ಕೇಂದ್ರ ನೌಕರರಿಗೆ ಗುಡ್‌ ನ್ಯೂಸ್‌: ಡಿಎ ಹೆಚ್ಚಳದ ಬಂಪರ್?

Published : Mar 21, 2021, 02:47 PM IST
ಕೇಂದ್ರ ನೌಕರರಿಗೆ ಗುಡ್‌ ನ್ಯೂಸ್‌: ಡಿಎ ಹೆಚ್ಚಳದ ಬಂಪರ್?

ಸಾರಾಂಶ

: ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಹೆಚ್ಚಿಸಿ ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡುವ ಸಾಧ್ಯತೆ | ಕೊರೋನಾ ವೈರಸ್‌ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ

ನವದೆಹಲಿ(ಮಾ.21): ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಹೆಚ್ಚಿಸಿ ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡುವ ಸಾಧ್ಯತೆ ಇದೆ. ಕೊರೋನಾ ವೈರಸ್‌ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಜು.1ರಿಂದ ನೀಡಲಾಗುತ್ತದೆ ಎಂದು ಘೋಷಿಸಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.

ಕೇಂದ್ರದ ಉದ್ಯೋಗಿಗಳು ಈವರೆಗೆ ಶೇ.17ರಷ್ಟುತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಕೊರೋನಾ ಕಾರಣ ಅವರಿಗೆ 2020ರ ಜ.1, ಜು.1 ಹಾಗೂ 2021ರ ಜ.1ರ ಡಿಎ ಕಂತು ಬಿಡುಗಡೆ ಆಗಿರಲಿಲ್ಲ. ಆದರೆ ಈಗ ಒಮ್ಮೆಲೇ ಜುಲೈ 1ರಂದು ತಡೆ ಹಿಡಿದ 3 ಕಂತು ಸೇರಿ ಒಟ್ಟು 4 ಕಂತಿನ ಡಿಎ (17 + 3 + 4 + 4) ಬಿಡುಗಡೆ ಆಗಲಿದ್ದು, ಇದರಿಂದಾಗಿ ಶೇ.28ರಷ್ಟುಡಿಎ ಪಡೆದಂತಾಗುತ್ತದೆ.

7 ನೇ ವೇತನ ಆಯೋಗದ (ಸಿಪಿಸಿ) ಪ್ರಕಾರ ಉದ್ಯೋಗಿಯೊಬ್ಬರು 21,000 ಮೂಲ ವೇತನ ಪಡೆಯುತ್ತಿದ್ದರೆ, 7ನೇ ಸಿಪಿಸಿ ವೇತನ 52,970 ರು. (21000*2.57) ಆಗಲಿದೆ. ಜೊತೆಗೆ 7ನೇ ವೇತನ ಆಯೋಗದ ತುಟ್ಟಿಭತ್ಯೆ, ಎಚ್‌ಆರ್‌ಎ ಹಾಗೂ ಪ್ರಯಾಣ ಭತ್ಯೆ ಸೌಲಭ್ಯಕ್ಕೂ ಅರ್ಹರಾಗುತ್ತಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಷೇರು ಮಾರುಕಟ್ಟೆಯಲ್ಲಿ ನಾಳೆಯೂ ರಕ್ತದೋಕುಳಿ ಮುಂದುವರೆಯುತ್ತಾ? ಮಾರುಕಟ್ಟೆ ತಜ್ಞರು ಏನಂತಾರೆ?
ವೀಳ್ಯದೆಲೆ ಬೆಲೆ ಗಗನಕ್ಕೆ ಏರಿಕೆ, ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ 200ರ ಗಡಿ ದಾಟಿದ ಪಾನ್ ಎಲೆ!