
ನವದೆಹಲಿ: ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೋಗಳಲ್ಲಿ ಮಾಡಲಾಗುವ ಬೆಟ್‌ನ ಮುಖಬೆಲೆಯ ಮೇಲೆ ಶೇ.28ರಷ್ಟು ಜಿಎಸ್ಟಿ ವಿಧಿಸುವ ನೀತಿ ಅ.1ರಿಂದ ಜಾರಿ ಮಾಡಲು ಕೇಂದ್ರ ಜಿಎಸ್ಟಿಮಂಡಳಿ ನಿರ್ಧರಿಸಿದೆ. ಬುಧವಾರ ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶೇ.28ರಷ್ಟು ಜಿಎಸ್ಟಿ ವಿಧಿಸುವ ನಿರ್ಧಾರಕ್ಕೆ ಗೋವಾ, ದೆಹಲಿ ಮತ್ತು ಸಿಕ್ಕಿಂ ರಾಜ್ಯಗಳು ವಿರೋಧ ವ್ಯಕ್ತಪಡಿಸಿದವು. ಆದರೆ ಉಳಿದ ಬಹುತೇಕ ಸದಸ್ಯರು ಬೆಂಬಲಿಸಿದ ಕಾರಣ ಹೊಸ ನೀತಿ ಜಾರಿಗೆ ನಿರ್ಧರಿಸಲಾಯಿತು. ಜೊತೆಗೆ ಈ ಸಂಬಂಧ ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲಾಗುವುದು. ಬಳಿಕ ರಾಜ್ಯಗಳು ತಮ್ಮ ವಿಧಾನಸಭೆಯಲ್ಲಿ ಈ ಕುರಿತು ಮಸೂದೆ ಮಂಡಿಸಿ ಅನುಮೋದನೆ ಪಡೆದು ರಾಜ್ಯದಲ್ಲೂ ಕಾಯ್ದೆ ಜಾರಿ ಮಾಡಲಾಗುವುದು. ತೆರಿಗೆ ಪ್ರಮಾಣದ ಬಗ್ಗೆ 6 ತಿಂಗಳ ಬಳಿಕ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಆಟವಾಡಿ ಹಣ ಗೆಲ್ಲುವವರ ಮೇಲೂ ಜಿಎಸ್‌ಟಿಗೆ ರಾಜ್ಯ ಚಿಂತನೆ
ಆನ್‌ಲೈನ್ ಗೇಮಿಂಗ್ ಸಂಸ್ಥೆಗಳ ಮೇಲೆ ಶೇ. 28 ಜಿಎಸ್‌ಟಿ ವಿಧಿಸುವುದರ ಜತೆಗೆ ಆಟವಾಡಿ ಹಣ ಗೆಲ್ಲುವವರ ಮೇಲೂ ಜಿಎಸ್‌ಟಿ ವಿಧಿಸುವ ಕುರಿತಂತೆ ಕೇಂದ್ರ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯದ ಪರವಾಗಿ ಪ್ರಸ್ತಾಪಿಸುವ ಕುರಿತು ಚಿಂತನೆ ನಡೆಸಲಾಗಿದೆ. ಆನ್‌ಲೈನ್ ಗೇಮಿಂಗ್ ಸಂಸ್ಥೆಗಳ ಮೇಲೆ ಜಿಎಸ್‌ಟಿ ವಿಧಿಸುವ ಕುರಿತಂತೆ ಅಭಿಪ್ರಾಯ ತಿಳಿಸುವ ಕುರಿತಂತೆ ಜಿಎಸ್‌ಟಿ ಕೌನ್ಸಿಲ್ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಎಸ್‌ಟಿ ಕೌನ್ಸಿಲ್ ರಾಜ್ಯ ಪ್ರತಿನಿಧಿಯೂ ಆಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ವಾಣಿಜ್ಯ ತೆರಿಗೆ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು. ಈ ವೇಳೆ ಆನ್‌ಲೈನ್ ಗೇಮಿಂಗ್ ಸಂಸ್ಥೆಗಳ ಮೇಲೆ ಶೇ.28 ಜಿಎಸ್‌ಟಿ ವಿಧಿಸುವ ಕುರಿತು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ. ಅದನ್ನು ಕಡಿಮೆ ಮಾಡಬೇಕಾ ಅಥವಾ ಅಷ್ಟೇ ಪ್ರಮಾಣದ ತೆರಿಗೆ ವಿಧಿಸಬಹುದಾ ಎಂಬ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಳಲಾಗಿದೆ. ತೆರಿಗೆ ಪ್ರಮಾಣ ಇಳಿಕೆ ಮಾಡಿದರೆ ಆನ್‌ಲೈನ್ ಗೇಮಿಂಗ್‌ಗೆ ನಾವೇ ಪ್ರೋತ್ಸಾಹ ನೀಡುವಂತಾಗಲಿದೆ. ಹೀಗಾಗಿ ತೆರಿಗೆ ಇಳಿಕೆ ಮಾಡದಂತೆ ಜಿಎಸ್‌ಟಿ ಕೌನ್ಸಿಲ್‌ಗೆ ತಿಳಿಸುವುದಾಗಿ ಕೃಷ್ಣ ಬೈರೇಗೌಡ ಹೇಳಿದರು.
ಆನ್‌ಲೈನ್ ಗೇಮ್ ಆ್ಯಪ್ ವಿರುದ್ಧ ಕೇಂದ್ರ ಕ್ರಮ ಜರುಗಿಸಲಿ: ಸಚಿವ ದಿನೇಶ್ ಗುಂಡೂರಾವ್
ಜತೆಗೆ ಆನ್‌ಲೈನ್ ಗೇಮ್‌ನಿಂದ ಮೋಸ ಹೋಗುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಅದನ್ನು ತಡೆಯಲು ಹಾಗೂ ಆನ್‌ಲೈನ್ ಗೇಮಿಂಗ್ ಕಡೆಗೆ ಜನರು ಆಕರ್ಷಿತರಾಗದಂತೆ ಮಾಡಲು, ಆಟವಾಡಿ ಹಣ ಗೆದ್ದವರಿಗೂ ಜಿಎಸ್‌ಟಿ ವಿಧಿಸಬೇಕು. ಗೆದ್ದ ಹಣಕ್ಕೆ ಶೇ.28 ಜಿಎಸ್‌ಟಿ ವಿಧಿಸದರೆ ಆನ್‌ಲೈನ್ ಗೇಮಿಂಗ್‌ನಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆ ಆಗುವ ಸಾಧ್ಯತೆಗಳಿವೆ. ಈ ಕುರಿತಂತೆಯೂ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ರಾಜ್ಯದಲ್ಲಿ ಆನ್‌ಲೈನ್ ಗೇಮ್, ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ಸಿಎಂ
ನಗರದ ಜಿ.ಪಂ.ನಲ್ಲಿ ಮಂಗಳವಾರ ದ.ಕ. ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ, ಆನ್‌ಲೈನ್ ಗೇಮ್, ಬೆಟ್ಟಿಂಗ್‌ನಿಂದಾಗಿ ಸಮಾಜ ಹಾಳಾಗುತ್ತಿದ್ದು, ಇವೆಲ್ಲವುಗಳನ್ನು ಬ್ಯಾನ್ ಮಾಡುವ ಚಿಂತನೆ ಇದೆ ಎಂದ ಅವರು, ಸೈಬರ್ ಕ್ರೈಮ್ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇಡಬೇಕು ಎಂದು ನಿರ್ದೇಶ ನೀಡಿದರು.
ಆನ್‌ಲೈನ್ ಗೇಮ್ ಚಟಕ್ಕೆ 65 ಲಕ್ಷ ರೂ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಶಿರಸಿ ಯುವಕ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.