ಭಾನುವಾರದ ಚಿನ್ನ ಹಾಗೂ ಬೆಳ್ಳಿ ದರ
ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ
2022ರ ಜನವರಿ 9 ಗೋಲ್ಡ್, ಸಿಲ್ವರ್ ರೇಟ್ ಇಲ್ಲಿದೆ
ಬೆಂಗಳೂರು (ಜ. 9): ದೇಶದ ಚಿನ್ನಾಭರಣ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಭಾನುವಾರ ದೇಶದ ಬಹುತೇಕ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿರೋ ಒಮಿಕ್ರಾನ್(Omicron) ಭೀತಿ, ಡಾಲರ್(Dollar) ಎದುರು ರೂಪಾಯಿ(Rupee)ಮೌಲ್ಯ, ಷೇರುಮಾರುಟ್ಟೆಯಲ್ಲಿನ (Stock Market)ಅಸ್ಥಿರತೆ , ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ(Foreign exchange Reserve) ಇಳಿಕೆಯಾಗುತ್ತಿರೋದು ಮುಂತಾದ ಬೆಳವಣಿಗೆಗಳು ಚಿನ್ನ ಹಾಗೂ ಬೆಳ್ಳಿ ದರದ ಮೇಲೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರೋದು ಖಚಿತ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದ್ರೆ ಚಿನ್ನ ಹಾಗೂ ಬೆಳ್ಳಿ ಖರೀದಿಸಿರೋ ಸ್ವಲ್ಪ ದಿನ ಕಾದು ಮುಂದುವರಿಯೋದು ಉತ್ತಮ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು (ಜ.9) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಬದಲಾವಣೆ ಆಗಿದೆ. ಶನಿವಾರ ಚಿನ್ನದ ಬೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಆದರೆ, ಭಾನುವಾರ ಈ ಬೆಲೆಯಲ್ಲಿ 10 ರೂಪಾಯಿ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44, 610 ರೂಪಾಯಿ ಆಗಿದ್ದರೆ, 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲೂ 10 ರೂಪಾಯಿ ಏರಿಕೆಯಾಗಿದ್ದು 48,660 ರೂಪಾಯಿ ಆಗಿದೆ. ಶನಿವಾರ ಒಂದು ಕೆಜಿ ಬೆಳ್ಳಿ ದರದಲ್ಲಿ 300 ರೂಪಾಯಿ ಏರಿಕೆಯಾಗಿ 60, 700 ರೂಪಾಯಿ ಆಗಿತ್ತು. ಭಾನುವಾರವೂ ಇದೇ ದರ ಮುಂದುವರಿದಿದೆ.
ದೆಹಲಿಯಲ್ಲಿ (Delhi) ಹೇಗಿದೆ?
ದೆಹಲಿಯಲ್ಲಿ ಶನಿವಾರ ಚಿನ್ನದ ದರದಲ್ಲಿ 10 ರೂಪಾಯಿ ಇಳಿಕೆಯಾಗಿತ್ತು. ಆದರೆ, ಭಾನುವಾರ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ದು, 46, 760 ರೂಪಾಯಿ ತಲುಪಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಕೂಡ 10 ರೂಪಾಯಿ ಏರಿಕೆಯಾಗಿದ್ದು, 51,010 ಆಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 60,700 ರೂಪಾಯಿ ಆಗಿದೆ.
ಮುಂಬೈನಲ್ಲಿ(Mumbai) ಎಷ್ಟಿದೆ ದರ?
ಮುಂಬೈನಲ್ಲೂ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದೆ. ಹೌದು 22 ಕ್ಯಾರಟ್ 10 ಗ್ರಾಂ ಚಿನ್ನದ ದರ, 46,610 ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 48,610 ರೂ ಆಗಿದೆ. ಇನ್ನು1 ಕೆಜಿ ಬೆಳ್ಳಿ ದರ 60,700 ರೂಪಾಯಿ ತಲುಪಿದೆ.
ಚೆನ್ನೈಯಲ್ಲಿ(Chennai) ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 10 ರೂಪಾಯಿ ಏರಿಕೆ ಕಂಡು, ಇಂದು 44,930ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 10 ರೂಪಾಯಿ ಇಳಿಕೆ ಕಂಡು 49,010 ರೂಪಾಯಿ ಆಗಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದೆ 64, 600 ರೂಪಾಯಿಯಲ್ಲಿ ಉಳಿದಿದೆ.
ದೇಶಾದ್ಯಂತ ಚಿನ್ನದ ದರದಲ್ಲಿ ಏಕರೂಪದಲ್ಲಿ ಏರಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಸ್ಥಿರವಾಗಿರುವುದು ಸಮಾಧಾನಕ್ಕೆ ಕಾರಣವಾಗಿದೆ. ಆದರೆ ಒಂದೆಡೆ ಕೋವಿಡ್ ನಿಯಮಾವಳಿಗಳು ಮತ್ತೊಂದೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಳಿತ ಗ್ರಾಹಕರ ಚಿಂತೆಗೆ ಕಾರಣವಾಗಿದೆ. ಮದುವೆ ಸಮಾರಂಭಗಳಿಗೆ ಕೋವಿಡ್ ಸೂಕ್ತ ನಿಯಮಾವಳಿಗಳು ಮಿತಿ ಹೇರಿರುವುದು ಕೂಡ ಚಿನ್ನಾಭರಣಗಳ ಮೇಲೆ ಬೇಡಿಕೆ ಮೇಲೆ ಪರಿಣಾಮ ಬೀರಿದೆ.