ಸಿಇಒ ಸ್ಯಾಲರಿ ಎಷ್ಟಿರಬೇಕು? ಇದು ನಾರಾಯಣ ಮೂರ್ತಿ ಕೊಟ್ಟ ಲೆಕ್ಕಾಚಾರ!

By Suvarna NewsFirst Published Sep 23, 2020, 3:18 PM IST
Highlights

ಕಾರ್ಪೋರೇಟ್‌ ಆಡಳಿತ ವ್ಯವಸ್ಥೆಯಲ್ಲಿ ಗಂಭೀರ ಕೊರತೆ| ಕಂಪನಿಯೊಂದರ ಸಿಇಒ ವೇತನ ಹೇಗಿರಬೇಕೆಂಬ ಕುರಿತು ನಾಋಆಯಣ ಮೂರ್ತಿ ಮಾತು| ಕಾರ್ಪೊರೇಟ್‌ ಸಂಪನ್ಮೂಲಗಳು ವ್ಯರ್ಥವಾಗದಿರುವಂತೆ, ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು

ಬೆಂಗಳೂರು(ಸೆ.23): ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಎಂದರೆ ಕನ್ನಡಿಗರಿಗೆ ವಿಶೇಷ ಅಭಿಮಾನ, ಸದ್ಯ ಇವರು ಕಂಪನಿಯೊಂದರ ಸಿಇಒ ವೇತನ ಹೇಗಿರಬೇಕೆಂಬ ಕುರಿತು ಕೆಲ ಸಲಹೆ ನೀಡಿದ್ದಾರೆ. ಇದೇ ವೇಳೆ ಕಾರ್ಪೋರೇಟ್‌ ಆಡಳಿತ ವ್ಯವಸ್ಥೆಯಲ್ಲಿ ಗಂಭೀರ ಕೊರತೆ ಕಾಣುತ್ತಿರುವ ಬಗ್ಗೆ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಆಲ್ ಇಂಡಿಯಾ ಮ್ಯಾನೇಜ್ಮೆಂಟ್‌ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣ ಮೂರ್ತಿ ಕಳೆದ ಮೂವತ್ತು ವರ್ಷದಲ್ಲಿ ಭಾರತದ ಕಾರ್ಪೋರೇಟ್‌ ಆಡಳಿತದಲ್ಲಿ ಮಹತ್ತರ ಸುಧಾರಣೆಯಾಗಿದೆ. ಆದರೆ ಕಳೆದ 5 ವರ್ಷಗಳಲ್ಲಿ ಕಾರ್ಪೋರೇಟ್‌ ಆಡಳಿತ ವ್ಯವಸ್ಥೆಯಲ್ಲಿ ಗಂಭೀರ ಕೊರತೆ ಕಾಣುತ್ತಿದೆ. ಹೀಗಾಗಿ  ಸಿಇಒ, ಆಡಳಿತ ಹಾಗೂ ನಿರ್ದೇಶಕರ ಮಂಡಳಿ ನಡುವಿನ ಹಗರಣಗಳು ಮತ್ತು ವಂಚನೆಗಳನ್ನು ಪರಿಶೀಲಿಸಲು ಮತ್ತು ವೈಯಕ್ತಿಕ ಸಂಪತ್ತನ್ನು ಪಡೆಯಲು ನ್ಯಾಯಯುತ ಸಮತೋಲನ ಇರಬೇಕು ಎಂದಿದ್ದಾರೆ.

ಕಾರ್ಪೊರೇಟ್‌ ಸಂಪನ್ಮೂಲಗಳು ವ್ಯರ್ಥವಾಗದಿರುವಂತೆ, ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಉದಾಹರಣೆಗೆ ಒಂದು ಕಂಪನಿಯಲ್ಲಿ ಕಡಿಮೆ ಸಂಬಳ ಪಡೆಯುವ ಉದ್ಯೋಗಿಯ ವೇತನ ವರ್ಷಕ್ಕೆ 2-3 ಲಕ್ಷ ರೂ.ಗಳಾಗಿದ್ದರೆ, ಸಿಇಒ ಸ್ಯಾಲರಿ 70-80 ಲಕ್ಷ ರೂ.ಗ ಪಡೆಯಬಹುದೆಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಅಲ್ಲದೇ ಸಿಇಒ ಮಂಡಳಿಗಿಂತ ಹೆಚ್ಚು ಶಕ್ತಿಶಾಲಿಯಾದಾಗ ಮತ್ತು ಅಧ್ಯಕ್ಷರು ಸಿಇಒ ಅವರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿದಾಗ, ಅಂತಹ ವಿಷಯಗಳು ಸಂಭವಿಸುತ್ತವೆ.  ಸಿಇಒ ಕಂಪನಿ ಬಿಡುವ ವೇಳೆ ಮೌನ ವಹಿಸಲು ಕಂಪನಿಗಳು ಅವರಿಗೆ ದೊಡ್ಡ ಮೊತ್ತದ ವೇತನ ನೀಡುವ ಅಭ್ಯಾಸಕ್ಕೆ ಕಡಿವಾಣ ಹಾಕಬೇಕು. ಇಂತಹ ನೈತಿಕತೆಯ ಕೊರತೆಯಿಂದಲೇ ಕಾರ್ಪೊರೇಟ್‌ ಹಗರಣಗಳು ಸಂಭವಿಸುತ್ತವೆ ಎಂದು ಎಚ್ಚರಿಸಿದ್ದಾರೆ. 

click me!