ವಾಲಂಟೈನ್ಸ್ ಡೇಗೆ ಜೋಯಲುಕ್ಕಾಸ್ ಆಕರ್ಷಕ ಆಫರ್, 1 ಗ್ರಾಂ ಚಿನ್ನದ ನಾಣ್ಯ ಫ್ರೀ!

Published : Feb 09, 2021, 02:55 PM ISTUpdated : Feb 13, 2021, 01:00 PM IST
ವಾಲಂಟೈನ್ಸ್ ಡೇಗೆ ಜೋಯಲುಕ್ಕಾಸ್ ಆಕರ್ಷಕ ಆಫರ್, 1 ಗ್ರಾಂ ಚಿನ್ನದ ನಾಣ್ಯ ಫ್ರೀ!

ಸಾರಾಂಶ

ಪ್ರೇಮಿಗಳ ದಿನದ ಪ್ರಯುಕ್ತ ಆಕರ್ಷಕ ಗಿಫ್ಟ್ಸ್‌| ವ್ಯಾಲಂಟೈನ್ಸ್ ಡೇ ಪ್ರಯುಕ್ತ ಜೋಯಲುಕ್ಕಾಸ್ Be Mine Heart to Heart ಎಂಬ ವಿನೂತನ ಕಲೆಕ್ಷನ್ ಬಿಡುಗಡೆ| ಗ್ರಾಹಕರಿಗೆ ಒಂದು ಗ್ರಾಂ ಚಿನ್ನದ ನಾಣ್ಯ ಉಚಿತ

ಬೆಂಗಳೂರು(ಫೆ.09): ಪ್ರೇಮಿಗಳ ದಿನಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಹೀಗಿರುವಾಗ ತಮ್ಮ ಸಂಗಾತಿಗೆ ಗಿಫ್ಟ್ ಏನು ಕೊಡಬೇಕೆಂಬ ಲೆಕ್ಕಾಚಾರ ಪ್ರೇಮಿಗಳ ಮನದಲ್ಲಿ ಈಗಾಗಲೇ ಆರಂಭವಾಗಿದೆ. ಹೀಗಿರುವಾಗ ವ್ಯಾಲಂಟೈನ್ಸ್ ಡೇ ಪ್ರಯುಕ್ತ ಜೋಯಲುಕ್ಕಾಸ್ Be Mine Heart to Heart ಎಂಬ ವಿನೂತನ ಕಲೆಕ್ಷನ್ ಹೊರ ತಂದಿದೆ. ಅಷ್ಟಕ್ಕೂ ಇದರ ವಿಶೇಷತೆ ಏನು? ಇಲ್ಲಿದೆ ನೋಡಿ ವಿವರ

ಹೌದು ಪ್ರೇಮಿಗಳ ದಿನದ ಪ್ರಯುಕ್ತ ನಿಮ್ಮ ಪ್ರೀತಿಯ ಸಂಗಾತಿಗೆ ಅವರಷ್ಟೇ ವಿಶೇಷವಾದ ಗಿಫ್ಟ್ ನಿಡುವ ಸಲುವಾಗಿ ಜೋಯಲುಕ್ಕಾಸ್ ಹಾರ್ಟ್‌ ಥೀಮ್‌ನ ಜ್ಯುವೆಲ್ಲರಿಗಳನ್ನು ಬಿಡುಗಡೆಗೊಳಿಸಿದೆ. ಪೆಂಡೆಂಟ್, ಉಂಗುರ, ಕಿವಿಯೋಲೆ ಹಾಗೂ ಬ್ರೆಸ್‌ಲೆಟ್ ಹೀಗೆ ಎಲ್ಲವೂ ಹಾರ್ಟ್‌ ಥೀಮ್‌ನಲ್ಲಿರಲಿದೆ. ಲಿಮಿಟೆಡ್ ಎಡಿಷನ್‌ ಕಲೆಕ್ಷನ್ ಇದಾಗಿದೆ. ಈ ಜ್ಯುವೆಲ್ಲರಿ ವಜ್ರ ಹಾಗೂ ಚಿನ್ನ ಈ ಎರಡರಲ್ಲೂ ಲಭ್ಯವಿರಲಿವೆ. 

ಸೃಜನಶೀಲತೆ ಮತ್ತು ಕರಕುಶಲತೆಯ ಬೆಸುಗೆಯಲ್ಲಿ ಮೂಡಿ ಬಂದಿರುವ 2021ರ ಈ ಕಲೆಕ್ಷನ್, ಆಧುನಿಕ, ವಿನೂತನ ಹಾಗೂ ಆಕರ್ಷಣೀಯವಾಗಿದೆ. ಸುಂದರ ಹಾಗೂ ಸೊಗಸಾದ ಶೈಲಿಯ ಈ ಆಭರಣಗಳು ಎಲ್ಲಾ ಸಂದರ್ಭಕ್ಕೂ ಹೊಂದಿಕೊಳ್ಳುತ್ತದೆ. ಇದನ್ನು ಮತ್ತಷ್ಟು ವಿಶೇಷವಾಗಿಸಲು ಜೋಯಲುಕ್ಕಾಸ್ ಪ್ರತೀ ಖರೀದಿಗೆ ಆಕರ್ಷಕ ಆಫರ್ ಘೋಷಿಸಿದೆ. ಈ ಮೂಲಕ ಗ್ರಾಹಕರು ಉಚಿತ ಚಿನ್ನದ ನಾಣ್ಯ ಹಾಗೂ  ಅತ್ಯಾಕರ್ಷಕ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಜೋಯಲುಕ್ಕಾಸ್‌ನ ಗ್ರೂಪ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಜೋಯ್ ಅಲುಕಾಸ್ ಈ ವಿನೂತನ ಕಲೆಕ್ಷನ್ ಬಿಡುಗಡೆಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು 'ಕಳೆದ ವರ್ಷ ನಮ್ಮ ಪ್ರೀತಿಪಾತ್ರರ ಅಗತ್ಯ ಹಾಗೂ ಮಹತ್ವ ಏನು ಎಂಬುವುದು ನಾವೆಲ್ಲರೂ ಕಂಡುಕೊಂಡಿದ್ದೇವೆ. ಆ ಕಷ್ಟದ ಸಂದರ್ಭದಲ್ಲಿ ಭಯಪಡದೇ ಮುನ್ನಡೆಯುವಂತೆ ಮಾಡಿದ್ದು ನಮ್ಮವರ ಪ್ರೀತಿ. ಹೀಗಿರುವಾಗ ಆ ಪ್ರೀತಿಯನ್ನು ಆಕೆಯ ಹೃದಯ ಗೆಲ್ಲುವ ಕೊಡುಗೆ ಜೊತೆ ಮರುಕಳಿಸುವ ಸಮಯ ಬಂದಿದೆ. ಹೀಗಿರುವಾಗ ನೀವೆಲ್ಲರೂ ನಮ್ಮ Be Mine Heart to Heart 2021 ಕಲೆಕ್ಷನ್ ನೋಡಿ, ಇವುಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಕೊಡುಗೆಯಾಗಿ ನೀಡಿ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಿ. ನಿಮಗೆಲ್ಲರಿಗೂ ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು' ಎಂದಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌