ಹೈಡ್ರೋಜನ್ ವಿಹಾರ ನೌಕೆ ಖರೀದಿಸಿದ ವಿಶ್ವ ಕುಬೇರ ಬಿಲ್ ಗೇಟ್ಸ್!

Suvarna News   | Asianet News
Published : Feb 09, 2020, 05:33 PM IST
ಹೈಡ್ರೋಜನ್ ವಿಹಾರ ನೌಕೆ ಖರೀದಿಸಿದ ವಿಶ್ವ ಕುಬೇರ ಬಿಲ್ ಗೇಟ್ಸ್!

ಸಾರಾಂಶ

ಬಿಲ್ ಗೇಟ್ಸ್ ಅಂಗಳ ಸೇರಿದ ಸುವಿಹಾರಿ ನೌಕೆ| ದ್ರವ ಹೈಡ್ರೋಜನ್‌ ಚಾಲಿತ ವಿಹಾರ ನೌಕೆ ಖರೀದಿಸಿದ ಗೇಟ್ಸ್| ಡಚ್ ಮೂಲದ ಸಿನೋಟ್ ಸಂಸ್ಥೆಯ ಅಕ್ವಾ ವಿಹಾರ ನೌಕೆ| ಬರೋಬ್ಬರಿ 500 ಮಿಲಿಯನ್ ಪೌಂಡ್ ಬೆಲೆಯ ಅಕ್ವಾ ಸೂಪರ್‌ಯಾಚ್‌| ಪರಿಸರ ಸ್ನೇಹಿ ಅಕ್ವಾ ವಿಹಾರ ನೌಕೆಗೆ ಬಿಲ್ ಗೇಟ್ಸ್ ಮಾಲೀಕ|

ವಾಷಿಂಗ್ಟನ್(ಫೆ.09): ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್,  ದ್ರವ ಹೈಡ್ರೋಜನ್‌ ಚಾಲಿತ ವಿಹಾರ ನೌಕೆಯೊಂದನ್ನು ಖರೀದಿಸಿದ್ದಾರೆ.

ತಮ್ಮ ಪರಿಸರ ಸ್ನೇಹಿ ಉಪಕ್ರಮದ ಭಾಗವಾಗಿ ದ್ರವ ಹೈಡ್ರೋಜನ್‌ ಚಾಲಿತ ವಿಹಾರ ನೌಕೆ ಖರೀದಿಸಿರುವ ಬಿಲ್ ಗೇಟ್ಸ್, ಈ ವಿಹಾರ ನೌಕೆ ಖರೀದಿಸಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಧಾರ್‌ ಹೊಂದಿರುವುದಕ್ಕೆ ಭಾರತ ಹೆಮ್ಮೆಪಡಬೇಕು: ಬಿಲ್ ಗೇಟ್ಸ್

ಡಚ್ ಮೂಲದ ಸಿನೋಟ್ ನೌಕಾ ತಯಾರಿಕಾ ಕಂಪನಿ ತಯಾರಿಸಿರುವ ಪರಿಸರ ಸ್ನೇಹಿ ಅಕ್ವಾ ಸೂಪರ್‌ಯಾಚ್‌ ಖರೀದಿಸುವ ಮೂಲಕ ಬಿಲ್ ಗೇಟ್ಸ್ ಗಮನ ಸೆಳೆದಿದ್ದಾರೆ.

ಸಿನೋಟ್ ಸಂಪೂರ್ಣವಾಗಿ ಹೈಡ್ರೋಜನ್‌ನಿಂದ ಚಲಿಸುವ ವಿಹಾರ ನೌಕೆಯನ್ನು ನಿರ್ಮಿಸುವುದರಲ್ಲಿ ಸಿದ್ಧ ಹಸ್ತ ಸಂಸ್ಥೆಯಾಗಿದೆ. ಕೇವಲ ನೀರನ್ನು ಹೊರಸೂಸಿ ಚಲಿಸುವ ಈ ವಿಹಾರ ನೌಕೆ, ಬರೋಬ್ಬರಿ 3,750 ನಾಟಿಕಲ್ ಮೈಲುಗಳ ದೂರವನ್ನು ಕ್ರಮಿಸಬಹುದಾಗಿದೆ. 

ಲ್ಯಾಟರಲ್ ನೇವಲ್ ಆರ್ಕಿಟೆಕ್ಟ್ಸ್ ಸಹಯೋಗದೊಂದಿಗೆ ರಚಿಸಲಾದ ಈ ವಿಹಾರ ನೌಕೆ, ಒಟ್ಟು 112 ಮೀಟರ್ ಉದ್ದವಿದೆ. ಇಂಧನ ಕೋಶಗಳಿಗೆ ವಿದ್ಯುತ್ ಶಕ್ತಿಯನ್ನು ಒದಗಿಸುವ ದ್ರವ ಹೈಡ್ರೋಜನ್‌ನಿಂದ ಈ ವಿಹಾರ ನೌಕೆ ಚಲಿಸುತ್ತದೆ.

ಹಾರ್ಸ್ ರೈಡರ್ ಜೊತೆ ಮದುವೆ ಆಗ್ತಿನಿ ಎಂದ ಮಗಳು: ಬಿಲ್ ಗೇಟ್ಸ್ ರೆಸ್ಪಾನ್ಸ್?

ಅಂದಹಾಗೆ ಅಕ್ವಾ ಸೂಪರ್‌ಯಾಚ್‌ ಬೆಲೆ 500 ಮಿಲಿಯನ್ ಪೌಂಡ್(46,10,10,01,500 ರೂ.) ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!