ್ ಆತಂಕದ ಮಧ್ಯೆ ಚಿನ್ನದ ದರ ಕುಸಿಯಲಿದೆ ಎಂಬ ಮಾತುಗಳು ಆರ್ಥಿಕ ತಜ್ಞರದ್ದಾಗಿದೆ. 

click me!