ಕೇಂದ್ರದಿಂದ ಇನ್ನಷ್ಟು ಬ್ಯಾಂಕ್‌ಗಳ ವಿಲೀನ?

By Kannadaprabha NewsFirst Published Feb 10, 2020, 9:28 AM IST
Highlights

ಇನ್ನಷ್ಟು ಬ್ಯಾಂಕ್‌ಗಳ ವಿಲೀನ?| ಪರಿಸ್ಥಿತಿ ಬಯಸಿದರೆ ಬ್ಯಾಂಕ್‌ಗಳ ವಿಲೀನಕ್ಕೆ ಸರ್ಕಾರ ಮುಕ್ತ: ಸಚಿವ ಠಾಕೂರ್‌

ನವದೆಹಲಿರ್[ಫೆ.10]: ಸರ್ಕಾರಿ ಬ್ಯಾಂಕ್‌ಗಳ ವಿಲೀನಕ್ಕೆ ಸಮಾಜದ ವಿವಿಧ ವಲಯಗಳಿಂದ ವಿರೋಧ ಇರುವ ಹೊರತಾಗಿಯೂ, ಅಗತ್ಯ ಬಿದ್ದರೆ ಇನ್ನಷ್ಟುಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನಕ್ಕೆ ಸರ್ಕಾರ ಸಿದ್ಧ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ಸಂರ್ದಶನ ನೀಡಿರುವ ಠಾಕೂರ್‌ ‘ನಾವು ಹಲವು ಬ್ಯಾಂಕ್‌ಗಳ ವಿಲೀನ ಮತ್ತು ಮರುಬಂಡವಾಳ ಹೂಡಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ದಿವಾಳಿ ಸಂಹಿತೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ಬ್ಯಾಂಕ್‌ಗಳಿಗೆ 4 ಲಕ್ಷ ಕೋಟಿ ರು. ಮರಳುವಂತೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕೂಡಾ ಇಂಥ ಪ್ರಕ್ರಿಯೆ ಪರಿಸ್ಥಿತಿಯ ಬೇಡಿಕೆಯನ್ನು ಅವಲಂಬಿಸಿರುತ್ತದೆ’ ಎಂದು ಹೇಳಿದ್ದಾರೆ.

ಸೀತಾರಾಮನ್ ಹೊಸ ಘೋಷಣೆ: ಒಂದೊಂದಾಗಿ ಎಲ್ಲದರ ಪೋಷಣೆ!

‘ಬ್ಯಾಂಕ್‌ಗಳ ವಿಲೀನದ ಬಳಿಕ ಜಾಗತಿಕ ಮಟ್ಟದ ದೊಡ್ಡ ಬ್ಯಾಂಕ್‌ಗಳ ರಚನೆಯು, 2024-25ರ ವೇಳೆಗೆ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯಾಗಿ ಹೊರಹೊಮ್ಮುವ ಮೋದಿ ಸರ್ಕಾರದ ಕಾರ್ಯಕ್ರಮಕ್ಕೆ ನೆರವು ನೀಡಲಿದೆ. ದೊಡ್ಡ ಬ್ಯಾಂಕ್‌ಗಳು ಹೆಚ್ಚು ಜನರನ್ನು ತಲುಪುವ, ಹೆಚ್ಚು ಸಾಲ ನೀಡುವ ಸಾಮರ್ಥ್ಯ ಹೊಂದಿರುತ್ತವೆ. ಜೊತೆಗೆ ಉತ್ತಮ ಯೋಜನೆ ಮತ್ತು ಜನರಿಗೆ ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಹೊಸ ಭಾರತದ ಗ್ರಾಹಕರಿಗೆ ಅಗತ್ಯ ಸೇವೆ ನೀಡುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದು ಹೇಳಿದ್ದಾರೆ.

ಹಿಂದಿನ ಬ್ಯಾಂಕ್‌ ವಿಲೀನಗಳು

* 2017ರಲ್ಲಿ ಎಸ್‌ಬಿಐನಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲಾ, ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್‌ ಆ್ಯಂಡ್‌ ಜೈಪುರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್‌ ಆ್ಯಂಡ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದ್ರಾಬಾದ್‌ ಮತ್ತು ಮಹಿಳಾ ಬ್ಯಾಂಕ್‌.

* 2019ರಲ್ಲಿ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌

* ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ವಿಲೀನ. ಕೆನರಾ ಬ್ಯಾಂಕ್‌ನಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ವಿಲೀನ. ಇಂಡಿಯನ್‌ ಬ್ಯಾಂಕ್‌ನಲ್ಲಿ ಅಲಹಾಬಾದ್‌ ಬ್ಯಾಂಕ್‌ ವಿಲೀನ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಆಂಧ್ರ ಬ್ಯಾಂಕ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ ವಿಲೀನ.

ವಿಲೀನ ಖಂಡಿಸಿ ಸೆ.26ರಿಂದ 2 ದಿನ ಬ್ಯಾಂಕ್‌ ಸಂಘಟನೆಗಳ ಮುಷ್ಕರ!

27: 2017ರಲ್ಲಿದ್ದ ಸರ್ಕಾರಿ ಬ್ಯಾಂಕ್‌ಗಳು

12: 2020ರಲ್ಲಿ ಸರ್ಕಾರಿ ಬ್ಯಾಂಕ್‌ ಸಂಖ್ಯೆ

click me!