ನೇರ ತೆರಿಗೆ ಸಂಗ್ರಹ ಭಾರಿ ಕುಸಿತ: ಪತ್ರಗಳ ಮೇಲೆ ಪತ್ರಗಳ ನೆಗೆತ!

By Web DeskFirst Published Mar 29, 2019, 12:42 PM IST
Highlights

ನೇರ ತೆರಿಗೆ ಸಂಗ್ರಹ ನಿಗದಿತ ಗುರಿ ತಲುಪಲು ಆದಾಯ ತೆರಿಗೆ ವಿಫಲ| 2018-19ರಲ್ಲಿ ನಿಗದಿತ ಗುರಿಯ ಶೇ.85.1ರಷ್ಟುಮಾತ್ರ ಆದಾಯ ತೆರಿಗೆ ಸಂಗ್ರಹ| ಸಿಬಿಡಿಟಿ ಆತಂಕಕ್ಕೆ ಕಾರಣವಾದ ತೆರಿಗೆ ಸಂಗ್ರಹ ಮಟ್ಟ ಕುಸಿತ| ತೆರಿಗೆ ಸಂಗ್ರಹಕ್ಕೆ ದೊಡ್ಡ ಮಟ್ಟದ ಆಂದೋಲನ ಆರಂಭಿಸಲು ಆದಾಯ ತೆರಿಗೆ ಇಲಾಖೆ ಸೂಚನೆ| ಎಲ್ಲಾ ಪ್ರಾದೇಶಿಕ ತೆರಿಗೆ ಮುಖ್ಯಸ್ಥರಿಗೆ ಸಿಬಿಡಿಟಿ ಪತ್ರ|

ನವದೆಹಲಿ(ಮಾ.29): ನೇರ ತೆರಿಗೆ ಸಂಗ್ರಹ ನಿಗದಿತ ಗುರಿ ತಲುಪಲು ವಿಫಲವಾಗಿದೆ. 2018-19ನೇ ಸಾಲಿನಲ್ಲಿ ನಿಗದಿತ ಗುರಿಯ ಶೇ.85.1ರಷ್ಟುಮಾತ್ರ ಆದಾಯ ತೆರಿಗೆ ಸಂಗ್ರಹವಾಗಿದೆ.

ಇದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆತಂಕಕ್ಕೆ ಕಾರಣವಾಗಿದ್ದು, ತೆರಿಗೆ ಸಂಗ್ರಹಕ್ಕೆ ದೊಡ್ಡ ಮಟ್ಟದ ಆಂದೋಲನ ಆರಂಭಿಸುವಂತೆ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ.

ಬಜೆಟ್ ನಲ್ಲಿ 12 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ ಮಾರ್ಚ್ 23ರ ವೇಳೆಗೆ 10,21,251 ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹವಾಗಿದೆ. ಅಂದರೆ ನೇರ ತೆರಿಗೆ ಸಂಗ್ರಹವು ಕೇವಲ ಶೇ.85.1ರಷ್ಟಾಗಿದೆ.

ಈ ಹಿನ್ನೆಲೆಯಲ್ಲಿ ಎಲ್ಲ ಪ್ರಾದೇಶಿಕ ತೆರಿಗೆ ಮುಖ್ಯಸ್ಥರಿಗೆ ಸಿಬಿಡಿಟಿ ಪತ್ರ ಬರೆದಿದ್ದು, ತೆರಿಗೆ ಸಂಗ್ರಹ ಚುರುಕುಗೊಳಿಸಲು ಸೂಚಿಸಿದೆ ಎಂಧು ಮೂಲಗಳು ತಿಳಿಸಿವೆ.

click me!