ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌: ತುಟ್ಟಿಭತ್ಯೆ ಶೇ. 28ರಷ್ಟು ಹೆಚ್ಚಳ!

Published : Jul 14, 2021, 04:38 PM IST
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌: ತುಟ್ಟಿಭತ್ಯೆ ಶೇ. 28ರಷ್ಟು ಹೆಚ್ಚಳ!

ಸಾರಾಂಶ

* ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, ಜುಲೈ 1ರಿಂದಲೇ ಅನ್ವಯ * ತುಟ್ಟಿಭತ್ಯೆ ಶೇ 17ರಿಂದ ಶೇ 28ಕ್ಕೇ ಏರಿಕೆ  * ಕೇಂದ್ರ ನೌಕರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ (ಡಿ.ಎ) ಹೆಚ್ಚಿಸಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಣೆ

ನವದೆಹಲಿ(ಜು.14): ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದ 1.2 ಕೋಟಿಗೂ ಹೆಚ್ಚು ಕೇಂದ್ರ ನೌಕರರಿಗೆ ಸರ್ಕಾರ ಕೊನೆಗೂ ಶುಭ ಸಮಾಚಾರ ನೀಡಿದೆ. ಹೌದು ಕೇಂದ್ರ ನೌಕರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ (ಡಿ.ಎ) ಹೆಚ್ಚಿಸಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. 

ಶೇ 4ರಷ್ಟು ಡಿಎ ಹೆಚ್ಚಳಕ್ಕೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ತುಟ್ಟಿಭತ್ಯೆ ಶೇ 17ರಿಂದ ಶೇ 28ಕ್ಕೇರಿಕೆಯಾಗಿದೆ. 2021ರ ಜುಲೈ 1ರಿಂದಲೇ ತುಟ್ಟಿಭತ್ಯೆ ಹೆಚ್ಚಳ ಅನ್ವಯವಾಗಲಿದೆ. 2020ರ ಜನವರಿ 1 (4%), 2020ರ ಜುಲೈ 1ರಂದು (3%) ಹಾಗೂ 2021ರ ಜನವರಿ 1ರಂದು (4%) ಗೆ ಮೂರು ಬಾರಿ ಏರಿಕೆಯಾಗಿ ಶೇ 25ಕ್ಕೇರಿದೆ. 2021ರ ಸೆಪ್ಟೆಂಬರ್ 1ರಂದು ಪರಿಷ್ಕರಣೆಗೊಳ್ಳಲಿದೆ. 

ಕೇಂದ್ರದ ಬೊಕ್ಕಸಕ್ಕೆ ಹೊರೆ

ಡಿಎ ಹೆಚ್ಚಳ ಘೋಷಣೆ ಮಾಡಿದರೆ, ಕೇಂದ್ರ ಬೊಕ್ಕಸಕ್ಕೆ 12,150 ಕೋಟಿ ರು ಹೆಚ್ಚುವರಿ ಹೊರೆ ಬೀಳಲಿದೆ. 2020-21ರ ಹಣಕಾಸು ವರ್ಷದಲ್ಲಿ ಇದು 14,595 ಕೋಟಿ ರು ನಷ್ಟಿತ್ತು. ಆದರೆ ಡಿಎ ಹೆಚ್ಚಳದಿಂದಾಗಿ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65.26 ಲಕ್ಷ ಪಿಂಚಣಿದಾರರಿಗೆ ನೆರವು ಲಭಿಸಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ