Gold Silver Price: ಬೆಂಗಳೂರು, ಚೆನ್ನೈಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ, ಇಲ್ಲಿದೆ ಇಂದಿನ ದರ

By Suvarna NewsFirst Published Jan 5, 2022, 11:17 AM IST
Highlights

ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ
ಸತತ 2 ದಿನ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ದರದಲ್ಲಿ ಇಂದು ಏರಿಕೆ
ಇಲ್ಲಿದೆ 2022 ಜನವರಿ 5 ರ ಗೋಲ್ಡ್, ಸಿಲ್ವರ್ ರೇಟ್

ಬೆಂಗಳೂರು (ಜ.5): ಹೊಸ ವರ್ಷದ ಆರಂಭದಲ್ಲಿ ಸತತ ಎರಡು ದಿನ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು ಏರಿಕೆಯಾಗಿದೆ. ಶುಭ ಕಾರ್ಯಗಳ ಸೂಚನೆ ಸಿಕ್ಕಿರುವಾಗಲೇ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಕಂಡಿದೆ. ಬೆಂಗಳೂರು ಹಾಗೂ ಚೆನ್ನೈಯಲ್ಲಿ ಚಿನ್ನದ ದರದಲ್ಲಿ ಏರಿಕೆಯಾಗಿದ್ದರೆ, ಮುಂಬೈ ಹಾಗೂ ದೆಹಲಿಯಲ್ಲಿ ಚಿನ್ನದ ದರದಲ್ಲಿ ಕೊಂಚ ಮಟ್ಟದ ಇಳಿಕೆಯಾಗಿದೆ. ಆದರೆ, ಈ ನಾಲ್ಕೂ ನಗರಗಳಲ್ಲಿ ಬೆಳ್ಳಿ ದರ ಏಕರೂಪದಲ್ಲಿ ಏರಿಕೆ ಕಂಡಿದೆ. ಒಂದೆಡೆ ದೇಶದಲ್ಲಿ ಕರೋನಾ ಪ್ರಕರಣಗಳು ಏರಿಕೆ ಕಾಣುವ ಮೂಲಕ ವಿವಿಧ ರಾಜ್ಯಗಳಲ್ಲಿ ಶುಭ ಕಾರ್ಯಗಳು ಮದುವೆ ಸಮಾರಂಭಗಳಿಗೆ ಸಾಕಷ್ಟು ಕಟ್ಟುನಿಟ್ಟಿನ ನಿಯಮವನ್ನು ವಿಧಿಸಲಾಗುತ್ತಿದೆ. ಇದರ ನಡುವೆ ಚಿನ್ನ ಹಾಗೂ ಬೆಳ್ಳಿ ದರದಲ್ಲೂ ಏರಿಕೆಯಾಗುತ್ತಿರುವುದು ಗ್ರಾಹಕರ ಚಿಂತೆಗೆ ಕಾರಣವಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಯಾವ ರೀತಿಯ ಏರಿಕೆ-ಇಳಿಕೆ ಕಂಡಿದೆ ಎನ್ನುವುದರ ವಿವರ ಇಲ್ಲಿದೆ.
"

ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?
ಹೊಸ ವರ್ಷದಲ್ಲಿ ಸತತ ಎರಡು ದಿನ ತಗ್ಗಿದ್ದ ಚಿನ್ನದ ದರದಲ್ಲಿ ಬುಧವಾರ ಸ್ವಲ್ಪ ಏರಿಕೆ ಕಂಡಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45 ಸಾವಿರ ರೂಪಾಯಿಯ ಗಡಿ ದಾಟಿದ್ದು, 250 ರೂಪಾಯಿ ಏರಿಕೆಯಾಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49, 250 ಆಗಿದ್ದು, 260 ರೂಪಾಯಿ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 600 ರೂಪಾಯಿ ಏರಿಕೆಯಾಗಿದ್ದು, 62,300 ರೂಪಾಯಿಯ ಗಡಿ ಮುಟ್ಟಿದೆ.

ದೆಹಲಿಯಲ್ಲಿ (Delhi) ಹೇಗಿದೆ?
ದೇಶದ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರದಲ್ಲಿ ಕೊಂಚ ಮಟ್ಟದ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಇಳಿಕೆಯಾಗಿದ್ದು ಇಂದು 47,040 ತಲುಪಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ ಕೊಂಚ ಇಳಿಕೆಯಾಗಿದ್ದು 51, 320 ರೂಪಾಯಿ ತಲುಪಿದೆ. 1 ಕೆಜಿ ಬೆಳ್ಳಿ ದರ 62,300 ರೂಪಾಯಿಯ ಆಗಿದೆ.

ಮುಂಬೈನಲ್ಲಿ(Mumbai) ಎಷ್ಟಿದೆ ದರ?
ಮುಂಬೈನಲ್ಲಿ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಹೌದು 22 ಕ್ಯಾರಟ್ 10 ಗ್ರಾಂ ಚಿನ್ನದ ದರ, 47,250 ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49,250ರೂ ಆಗಿದೆ, ಆದರೆ ಬೆಳ್ಳಿ ದರದಲ್ಲಿ 600 ರೂಪಾಯಿ ಏರಿಕೆಯಾಗಿದೆ. ಮುಂಬೈನಲ್ಲಿ ಒಂದು ಕೆಜಿ ಬೆಳ್ಳಿ ದರ 62, 300 ರೂಪಾಯಿ ಇದೆ. 

ಚೆನ್ನೈಯಲ್ಲಿ(Chennai) ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 180 ರೂಪಾಯಿ ಏರಿಕೆ ಕಂಡು, ಇಂದು 45,350ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 250 ರೂಪಾಯಿ ಏರಿಕೆ ಕಂಡು 49,480 ರೂಪಾಯಿ ಆಗಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ 400 ರೂಪಾಯಿ ಏರಿಕೆ ಕಂಡಿದ್ದು, 66,100 ರೂಪಾಯಿ ಆಗಿದೆ. 


ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ. ಒಮಿಕ್ರಾನ್ ಆತಂಕ ಹೆಚ್ಚುತ್ತಿರುವಾಗಲೇ ದೇಶದ ವಿವಿದೆಡೆ ಲಾಕ್ ಡೌನ್ ನಿಯಮಗಳು ಜಾರಿಯಾಗಿವೆ. ಮದುವೆ ಸೇರಿದಂತೆ ಎಲ್ಲಾ ಸಮಾರಂಭಗಳ ಮೇಲೆ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದೆ. ಈ ನಡುವೆ ಚಿನ್ನ ಹಾಗೂ ಬೆಳ್ಳಿ ದರದಲ್ಲೂ ಏರಿಕೆಯಾಗಿದೆ.

click me!